ಭಾರತೀಯ ಆಹಾರ ಪದ್ಧತಿಯಲ್ಲಿ ಮಸಾಲೆ ಪದಾರ್ಥಗಳಿಗೆ ಹೆಚ್ಚಿನ ಪ್ರಾಶಸ್ತ್ಯವಿದೆ. ಮಸಲೆ ಪದಾರ್ಥಗಳಲ್ಲಿ ಏಲಕ್ಕಿ ತನ್ನದೆ ಆದ ಮಹತ್ವದ ಸ್ಥಾನವನ್ನು ಹೊಂದಿದೆ. ಏಲಕ್ಕಿ ರುಚಿಗೆ ಮಾತ್ರವಲ್ಲ ಆರೋಗ್ಯದ ವಿಷಯದಲ್ಲೂ ಅನೇಕ ಪ್ರಯೋಜನಗಳನ್ನು ಹೊಂದಿದೆ.
ಏಲಕ್ಕಿ ಸೇವನೆಯಿಂದ ಪ್ರಯೋಜನಗಳು:
ಜೀರ್ಣಕ್ರಿಯೆ ಸುಧಾರಣೆ :
ಊಟದ ನಂತರ ಏಲಕ್ಕಿಯನ್ನು ಸಾಮಾನ್ಯವಾಗಿ ಸೇವಿಸುತ್ತಾರೆ. ಏಕೆಂದರೆ ಇದು ಕಾರ್ಮಿನೇಟಿವ್ ಸ್ವಭಾವವನ್ನು ಹೊಂದಿದೆ ಮತ್ತು ಜೀರ್ಣಕ್ರಿಯೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ. ಇದು ಹೊಟ್ಟೆಯ ಒಳಪದರದ ಉರಿಯೂತವನ್ನು ಕಡಿಮೆ ಮಾಡುತ್ತದೆ, ಎದೆಯುರಿ ಮತ್ತು ವಾಕರಿಕೆಯ ವಿರುದ್ಧ ಹೋರಾಡುತ್ತದೆ. ಇದು ಲೋಳೆಯ ಪೊರೆಯನ್ನು ಶಮನಗೊಳಿಸುತ್ತದೆ ಹಾಗೂ ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಆಹಾರವನ್ನು ಪರಿಣಾಮಕಾರಿಯಾಗಿ ಜೀರ್ಣಿಸಿಕೊಳ್ಳುವ ಸಾಮರ್ಥ್ಯ ಹೆಚ್ಚಿಸುತ್ತದೆ.
ವಾಂತಿ ಮತ್ತು ವಾಕರಿಕೆಯನ್ನು ತಡೆಯುತ್ತದೆ:
ಏಲಕ್ಕಿ ಆಂಟಿಮೆಟಿಕ್ ಗುಣಗಳನ್ನು ಹೊಂದಿದೆ. ಇದು ವಾಕರಿಕೆ ಹಾಗೂ ವಾಂತಿಯಂತಹ ಸಂವೇದನೆಯನ್ನು ಶಾಂತಗೊಳಿಸುವುದು. ಹುಳಿ ಸಂವೇದನೆಯ ವಾಂತಿಯಯಿಂದ ಉಂಟಾಗುವ ಸುಡುವಿಕೆಯನ್ನು ತಂಪುಗೊಳಿಸುವುದು. ದೂರದ ಸ್ಥಳಗಳಿಗೆ ಪ್ರಯಾಣಿಸುವಾಗ ಟ್ರಾವೆಲ್ ಕಿಟ್ನಲ್ಲಿ ಏಲಕ್ಕಿಯನ್ನು ಸಹ ಇಟ್ಟುಕೊಳ್ಳಬಹುದು. ಮುಂಜಾನೆಯ ವಾಕರಿಕೆ ಸಮಸ್ಯೆ ಹೊಂದಿರುವ ಗರ್ಭಿಣಿಯರು ಏಲಕ್ಕಿಯ ಪರಿಮಳವನ್ನು ಗ್ರಹಿಸಿ, ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
ಕೆಟ್ಟ ಉಸಿರಾಟ ತಡೆಯುತ್ತದೆ:
