ಟೊಮೆಟೊ ಜೊತೆಗೆ ಈಗ ಹೂಕೋಸು ಶುಂಠಿ, ಹಸಿರು ಮೆಣಸಿನಕಾಯಿ ಬೆಲೆಯೂ ಹೆಚ್ಚಳವಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ.
ಭಾರೀ ಮಳೆ, ಪೂರೈಕೆಯಲ್ಲಿ ಉಂಟಾಗಿರುವ ಅಡೆತಡೆ ಕಾರಣಕ್ಕೆ ತರಕಾರಿ ಬೆಲೆಯಲ್ಲಿ ಏರಿಕೆಯಾಗಿದೆ. ಒಂದಿಲ್ಲೊಂದು ತರಕಾರಿ ಬೆಲೆ ಹೆಚ್ಚುತ್ತಿರುವುದರಿಂದ ಗ್ರಾಹಕರು ಕಂಗಾಲಾಗಿದ್ದಾರೆ.
ಟೊಮೆಟೊ ಬೆಲೆ ನೂರರ ಗಡಿ ದಾಟಿದೆ. ಪ್ರಸ್ತುತ ದೆಹಲಿಯಲ್ಲಿ ಟೊಮೆಟೋ ಕೆಜಿಗೆ 145 ರೂ.ಗೆ ಮಾರಾಟವಾಗುತ್ತಿದೆ. ಒಂದು ಹೂಕೋಸು ಬೆಲೆ 80 ರೂ., ಕೆಜಿ ಶುಂಠಿಗೆ 380 ರೂ. (100 ಗ್ರಾಂಗೆ 38 ರೂ.) ಮತ್ತು ಹಸಿರು ಮೆಣಸಿನಕಾಯಿ ಕೆಜಿಗೆ 170 ರೂ.ಗೆ ಮಾರಾಟವಾಗುತ್ತಿದೆ.