ಗೂಗಲ್ ಕ್ರೋಮ್ ನಲ್ಲಿ ಸಾಮಾನ್ಯವಾಗಿ ಎಲ್ಲರೂ ಕೂಡ ಕೆಲವೊಂದು ವೆಬ್ಸೈಟ್ಗೆ ಭೇಟಿ ನೀಡುವುದು ಸಹಜ. ತಮ್ಮಿಷ್ಟದ ನಾನಾ ವೆಬ್ಸೈಟ್ಗಳತ್ತ ಎಲ್ಲರೂ ದಿನಾಲೂ ಕಣ್ಣಾಡಿಸುತ್ತಾರೆ. ನಮ್ಮ ವೆಬ್ ಬ್ರೌಸರ್ಗಳು ನಮ್ಮ ಹಿಸ್ಟರಿ ಮತ್ತು ನಾವು ಭೇಟಿ ನೀಡಿದ ವೆಬ್ಸೈಟ್ಗಳನ್ನು ಟ್ರ್ಯಾಕ್ ಮಾಡುತ್ತವೆ. ಜತೆಗೆ ಬಳಕೆದಾರರಿಗೆ ತಮ್ಮ ಅಗತ್ಯದ ವೆಬ್ಸೈಟ್ಗಳಿಗೆ ಭೇಟಿ ನೀಡಲು ಸುಲಭವಾಗಿಸುವ ಸಲುವಾಗಿ ಬುಕ್ಮಾರ್ಕ್ನ ಅವಕಾಶವನ್ನೂ ಇಲ್ಲಿರುತ್ತದೆ.
ಕೆಲವೊಂದು ಸಲ ನಿಮ್ಮ ಬುಕ್ಮಾರ್ಕ್ಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಕಾಗಿಯೂ ಬರಬಹುದು. ನಮ್ಮ ಬ್ರೌಸರ್ನಲ್ಲಿ ಬುಕ್ ಮಾರ್ಕ್ಗಳನ್ನು ಮಾಡುವುದು ಸುಲಭದ ಕೆಲಸ. ಆದರೆ, ಅದನ್ನು ಎಕ್ಸ್ಪೋರ್ಟ್ ಅಥವಾ ಇತರರೊಂದಿಗೆ ಹಂಚಿಕೊಳ್ಳುವ ಪ್ರಕ್ರಿಯೆ ಎಲ್ಲರಿಗೂ ತಿಳಿದಿರುವುದಿಲ್ಲ. ಇಲ್ಲಿ ಬುಕ್ಮಾರ್ಕ್ನ್ನು ಹೇಗೆ ಎಕ್ಸ್ಪೋರ್ಟ್ ಮಾಡುವುದು ಎಂಬ ಮಾಹಿತಿಯನ್ನು ನೀಡಲಾಗಿದೆ.
ಬುಕ್ಮಾರ್ಕ್ ಎಕ್ಸ್ಪೋರ್ಟ್ ಮಾಡುವ ವಿಧಾನ:
* ಮೊದಲು ಗೂಗಲ್ ಕ್ರೋಮ್ ತೆರೆಯಿರಿ.
*ಮೇಲಿನ ಬಲ ಮೂಲೆಯಲ್ಲಿರುವ ಮೂರು ಡಾಟ್ ಅಥವಾ ಚುಕ್ಕಿಯ ಮೆನುವಿನ ಮೇಲೆ ಕ್ಲಿಕ್ ಮಾಡಿ.
`
*ಬುಕ್ಮಾರ್ಕ್ಗಳು’ ಎಂಬ ಆಯ್ಕೆಯ ಮೇಲೆ ಮೌಸ್ ಇಡಿ ಮತ್ತು ಅಲ್ಲಿ ಕಾಣುವ `ಬುಕ್ಮಾರ್ಕ್ ಮ್ಯಾನೇಜರ್’ ಆಯ್ಕೆಯನ್ನು ಒತ್ತಿ.
*ಆಗ ಬುಕ್ಮಾರ್ಕ್ ಮ್ಯಾನೇಜರ್ ತೆರೆದುಕೊಳ್ಳುತ್ತದೆ. ನಂತರ ಮೇಲಿನ ಬಲ ಮೂಲೆಯಲ್ಲಿರುವ ಮೂರು ಚುಕ್ಕಿಗಳನ್ನು ಕ್ಲಿಕ್ ಮಾಡಿ.
* ಮೆನುವಿನಲ್ಲಿ ನಿಮಗೆ `ಎಕ್ಸ್ಪೋರ್ಟ್ ಬುಕ್ಮಾರ್ಕ್’ ಆಯ್ಕೆ ಕಾಣುತ್ತದೆ. ಈ ಆಯ್ಕೆಯನ್ನು ಒತ್ತಿದಾಗ ನಿಮ್ಮ ಬುಕ್ಮಾರ್ಕ್ನ ಹೆಚ್ಟಿಎಂಎಲ್ ಡಾಕ್ಯುಮೆಂಟ್ ಸೇವ್ ಮಾಡುವ ಆಪ್ಶನ್ ಕಾಣಿಸುತ್ತದೆ. ಇಲ್ಲಿ ನಿಮ್ಮ ಫೈಲ್ಗೆ ಹೆಸರು ನೀಡಿ ಸೇವ್ ಮಾಡಬಹುದು.
*ನಂತರ ಇನ್ನೊಂದು ಬ್ರೌಸರ್ ತೆರೆಯಿರಿ ಮತ್ತು ಬಲ ಮೂಲೆಯ ಮೇಲೆ ಕಾಣಿಸಿಕೊಳ್ಳುವ ಮೂರು ಚುಕ್ಕೆಯ ಆಯ್ಕೆಯಲ್ಲಿ `ಇಮ್ಪೋರ್ಟ್ ಬುಕ್ಮಾರ್ಕ್’ ಆಯ್ಕೆಯನ್ನು ಕ್ಲಿಕ್ ಮಾಡಿ.