ನೀವು ಬಾಯಿಯಯಲ್ಲಿ ಕೆಟ್ಟ ಉಸಿರಾಟದ ಸಮಸ್ಯೆಯನ್ನು ಹೊಂದಿದ್ದರೆ ಏಲಕ್ಕಿ ಬೆಸ್ಟ್. ಇದು ಬಲವಾದ ಸುವಾಸನೆ ಮತ್ತು ಆಹ್ಲಾದಕರ ವಾಸನೆಯನ್ನು ಹೊಂದುವುದರ ಜೊತೆಗೆ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಅಲ್ಲದೆ, ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಬಾಯಿಯ ದುರ್ವಾಸನೆಯು ಪ್ರಮುಖ ಕಾರಣಗಳಲ್ಲಿ ಒಂದಾಗಿದ್ದು, ಸಮಸ್ಯೆಯ ಮೂಲವನ್ನು ತೆಗೆದುಹಾಕುವಲ್ಲಿ ಬಹಳ ಪರಿಣಾಮಕಾರಿಯಾಗಿದೆ.
ಹಲ್ಲಿನ ಆರೋಗ್ಯಕ್ಕೆ ಒಳ್ಳೆಯದು:
ಏಲಕ್ಕಿ ಪ್ರಬಲವಾದ ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದೆ. ಇದು ಉತ್ತಮ ಹಲ್ಲಿನ ನೈರ್ಮಲ್ಯದ ಜೊತೆಗೆ ಕೆಟ್ಟ ಉಸಿರನ್ನು ಶಾಶ್ವತವಾಗಿ ತೊಡೆದುಹಾಕಲು ಸಹಾಯ ಮಾಡುವುದು. ಏಲಕ್ಕಿ ಎಣ್ಣೆಯಲ್ಲಿರುವ ಫೈಟೋಕೆಮಿಕಲ್ ಮತ್ತು ಸಿನೋಲ್ ಗುಣವು ಬ್ಯಾಕ್ಟೀರಿಯವನ್ನು ನಾಶಪಡಿಸುವುದು. ಕೆಟ್ಟ ಉಸಿರು, ಹಲ್ಲಿನಲ್ಲಿ ಕುಳಿ ಬೀಳುವುದು ಹಾಗೂ ಅನುಚಿತವಾಗಿ ಹುಟ್ಟುವ ಹಲ್ಲುಗಳನ್ನು ತಡೆಯುತ್ತದೆ.
ಆಸಿಡಿಟಿ ಹೋಗಲಾಡಿಸುತ್ತದೆ:
ಏಲಕ್ಕಿಯಲ್ಲಿರುವ ಸಾರಭೂತ ತೈಲಗಳು ಹೊಟ್ಟೆಯ ಲೋಳೆಪೊರೆಯ ಒಳಪದರವನ್ನು ಬಲಪಡಿಸುತ್ತದೆ ಮತ್ತು ನೀವು ಸ್ರವಿಸುವ ಲಾಲಾರಸದ ಪ್ರಮಾಣವನ್ನು ಹೆಚ್ಚಿಸುತ್ತದೆ. ಏಲಕ್ಕಿ ಕಾಳನ್ನು ಅಗಿಯುವಾಗ, ಲಾಲಾರಸ ಗ್ರಂಥಿಗಳನ್ನು ಉತ್ತೇಜಿಸುವ ಸಾರಭೂತ ತೈಲಗಳನ್ನು ಬಿಡುಗಡೆ ಮಾಡುತ್ತದೆ. ಇದು ಹೊಟ್ಟೆಯ ಒಳಪದರವನ್ನು ಉತ್ತಮವಾಗಿ ಕಾರ್ಯನಿರ್ವಹಿಸಲು ಉತ್ತೇಜಿಸುತ್ತದೆ ಹಾಗು ಹಸಿವನ್ನು ಸುಧಾರಿಸುತ್ತದೆ ಮತ್ತು ಅಸಿಡಿಟಿಯ ಸಮಯದಲ್ಲಿ ಅನುಭವಿಸುವ ಸುಡುವಿಕೆಯನ್ನು ಕಡಿಮೆ ಮಾಡಿ ತಂಪಾಗಿಸುತ್ತದೆ.
