ಉಪಾಸನಾ ಸಾವಿರಾರು ಕೋಟಿಗಳ ಒಡತಿ. ಅವರು ಇತ್ತೀಚೆಗೆ ಡೆಲಿವರಿಗಾಗಿ ಆಸ್ಪತ್ರೆಗೆ ಹೋದ ಫೋಟೋ ವೈರಲ್ ಆಗಿತ್ತು. ಆಗ ರಾಮ್ ಚರಣ್ ಪತ್ನಿ ಧರಿಸಿದ್ದ ಟೀ ಶರ್ಟ್ ಬೆಲೆ ಎಷ್ಟು ಗೊತ್ತಾ?
ಮೆಗಾ ಕುಟುಂಬದ ಸೊಸೆ ಕೋಟಿಗಳ ಒಡತಿ ಉಪಾಸನಾ ಕೊನಿಡೇಲಾ ಅವರು ಹೆಣ್ಣುಮಗುವಿಗೆ ಜನ್ಮಕೊಟ್ಟಿದ್ದಾರೆ. ಮೆಗಾಸ್ಟಾರ್ ಕುಟುಂಬವೇ ಸಂಭ್ರಮದಲ್ಲಿದೆ. ರಾಮ್ ಚರಣ್ ಹಾಗೂ ಉಪಾಸನಾ ಅವರು ಮದುವೆಯಾಗಿ 10 ವರ್ಷಗಳ ನಂತರ ಪೋಷಕರಾಗಿದ್ದಾರೆ.
ಈ ಜೋಡಿ ಡೆಲಿವರಿಗಾಗಿ ಆಸ್ಪತ್ರೆಗೆ ಬರುವ ವಿಡಿಯೋ ಕ್ಲಿಪ್ ವೈರಲ್ ಆಗಿತ್ತು. ಇದರಲ್ಲಿ ಉಪಾಸನಾ ಅವರು ಕ್ಯಾಶುವಲ್ ಟೀ ಶರ್ಟ್ ಒಂದನ್ನು ಧರಿಸಿದ್ದರು. ಆ ಟೀ ಶರ್ಟ್ ಬೆಲೆ ಈಗ ರಿವೀಲ್ ಆಗಿದ್ದು ಬೆಲೆ ಕೇಳಿದ ನೆಟ್ಟಿಗರು ಶಾಕ್ ಆಗಿದ್ದಾರೆ.
ಉಪಾಸನಾ ಧರಿಸಿದ ಟೀ ಶರ್ಟ್ಗೆ ಬರೋಬ್ಬರಿ 48,375 ರೂಪಾಯಿ ಬೆಲೆ ಇದೆಯಂತೆ. ಇದು ಫೇಮಸ್ ಗುಸ್ಸಿ ಬ್ರ್ಯಾಂಡ್ನ ಟೀ ಶರ್ಟ್. ಉಪಾಸನಾ ಡೆಲಿವರಿಗೆ ಹೋಗುವಾಗ ಬೇಬಿ ಪಿಂಕ್ ಬಣ್ಣದ ಈ ಟೀ ಶರ್ಟ್ ಧರಿಸಿಕೊಂಡು ಹೋಗಿದ್ದರು.
ಗುಸ್ಸಿ ಟೀಶರ್ಟ್ ಬೇಬಿ ಪಿಂಕ್ ಬಣ್ಣದಲ್ಲಿದೆ. ಈ ಟೀ ಶರ್ಟ್ ಮೂಲಕ ಉಪಾಸನಾ ಮಗು ಹೆಣ್ಣು ಎಂಬ ಹಿಂಟ್ ಕೂಡಾ ಮೊದಲೇ ಕೊಟ್ಟಿದ್ದಾರೆ. ಈ ಟೀಶರ್ಟ್ ಬೆಲೆ ಬರೋಬ್ಬರಿ 48 ಸಾವಿರ. ಅಂದರೆ ಅರ್ಧ ಲಕ್ಷದ ಸಮೀಪದಲ್ಲಿದೆ. ಇದು ಹೈಕ್ವಾಲಿಟಿ ಕಂಫರ್ಟ್ ಉಡುಗೆಯಾಗಿದೆ.
ಉಪಾಸನಾ ಅವರು ಲಕ್ಷುರಿ ಬ್ರ್ಯಾಂಡ್ ವಸ್ತುಗಳನ್ನೇ ಬಳಸುತ್ತಾರೆ. ಗುಸ್ಸಿ ಟೀ ಶರ್ಟ್ ಆಯ್ಕೆ ಮಾಡಿರುವುದು ಕೂಡಾ ಅವರ ದುಬಾರಿ ಆಯ್ಕೆಯನ್ನು ತಿಳಿಸುತ್ತದೆ. ಶರ್ಟ್ ಬೆಲೆ ತಿಳಿದ ನೆಟ್ಟಿಗರು ಅಯ್ಯೋ ಈ ಟೀಶರ್ಟ್ ಬೆಲೆಗೆ ಡೆಲಿವರಿಯೇ ಮುಗಿದು ಹೋಗ್ತಿತ್ತು ಎಂದಿದ್ದಾರೆ.
ಉಪಾಸನಾಗೆ ಹೆಣ್ಣು ಮಗುವಾಗುತ್ತೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅದೇ ರೀತಿ ಹೆಣ್ಣು ಮಗು ಆಗಿದೆ. ಹೈದ್ರಾಬಾದ್ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದು, ತಾಯಿ-ಮಗು ಇಬ್ಬರು ಆರೋಗ್ಯವಾಗಿದ್ದಾರೆ. ಉಪಾಸನಾ ಅವರನ್ನು ಸೋಮವಾರ (ಜೂನ್ 19) ರಾತ್ರಿ ಹೈದರಾಬಾದ್ನ ಜುಬ್ಲಿ ಹಿಲ್ಸ್ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮಂಗಳವಾರ (ಜೂನ್ 20) ಮುಂಜಾನೆ ಉಪಾಸನಾಗೆ ಮಗು ಜನಿಸಿದ ವಿಚಾರವನ್ನು ಆಸ್ಪತ್ರೆಯವರು ಖಚಿತಪಡಿಸಿದ್ದಾರೆ.