ಹುಡಗಿ ಹೂ ಅಂದ್ರ ನಮ್ಮ ಹುಡಗೋರ ಕಾಲು ನೆಲದ ಮ್ಯಾಲೆ ನಿಲ್ಲೋದಿಲ್ಲಾ ಅಂತ ಈ ಹಿಂದ ಹೇಳಿದ್ದ ನೆನಪದ ಅನಕೋತೆನಿ, ನೆನಪು ಇಲ್ಲಾ ಅಂದ್ರ ಮತ್ತೊಂದ ಸಲಾ ನನ್ನ ಹಿಂದಿನ ಲೇಖನಾ ಓದ್ರಿ ನೆನಪಾಗತ್ತದ.
ಇರ್ಲಿ ಈಗ ನೋಡ್ರಿ ಹುಡಗಿ ಹೂ ಅಂದ್ಲು ಹುಡಗಿ ಮನ್ಯಾಗು ಇವನ ಮಾರಿಗೆ ಹೂ ಅಂದ್ರ ಜೀವನ ಹಾಲು ಜೇನು ಆಗತ್ತದ ಇಲ್ಲಾ ನಶೀಬ ಮತ್ತ ಕುಂಡ್ಲಿ ಎರಡು ಕೆಟ್ಟ ಇದ್ದು ಅಂದ್ರ ಎಳ್ಳು ನೀರು ಆಗತ್ತದ ಅಷ್ಟ ಜಾಸ್ತಿ ಎನ್ ಇರುದಿಲ್ಲಾ ಇದ್ರಾಗ. ಆಕಿ ಬ್ಯಾರೆ ಹುಡಗನ ನೋಡಕೋತಾಳ ಇಲ್ಲಾ ಪಿತೃ ಮಾತೃ ವಾಕ್ಯ ಪರಿಪಾಲಕಳಾಗಿ ಹೇಳಿದಾವರನ ಕಟಗೊಂಡ ಸುಮ್ಮ ಕುಡತಾಳರೀ ದಾಳಿ ಬರೋದ ಯಾವಾಗು ಈ ಗಂಡ ಜೀವಕ್ಕ. ಇಕಿ ಇನ್ನೂ ಹೂ ಅಂದ ಎರಡ ನಿಮಿಷ ಆಗಿರೋದಿಲ್ಲರಿ ನಮ್ಮ ಹುಡಗನ ಕನಸಗೋಳ ಚಾಲು, ಹಿಂಗ ಮಾಡೋಣ ಹಂಗ ಮಾಡೋಣ ಅಂತ ಆಶಾಗೋಳ ಎಫೇಲ್ ಟಾವರ್ ನ ಕಟ್ಟಿ ಬಿಡತಾನ ಆದ್ರ ಆಕಿ ಹಂಗಲ್ಲಾ ಅಕಿಂದ ಎನಿದ್ರು ದ್ರಾವಿಡ ಸಾಹೇಬ್ರ ಬ್ಯಾಟಿಂಗ್ ಇದ್ದಂಗ ನೋಡಕೊಂಡ ಆಡೋದು ಅದ ನಮ್ಮ ಹುಡಗೋರ ಬ್ಯಾಟಿಂಗ್ ನಿಂತ್ರ ಸಾಕು ಗೇಲ್ ಕಾಕಾ ಇವ್ರ ಮೈಯ್ಯಾಗ ಬಂದ ಬಿಡತಾನ.
