ಒಮ್ಮೆ ಬೇಂದ್ರೆ ಅವರನ್ನ ಯಾರೋ ಒಬ್ಬಾವ ಕೇಳಿದಂತ ಕನ್ನಡ ಕನ್ನಡ ಎಂದು ಇಷ್ಟೆಲ್ಲಾ ಮಾತಾಡತಿರಿ ನಿಮ್ಮ ಕನ್ನಡಾ ಎಲ್ಲಾ ಕಡೆ ಅದ ಎನ್ರೀ ಅಂತ ಅದಕ್ಕೆ ಉತ್ತರಿಸಿದ ಬೇಂದ್ರೆ “ ಕಣ ಕಣದಾಗು ಕನ್ನಡ ಅದ “ ಅಂತ ಹೇಳಿದ್ರು ಅದು ಹ್ಯಾಂಗ ಅಂತ ಹೇಳ್ರಿ ಅಂದ್ರ ಅದಕ್ಕ ಬೇಂದ್ರೆ ವಿವರವಾಗಿ ಹೇಳಿಕ್ಕೆ ಚಾಲು ಮಾಡಿದರಂತ ತಲೆ ಮೇಲಿರುವುದು ಕೂದಲು-ಕ ಅದರ ಒಳಗ ಕಪೋಲ (ತಲೆ ಬರುಡೆ)- ಕ, ಅದರ ಕೆಳಗ ಕಣ್ಣು-ಕ, ಕಿವಿ-ಕ, ಕೈ-ಕ, ಕಾಲು-ಕ, ಕಾಲಿಗೆ ಹಾಕೊಂಡಿದ್ದು ಕ್ಯರಾ (ಚಪ್ಪಲಿ)- ಕ ದೋತ್ರಾ ಅಲ್ಲಾ – ಕಚ್ಚೇ ಪಂಚೆ-ಕ ಮ್ಯಾಲೆ ಹಾಕೊಂಡಿರು ಕೋಟು- ಕ ಹಿಂಗ ತಾವು ಹಾಕಿಕೊಂಡಿರುವ ಬಟ್ಟೆ ಮತ್ತು ತಮ್ಮ ಮಯ್ಯಾಗ ಕ ದಿಂದ ಪ್ರಾರಂಭವಾಗುವ ವಸ್ತುಗಳನ್ನೇ ತೊರಿಸಿ ನೋಡ್ರಿ ಹಿಂಗ ಕಣ- ಕಣದಾಗ ನನ್ನ ಕನ್ನಡಾ ಅದ ಅಂತ ಹೇಳಿದ್ರು ಮತ್ತು ಬೇಂದ್ರೆ ಮಾಸ್ತರ ಹೇಳ್ಯಾರ ಅಂದ್ರ ಖರೇನ ಕಣ ಕಣದಾಗು ಕನ್ನಡ ಅದ.
ಆದ್ರ ಈಗ ಹೆಂಗ ಆಗೇದ ಅಂದ್ರ ; ನಂಗ ಕನ್ನಡಕ್ಕ ಈಗೇನು ಸಂಬಂಧ ಇಲ್ಲಾ ಸಾಲ್ಯಾಗ ಅಷ್ಟ ಒಂದು ಭಾಷಾ ಅಂತ ಇತ್ತು 35 ತೊಗೊಂಡ್ರ ಪಾಸ ಅಂತ ಮಾಸ್ತರ ಹೇಳಿದ್ರು ನಾನು ಬರೋಬ್ಬರಿ 35 ತೊಗೊಂಡೆ ಮನ್ಯಾಗು ಖುಷ ನಾನು ಖುಷ ಇಲ್ಲಿಗೆ ನಂಗ ಮತ್ತ ಕನ್ನಡಕ್ಕ ಸಂಬಂಧ ಮುಗಿತು. ಆದ್ರ ಹಂಗಲ್ಲಾ ಮನ್ಯಾಗ ಅಮ್ಮಾ ಕಡೆ ಕೆಲಸಾ ಮಾಡಿಸಿಕೊಂಡ ಲಾಸ್ಟಿಗೆ ಅಕಿಗೆ ಥ್ಯಾಂಕು ಹೇಳಿದ್ಹಂಗ ಆತು. ಅಮ್ಮಾ ಮಾಡಿದ್ದ ಸಹಾಯಕ್ಕ ಯಾರಾದ್ರೂ ಥ್ಯಾಂಕು ಹೇಳತಾರೇನು ? ಮತ್ತ ಥ್ಯಾಂಕು ಹೇಳಿದ್ರ ಅಕಿ ಮಾಡಿದ್ದ ಕೆಲಸಕ್ಕ ಬೆಲೆ ಕಟ್ಟಲಿಕ್ಕ ಆಗತದ ಎನು? ಇಲ್ಲಾ ಆಗೋದಿಲ್ಲಾ ಹಂಗನ ಅಕಿ ಮತ್ತ ಕನ್ನಡ ತಾಯಿ ಒಂದೇ ಅಂತ ನಮ್ಮ ಮನನ್ಸನ್ಯಾಗ ಯಾಕ ಬರಾಂಗಿಲ್ಲಾ ?
