ಸಾಕಷ್ಟು ಉತ್ತಮವಾಗಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ Z ಫೋಲ್ಡ್ 5 ಮತ್ತು ಸ್ಯಾಮ್ಸಂಗ್ ಗ್ಯಾಲಕ್ಸಿ Z ಫ್ಲಿಪ್ 5 ಈ ಎರಡೂ ಫೋನುಗಳು ಆಗಸ್ಟ್ 18 ರಂದು ದೇಶದಲ್ಲಿ ಮೊದಲು ಬಿಡುಗಡೆ ಆಗಲಿದೆ. ಈ ಬಗ್ಗೆ ಕಂಪನಿ ಅಧಿಕೃತವಾಗಿ ಮಾಹಿತಿ ನೀಡಿದ್ದು, ಈಗಾಗಲೇ ಸ್ಮಾರ್ಟ್ಫೋನ್ಗಳು ಮುಂಗಡ ಬುಕ್ಕಿಂಗ್ಗೆ ಕೂಡ ಲಭ್ಯವಿದೆ ಎಂದು ಈ ಕಂಪನಿ ಹೇಳಿಕೊಂಡಿದೆ.
ದಕ್ಷಿಣ ಕೊರಿಯಾ ಮೂಲದ ಪ್ರಸಿದ್ಧ ಕಂಪನಿಯಾಗಿರುವ ಸ್ಯಾಮ್ಸಂಗ್ ಕಂಪನಿಯು ಕಳೆದ ತಿಂಗಳು ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಅನ್ಪ್ಯಾಕ್ಡ್ ಈವರೆಂಟ್ನಲ್ಲಿ ಬಹುನಿರೀಕ್ಷಿತ ಸ್ಯಾಮ್ಸಂಗ್ ಗ್ಯಾಲಕ್ಸಿ Z ಫೋಲ್ಡ್ 5 ಮತ್ತು ಸ್ಯಾಮ್ಸಂಗ್ ಗ್ಯಾಲಕ್ಸಿ Z ಫ್ಲಿಪ್ 5 ಎಂಬ ಎರಡು ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಿತ್ತು.
Z Flip 5 ಮತ್ತು Z Fold 5 ದಾಖಲೆಯ ಮುಂಗಡ-ಬುಕಿಂಗ್ ಅನ್ನು ಈಗಾಗಲೇ ಪಡೆದುಕೊ ಕೊಳ್ಳುತ್ತಿದೆ. ಮೊದಲ 28 ಗಂಟೆಗಳಲ್ಲಿ, 100,000 ಕ್ಕೂ ಹೆಚ್ಚು ಗ್ರಾಹಕರು ಭಾರತದಲ್ಲಿ ಈ ಫೋನನ್ನು ಮುಂಗಡವಾಗಿ ಬುಕ್ ಮಾಡಿದ್ದಾರೆ.
ಗ್ಯಾಲಕ್ಸಿ Z Flip 5 ಫೋನಿನ ಆರಂಭಿಕ 8GB RAM + 256GB ಸ್ಟೋರೇಜ್ ಆಯ್ಕೆಗೆ 99,999 ರೂ. ನಿಗದಿ ಮಾಡಲಾಗಿದೆ. ಹಾಗೆಯೇ ಗ್ಯಾಲಕ್ಸಿ Z Fold 5 ನ 12GB RAM + 256GB ಸ್ಟೋರೇಜ್ ಸಾಮರ್ಥ್ಯಕ್ಕೆ 1,54,999 ರೂ. ಇದೆ ಎಂದು ಕಂಪನಿ ತಿಳಿಸಿದೆ. ಗ್ಯಾಲಕ್ಸಿ Z Flip5 ಅನ್ನು ಮುಂಗಡ ಬುಕ್ ಮಾಡುವ ಗ್ರಾಹಕರು 20,000 ರೂ. ಮೌಲ್ಯದ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಅದೇ ಗ್ಯಾಲಕ್ಸಿ Z Fold 5 ಅನ್ನು ಮುಂಗಡವಾಗಿ ಬುಕ್ ಮಾಡುವವರು 23000 ರೂ. ಮೌಲ್ಯದ ಪ್ರಯೋಜನಗಳನ್ನು ಪಡೆಯುವ ಅವಕಾಶ ಸಿಗುತ್ತದೆ.
ಡಿಸ್ ಪ್ಲೇ: Z ಫೋಲ್ಡ್ 5 7.6-ಇಂಚಿನ QXGA+ AMOLED ಒಳಗಿನ ಡಿಸ್ ಪ್ಪೇ ಜೊತೆಗೆ 6.2-ಇಂಚಿನ ಕವರ್ ಡಿಸ್ ಪ್ಲೇಯನ್ನು ಹೊಂದಿದೆ. ಫ್ಲಿಪ್ ಫೋನ್ 6.7-ಇಂಚಿನ ಪೂರ್ಣ-HD+ ಒಳಗಿನ AMOLED 120Hz ಡಿಸ್ ಪ್ಲೇ ಮತ್ತು 3.4-ಇಂಚಿನ AMOLED ಹೊರ 60Hz ಡಿಸ್ ಪ್ಲೇ ನೀಡಲಾಗಿದೆ.ಚಿಪ್ಸೆಟ್,
ಬ್ಯಾಟರಿ: ಈ ಸ್ಮಾರ್ಟ್ಫೋನ್ಗಳು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8 ಜೆನ್ 2 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತದೆ. ಈ ಫೋಲ್ಡಬಲ್ ಫೋನ್ಗಳು ಇತ್ತೀಚಿನ ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್ನೊಂದಿಗೆ ರನ್ ಆಗುತ್ತದೆ. ಗ್ಯಾಲಕ್ಸಿ Z ಫೋಲ್ಡ್ 5 4,400mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಮತ್ತು ಗ್ಯಾಲಕ್ಸಿ Z ಫ್ಲಿಪ್ 5 ಫೋನ್ 3,700mAh ಬ್ಯಾಟರಿ ಆಯ್ಕೆ ಇದೆ.
ಗ್ಯಾಲಕ್ಸಿ Z ಫ್ಲಿಪ್ 5 12-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಪ್ರೈಮರಿ ಸೆನ್ಸಾರ್ ಜೊತೆಗೆ OIS ಬೆಂಬಲದೊಂದಿಗೆ 12-ಮೆಗಾಪಿಕ್ಸೆಲ್ ವೈಡ್-ಆಂಗಲ್ ಕ್ಯಾಮೆರಾವನ್ನು ಒಳಗೊಂಡಿದೆ. ಇದು ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ನೊಂದಿಗೆ ಬರಲಿದೆ. ಗ್ಯಾಲಕ್ಸಿ Z Fold 5 ಹಿಂಬದಿ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು 50-ಮೆಗಾಪಿಕ್ಸೆಲ್ ವೈಡ್-ಆಂಗಲ್ ಕ್ಯಾಮೆರಾ, 12-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಮತ್ತು 10-ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾವನ್ನು ಒಳಗೊಂಡಿದೆ. ಮುಂಭಾಗದ ಕ್ಯಾಮೆರಾ 10-ಮೆಗಾಪಿಕ್ಸೆಲ್ನಲ್ಲಿದೆ. ಒಟ್ಟಿನಲ್ಲಿ ಈ ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ತುಂಬಾ ವಿಶೇಷವಾಗಿದೆ.