ಸಂಬಂಧದಾಗ ಪ್ರೀತಿ ಅನ್ನೋದ ಹೆಂಗ್ ಇರ್ತದ ಅಂದ್ರ ಕೊಡು ತೊಗೋಳದ ಮ್ಯಾಲೆ ಇರ್ತದ್ರಿ ಬರೆ ಒಂದೆ ಕಡೆದ ಪ್ರೀತಿ ಮಾಡಿದ್ರ ಉಪಯೋಗ ಇಲ್ಲಾ ಎರಡು ಕಡೆದ ಪ್ರೀತಿ ಇರಬೇಕು ಅಂದ್ರ ಛಂದಾ ಇಲ್ಲಾ ಪ್ರೀತಿ ಮಾಡಾವ/ ಮಾಡಾಕಿ ಮಾಡಕೋತ ಕುಡತಾರ ಮತ್ತೊಬ್ರ ಅದರ ಫಾಯದಾ ತೊಗೊಂಡಂಗ ಆಗ್ತದ. ಆದ್ರ ಅದು ಹಂಗಲ್ಲಾ ನಿಮ್ಮ ಹುಡಗಾ ಅಥವಾ ನಿಮ್ಮ ಹುಡಗಿ ಎಷ್ಟ ನಿಮ್ಮನ್ನ ಪ್ರೀತಿ ಮಾಡತಾರ ಅದಕ್ಕಿಂತಾ ಒಂದ ಕೈ ನಾ ಮುಂದ ನೀ ಮುಂದ ಅನ್ನೋ ಹಂಗ ಪ್ರೀತಿ ಮಾಡಬೇಕು ಅಂದ್ರ ಲಾಸ್ಟಿಗೆ ಒಂದ ಹಂತಕ್ಕ ಬಂದು ಮುಟ್ಟತಿರಿ ಅದನ್ನ ಬಿಟ್ಟು ಖಾಲಿ ಪಿಲಿ ಟೈಮ್ ಪಾಸ್ ಮಾಡಿದ್ರ ಯಾರಿಗೂ ಉಪಯೋಗ ಆಗೋದಿಲ್ಲ ಬರೆ ರೊಕ್ಕ ಖಾಲಿ ಆಗತ್ತದ ಅಷ್ಟ. ಒಂದ ಸಂಬಂಧ ಹೆಂಗ ಇರಬೇಕು ಅನಲಿಕ್ಕೆ ನೂರ ಮಂದಿ ನೂರ ಮಾತು ಹೇಳತಾರ ಆದ್ರ ಹೆಂಗ ಇರಬಾರದು ಅಂತ ಯಾರೂ ಹೇಳುದಿಲ್ಲ. ಲಗ್ನಾ ಆಗು ತನಾ ಹಿಂಗ ಇರಬೇಕ ಲಾ ಎಲ್ಲೇ ಹೊದ್ರು ನಮ್ಮ ರೊಕ್ಕಾ ನಾವು ಅವರ ರೊಕ್ಕಾ ಅವರ ಕೊಡೊಹಂಗ ಇರಬೇಕು ಮುಂದ ಯಲ್ಲಾ ಒಪ್ಪಗಿ ಆಗಿ ಲಗ್ನಾ ಆದ ಮೇಲೆ ಇಬ್ಬರೂ ಕೂಡಿ ಜ್ವಾಯಿಂಟ್ ಅಕೌಂಟ ತಗಿ ಬೇಕು ಈಗ ಹೆಂಗ ಅಂದ್ರ ಸಾಲಾ ಮಾಡಿ ಆದ್ರೂ ತುಪ್ಪಾ ತಿನ್ನು ಅನ್ನೊ ಹಂಗ ಆಗೇದ ಹುಡಗಿ ಸಲವಾಗಿ ಅಥವಾ ಹುಡಗನ ಸಲವಾಗಿ ದೊಸ್ತ್ರ ಕಡೆ ಸಾಲಾ ಮಾಡಿ ಕಡಿಕ ಅಕೀನೂ ಇಲ್ಲಾ ರೊಕ್ಕಾನು ಇಲ್ಲಾ ಅದಕ್ಕ ಏನೇ ಆಗ್ಲಿ ಮತ್ತೋಬ್ಬರ ಭೀಡೆ ನ್ಯಾಗ ಇರಬ್ಯಾಡ್ರಿ, ನಿಮ್ಮದ ನೀವ ಗಳಸ್ರೀ ಮಜಾ ಮಾಡ್ರಿ ಮತ್ತ ಮುಂದಿನ ಬುಧವಾರ ಹೊಸ ಗದ್ಲಾ ತೊಗೊಂಡ ಬರತೇನಿ ಅಲ್ಲಿತನಾ ಕಾಯ್ರಿ.
ಮುಂದವರಿತದ ಇದು ……