ಹೃದಯ ಬಡಿತ ಕಾಯ್ದುಕೊಳ್ಳುತ್ತದೆ:
ಏಲಕ್ಕಿಯು ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ನಂತಹ ಖನಿಜಗಳಿಂದ ಕೂಡಿದೆ. ಏಲಕ್ಕಿಯು ಅಗತ್ಯವಾದ ಎಲೆಕ್ಟ್ರೋಲೈಟ್ಗಳಿಗೆ ಚಿನ್ನದ ಗಣಿಯಾಗಿದೆ. ರಕ್ತ, ದೇಹದ ದ್ರವಗಳು ಮತ್ತು ಜೀವಕೋಶಗಳ ಮುಖ್ಯ ಅಂಶವೆಂದರೆ ಪೊಟ್ಯಾಸಿಯಮ್. ಇದರಿಂದ ಹೃದಯ ಬಡಿತವನ್ನು ಕ್ರಮಬದ್ಧಗೊಳಿಸಲು ಸಹಾಯ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.
ಸಲಹೆ: ದೈನಂದಿನ ಊಟಕ್ಕೆ ಏಲಕ್ಕಿ ಸೇರಿಸಿ ಅಥವಾ ಅದರ ಹೃದಯ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಲು ಏಲಕ್ಕಿ ಚಹಾ ಒಳ್ಳೆಯದು.
ರಕ್ತ ಹೀನತೆಯ ವಿರುದ್ಧ ಹೋರಾಡುತ್ತದೆ :
ಏಲಕ್ಕಿಯ ಮತ್ತೊಂದು ಪ್ರಮುಖ ಅಂಶವೆಂದರೆ ತಾಮ್ರ, ಕಬ್ಬಿಣ ಮತ್ತು ರಿಬೋಫ್ಲಾವಿನ್, ವಿಟಮಿನ್ ಸಿ ಮತ್ತು ನಿಯಾಸಿನ್ನಂತಹ ಅಗತ್ಯ ಜೀವಸತ್ವಗಳು. ಕೆಂಪು ರಕ್ತ ಕಣಗಳ ಉತ್ಪಾದನೆ ಮತ್ತು ಸೆಲ್ಯುಲಾರ್ ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಕಬ್ಬಿಣದ ಜೊತೆಗೆ ತಾಮ್ರ, ರೈಬೋಫ್ಲಾವಿನ್, ವಿಟಮಿನ್ ಸಿ ಮತ್ತು ನಿಯಾಸಿನ್ ರಕ್ತಹೀನತೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಶೀತ ಮತ್ತು ಕೆಮ್ಮನ್ನು ನಿಯಂತ್ರಿಸುತ್ತದೆ:
ಏಲಕ್ಕಿ ಆಂಟಿಟಸ್ಸಿವ್ ಮತ್ತು ಮ್ಯೂಕೋಲಿಟಿಕ್ ಗುಣಗಳನ್ನು ಹೊಂದಿದೆ. ಇದು ಲೋಳೆಯ ಉತ್ಪಾದನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೆಮ್ಮು ಮತ್ತು ಶೀತವನ್ನು ನಿವಾರಿಸುವುದರ ಜೊತೆಗೆ ಶ್ವಾಸಕೋಶದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಉಸಿರಾಟದ ಕ್ರಿಯೆಯು ಸುಧಾರಣೆಯನ್ನು ಕಾಣುವುದು. ಶ್ವಾಸಕೋಶಕ್ಕೆ ಉತ್ತಮ ಆರೋಗ್ಯವನ್ನು ನೀಡುವುದು.