ನವದೆಹಲಿ: ಕಳೆದ ಶುಕ್ರವಾರ, ಜುಲೈ 7 ರಂದು, ನೋಯ್ಡಾ ಪೊಲೀಸರು ಬಂಧಿಸಿದ್ದ ಪಾಕಿಸ್ತಾನಿ ಮಹಿಳೆ ಮತ್ತು ಆಕೆಯ ಭಾರತೀಯ ಪ್ರೇಮಿಗೆ ನ್ಯಾಯಾಲಯ ಜಾಮೀನು ನೀಡಿದೆ. ಪಾಕ್ ಪ್ರಜೆ ಸೀಮಾ ಹೈದರ್ ಮತ್ತು ಆಕೆಯ ಸಂಗಾತಿ ಸಚಿನ್ ಮೀನಾ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಇಬ್ಬರೂ 2019 ರಲ್ಲಿ PUBG ಮೊಬೈಲ್ ಗೇಮಿಂಗ್ ಅಪ್ಲಿಕೇಶನ್ ಮೂಲಕ ಸಂಪರ್ಕಕ್ಕೆ ಬಂದು ಪರಸ್ಪರ ಪ್ರೀತಿಸುತ್ತಿದ್ದರು. ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ ಆರೋಪದಲ್ಲಿ ಸೀಮಾ ವಿರುದ್ಧ ಪ್ರಕರಣ ದಾಖಲಾಗಿದೆ. ಸಚಿನ್ ಅಕ್ರಮ ವಲಸಿಗ ಮತ್ತು ಆಕೆಯ ಮಕ್ಕಳಿಗೆ ಆಶ್ರಯ ನೀಡಿದ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಆಜ್ತಕ್ನೊಂದಿಗೆ ಮಾತನಾಡಿದ ಸೀಮಾ ಹೈದರ್, ನಾನು ಸಚಿನ್ನನ್ನು ತುಂಬಾ ಪ್ರೀತಿಸುತ್ತೇನೆ ಮತ್ತು ತನ್ನ ನಾಲ್ಕು ಮಕ್ಕಳೊಂದಿಗೆ ಭಾರತದಲ್ಲಿ ಅವನೊಂದಿಗೆ ಇರಲು ಬಯಸುತ್ತೇನೆ ಎಂದು ಹೇಳಿದರು. ಸೀಮಾ ಅವರು ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ ಮತ್ತು ಸಚಿನ್ ಅವರೊಂದಿಗೆ ನ್ಯಾಯಾಲಯದ ಮೂಲಕವೇ ಪತಿ ಪತ್ನಿಯಾಗಿ ಬದುಕಲು ಬಯಸಿದ್ದಾರೆ ಎಂದು ಅವರ ವಕೀಲರು ಹೇಳಿದರು.
“ನಾನು ಪಾಕಿಸ್ತಾನಕ್ಕೆ ಹಿಂತಿರುಗಲು ಬಯಸುವುದಿಲ್ಲ, ನಾನು ಹಿಂದೂ ಆಗಿದ್ದೇನೆ ಮತ್ತು ನನ್ನ ಮಕ್ಕಳು ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ ಎಂದು ನಾನು ಭಾರತೀಯ ಅಧಿಕಾರಿಗಳಿಗೆ ಮನವಿ ಮಾಡಲು ಬಯಸುತ್ತೇನೆ. ದಯವಿಟ್ಟು ನನಗೆ ಇಲ್ಲಿ ಉಳಿಯಲು ಅವಕಾಶ ಮಾಡಿಕೊಡಿ. ನಾನು ಪಾಕಿಸ್ತಾನಕ್ಕೆ ಹಿಂತಿರುಗಿದರೆ, ಅವರು ನನ್ನನ್ನು ಕೊಲ್ಲುತ್ತಾರೆ, ”ಎಂದು ಸೀಮಾ ಹೇಳಿದರು.
ತನ್ನ ಮನವೊಲಿಸಲು ಪ್ರಯತ್ನಿಸುತ್ತಿರುವ ಪತಿ ಅವನ ಬಳಿಗೆ ಹೋದರೆ ಖಂಡಿತಾ ಹಿಂಸೆ ನೀಡುತ್ತಾನೆ ಎಂದು ಸೀಮಾ ಆತಂಕ ವ್ಯಕ್ತಪಡಿಸಿದರು. ಭಾರತದಲ್ಲಿ ಮಾತ್ರ ಬದುಕಲು ಮತ್ತು ಸಾಯಲು ನಾನು ಬಯಸುತ್ತೇನೆ ಎಂದು ತನ್ನ ಗಂಡನ ಹಳ್ಳಿಗೆ ಹೋಗಲು ಬಯಸುವುದಿಲ್ಲ ಎಂದು ಅವರು ಪುನರುಚ್ಚರಿಸಿದರು.
ಸಚಿನ್ ಮೀನಾ ಅವರು ಸೀಮಾ ಅವರೊಂದಿಗೆ ವಾಸಿಸಲು ಸರ್ಕಾರಕ್ಕೆ ಮನವಿ ಮಾಡಿದ್ದಾರೆ, ಅವರು ಈ ವರ್ಷದ ಮಾರ್ಚ್ನಲ್ಲಿ ನೇಪಾಳದಲ್ಲಿ ಸೀಮಾ ಹೈದರ್ ಅವರನ್ನು ವಿವಾಹವಾದರು ಎಂದು ಸಚಿನ್ ಹೇಳಿದರು.
ಪಬ್ಜಿ ಮುಲಕ ಪರಿಚಯವಾದ ಈ ಜೋಡಿ ಮೊಬೈಲ್ ಸಂಖ್ಯೆಗಳನ್ನು ವಿನಿಮಯ ಮಾಡಿಕೊಂಡು ಪರಸ್ಪರ ಮಾತನಾಡಲು ಪ್ರಾರಂಭಿಸಿದರು. ಕೆಲವು ದಿನಗಳ ನಂತರ, ಅವರು ಪರಸ್ಪರ ಪ್ರೀತಿಸತೊಡಗಿದರು. ತಾನು ಸಿಂಧ್ ಪ್ರಾಂತ್ಯದ ನಿವಾಸಿ ಎಂದು ಸೀಮಾ ತಿಳಿಸಿದರು. ನಂತರ, ಅವರು ಮದುವೆ ಆಗಿ ಒಟ್ಟಿಗೆ ವಾಸಿಸಲು ನಿರ್ಧರಿಸಿದರು. ಸೀಮಾ ನೇಪಾಳಕ್ಕೆ ವೀಸಾ ಪಡೆದು ಅಕ್ರಮವಾಗಿ ಭಾರತ ಪ್ರವೇಶಿಸಿದ್ದಾಳೆ. ಆಕೆಯ ಸಹೋದರ ಪಾಕಿಸ್ತಾನಿ ಸೇನಾ ಸಿಬ್ಬಂದಿ ಎಂದು ಹೇಳಿದ್ದರಿಂದ ಸೀಮಾ ಮತ್ತು ಸಚಿನ್ ಅವರು ಸಂಪರ್ಕಿಸಿದ ವಕೀಲರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.