ಲಿಥಿಯಂ-ಐಯಾನ್ ಬ್ಯಾಟರಿಯ ಪ್ರವರ್ತಕ ಜಾನ್ ಬಿ ಗುಡ್ನೊಫ್ ನಿಧನರಾಗಿದ್ದಾರೆ. ನೊಬೆಲ್ ಪ್ರಶಸ್ತಿ ವಿಜೇತ ಜಾನ್ ಗುಡ್ನೊಫ್ ಅವರು ತಮ್ಮ 100 ನೇ ವಯಸ್ಸಿನಲ್ಲಿ ಟೆಕ್ಸಾಸ್ನ ಆಸ್ಟಿನ್ನಲ್ಲಿ ಕೊನೆಯುಸಿರೆಳೆದಿದ್ದಾರೆ. ಅತ್ಯಂತ ಹಿರಿಯ ವಿಜ್ಞಾನಿಯಾಗಿದ್ದ ಗುಡ್ನೊಫ್ ಅವರ ಮರಣವನ್ನು ಟೆಕ್ಸಾಸ್ ವಿಶ್ವವಿದ್ಯಾಲಯವು ಖಚಿತಪಡಿಸಿದೆ.
ಜಾನ್ ಗುಡ್ನೊಫ್ ಅವರು ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದರು. ಇದಕ್ಕೂ ಮೊದಲು ಜಾನ್ ಗುಡ್ನೋ ಫ್ ಅವರು ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಲ್ಯಾಬ್ ಅನ್ನು ಸ್ಥಾಪಿಸಿದರು. ಇದು 1980 ರಲ್ಲಿ ಸ್ಮಾರ್ಟ್ಫೋನ್ಗಳು, ಲ್ಯಾಪ್ಲ್ಯಾಪ್ಗಳು ಮತ್ತು ಟ್ಯಾಬ್ಲೆಟ್ ಕಂಪ್ಯೂಟರ್ಗಳ ಅಭಿವೃದ್ಧಿಗೆ ಅವಕಾಶ ಮಾಡಿಕೊಟ್ಟಿತು.
2019ರಲ್ಲಿ ನೊಬೆಲ್ ಪ್ರಶಸ್ತಿ:
ಲಿಥಿಯಂ-ಐಯಾನ್ ಬ್ಯಾಟರಿಯ ರಚನೆಗಾಗಿ ಗುಡ್ನೊಫ್ ಅವರಿಗೆ 2019ರಲ್ಲಿ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಸ್ಮಾರ್ಟ್ ಪೋನ್ಗಳಲ್ಲಿ ಅವಿಭಾಜ್ಯ ಅಂಗವಾಗಿರುವ ಬ್ಯಾಟರಿ ತಂತ್ರಜ್ಞಾನದ ಬಗ್ಗೆ ಇವರು ಮಾಡಿರುವ ಸಂಶೋಧನೆ ಎಲ್ಲಡೆಯಿಂದ ಮೆಚ್ಚುಗೆಗೆ ವ್ಯಕ್ತವಾಗಿತ್ತು.
ಲಿಥಿಯಂ-ಐಯಾನ್ ಬ್ಯಾಟರಿಗಳನ್ನು ಆಧುನಿಕ ಪೋರ್ಟಬಲ್ ಎಲೆಕ್ಟ್ರಾನಿಕ್ ಸಾಧನಗಳು ಮತ್ತು ವಿದ್ಯುತ್ ಹಾಗು ಹೈಬ್ರಿಡ್ ಕಾರುಗಳಲ್ಲಿ ಬಳಸಲಾಗುತ್ತದೆ. ಪ್ರಮುಖವಾಗಿ ಲಿಥಿಯಂ-ಐಯಾನ್ ಬ್ಯಾಟರಿಗಳನ್ನು ಮೊಬೈಲ್ ಫೋನ್, ಲ್ಯಾಪ್ಲ್ಯಾಪ್ ಮತ್ತು ಎಲೆಕ್ಟ್ರಿಕ್ ವಾಹನಗಳಲ್ಲೂ ಬಳಸಲಾಗುತ್ತಿದೆ. ಇದಲ್ಲದೆ, ಲಿಥಿಯಂ ಬ್ಯಾಟರಿಗಳನ್ನು ಕಾರ್ಡಿಯಾಕ್ ಡಿಫಿಬ್ರಿಲೇಟರ್ಗಳಂತಹ ವೈದ್ಯಕೀಯ ಸಾಧನಗಳಲ್ಲಿಯೂ ಬಳಸಲಾಗುತ್ತದೆ.