ಮುಂಬರುವ ಏಷ್ಯನ್ ಗೇಮ್ಸ್ 2023ರಲ್ಲಿ ಭಾಗವಹಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಪುರುಷ ಮತ್ತು ಮಹಿಳಾ ಕ್ರಿಕೆಟ್ ತಂಡಗಳನ್ನು ಕಳುಹಿಸಲು ಸಿದ್ಧವಾಗಿದೆ. ಈ ಬಾರಿಯ ಏಷ್ಯನ್ ಗೇಮ್ಸ್ ಚೀನಾದ ಹ್ಯಾಂಗ್ಝೌ ನಗರದಲ್ಲಿ ನಡೆಯಲಿದ್ದು, ಇದಕ್ಕೆ ಭಾರತದ ಮಹಿಳಾ ಮತ್ತು ಪುರುಷ ತಂಡಗಳು ಭಾಗವಹಿಸಲಿವೆ.
ಏಷ್ಯನ್ ಕ್ರೀಡಾಕೂಟವು ಚೀನಾದ ಹ್ಯಾಂಗ್ಝೌನಲ್ಲಿ ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 8ರ ವರೆಗೆ ನಡೆಯಲಿದೆ. ಅದೇ ಸಮಯದಲ್ಲಿ, ಭಾರತ ಕ್ರಿಕೆಟ್ ತಂಡವು ತವರಿನಲ್ಲಿ ಏಕದಿನ ವಿಶ್ವಕಪ್ ಆಡಲಿದೆ . ಇಂತಹ ಪರಿಸ್ಥಿತಿಯಲ್ಲಿ ಬಿಸಿಸಿಐ ತನ್ನ ಬಿ ತಂಡವನ್ನು ಏಷ್ಯಾನ್ ಗೇಮ್ಸ್ಗೆ ಪುರುಷರ ವಿಭಾಗದಲ್ಲಿ ಕಳುಹಿಸಲಿದೆ. ಇನ್ನು ಭಾರತದ ಅಗ್ರ ಮಹಿಳಾ ಕ್ರಿಕೆಟ್ ತಂಡ ಏಷ್ಯಾನ್ ಗೇಮ್ಸ್ ನಲ್ಲಿ ಭಾಗವಹಿಸಲಿದೆ. ಬಿಸಿಸಿಐ ಜೂನ್ 30ರೊಳಗೆ ಆಟಗಾರರ ಪಟ್ಟಿಯನ್ನು ಭಾರತೀಯ ಒಲಿಂಪಿಕ್ ಸಂಸ್ಥೆಗೆ ಕಳುಹಿಸಲಿದೆ.
ಭಾರತ ತಂಡ ಈ ಹಿಂದೆ ಏಷ್ಯನ್ ಗೇಮ್ಸ್ನಲ್ಲಿ ಭಾಗವಹಿಸಿಲ್ಲ:
2010 ಮತ್ತು 2014ರಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಭಾರತ ತಂಡ ಭಾಗವಹಿಸಿತ್ತು. ಆದರೆ ಕಳೆದೆರಡು ಬಾರಿ ಏಷ್ಯನ್ ಗೇಮ್ಸ್ನಲ್ಲಿ ಕ್ರಿಕೆಟ್ ಟೂರ್ನಿ ನಡೆದಾಗ ಭಾರತ ತಂಡವನ್ನು ಬಿಸಿಸಿಐ ಕಳುಹಿಸಿರಲಿಲ್ಲ. ಆದರೆ, ಈ ವರ್ಷದ ಟೂರ್ನಿಗೆ ಪುರುಷರ ಮತ್ತು ಮಹಿಳೆಯರ ತಂಡವನ್ನು ಕಳುಹಿಸಲು ಮುಂದಾಗಿದೆ. ಕಳೆದ ವರ್ಷ 2022 ರಲ್ಲಿ ಇಂಗ್ಲೆಂಡ್ನಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಕಾಮನ್ವೆಲ್ತ್ ಟೂರ್ನಿಯಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಬಿಸಿಸಿಯ ಕಳಲುಹಿಸಿ ಕೊಟ್ಟಿತ್ತು. ಇದರಲ್ಲಿ ಮಹಿಳಾ ತಂಡ ಅದ್ಭುತ ಪ್ರದರ್ಶನ ನೀಡಿತ್ತು. ಭಾರತ ಮಹಿಳಾ ತಂಡ ಫೈ ನಲ್ ಪ್ರವೇಶಿಸಿ, ಆಸ್ಟ್ರೇ ಲಿಯಾ ವಿರುದ್ಧ ಸೋಲು ಕಂಡಿತ್ತು.