ಈ ಕಡೆ ನಮ್ಮ ಬೆಳಗಾವಿನ್ಯಾಗ ನವೆಂಬರ 1 ನೇ ತಾರಿಕ ಹ್ಯಾಂಗ ಯಲ್ಲಾರ ಮಯ್ಯಾಗ ಕನ್ನಡದ ಭೂತ ಹೊಕ್ಕಿರತದ ಅಂತ. ಒಂದ ಬೆಳಗ ಮುಂಜಾನೆಯಿಂದ ಗಾಡಿ ಮುಂದ ಸೌಂಡ ಬಾಕ್ಸ ಹಚ್ಚಿ ಕುಣಿಲಿಕ್ಕೆ ಚಾಲು ಮಾಡಿದ್ರ ರಾತ್ರಿ ಪೂರ್ತಿ ಇದನ್ನ ಮಾಡಕೋತ ನಿಲ್ಲತಾರ ಇದ್ರಾಗ ಸ್ವಲ್ಪ ಮಂದಿಗೆ ಕನ್ನಡದ ಅ ಆ ಇ ಈ ನು ಬರುದಿಲ್ಲಾ ಆದ್ರೂ ಬರತಾರ ಯಾಕಂದ್ರ ಮೊದಲ ಹೇಳಿದೆ ಕಣ ಕಣದಲ್ಲೂ ಕನ್ನಡ ಹಂಗ ಕುಡಿಯುದ್ರಾಗು ಕ ಅದ ಅಂತಾರ ನಮ್ಮ ಮಂದಿ.
ಹಿಂದಿನ ಯಲ್ಲಾ ಲೇಖನ ಪುಸ್ತಕ ಭಾಷಾನ್ಯಾಗ ಬರದ್ರಿ ಈ ಲೇಖನಾ ಯಾಕ ಹಿಂಗ ಉತ್ತರ ಕರ್ನಾಟಕಾ ಭಾಷಾನ್ಯಾಗ ಬರದ್ರಿ ಅಂತ ವಿಚಾರ ಮಾಡಿದ್ರ ಯಾವಾಗು ನಮ್ಮ ಶೈಲಿ ನಮ್ಮ ಮಾತು ನಮಗ ಛಂದಾ ಮನಸ್ಸಿನ್ಯಾಗ ಇರೋದನ್ನ ಹೇಳಬೇಕ ಅಂದ್ರ ಯಾವುದ ಸಕ್ರಿ ಹಚ್ಚೋದ ಬ್ಯಾಡಾ ಹಂಗ ತನ್ನಿಂದ ತಾನ ಬಂದ ಬಿಡತದ ಅದಕ್ಕ ಉತ್ತರ ಕನ್ನಡ ಭಾಷಾನ್ಯಾಗ ಬರದೇನಿ ಅಷ್ಟಕ್ಕೂ ಉತ್ತರ ಕರ್ನಾಟಕ ಭಾಷಾ , ದಕ್ಷಿಣ ಕನ್ನಡ ಭಾಷಾ ಬ್ಯಾರೆ ಅಂತ ಯಾಕ ವಿಚಾರ ಮಾಡಬೇಕು ? ಇಲ್ಲೆ ಯಲ್ಲಾ ಒಂದ ಅಂತ ವಿಚಾರ ಮಾಡ್ರಿ. ಮತ್ತ ಮುಂದ ಬರಿತೇನಿ ಅಲ್ಲಿ ತನಾ ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು.
ಮುಂದವರಿತದ .