ಪಾಶ್ಚಾತ್ಯ ದೇಶಗಳಲ್ಲಿ ಕಲಾವಿದರು, ಲೇಖಕರು ದಾರಿ ಬದಿಗಳಲ್ಲಿ ನಿಂತುಕೊಂಡು ತಮ್ಮ ಪುಸ್ತಕಗಳನ್ನು ಮಾರಾಟ ಮಾಡಿ ತಮ್ಮ ಮಾರುಕಟ್ಟೆಯನ್ನು ತಾವೇ ಸೃಷ್ಟಿಸಿಕೊಳ್ಳುವ ಬಗ್ಗೆ ನೀವು ಕೇಳಿರಬಹುದು. ಆದರೆ ನಮ್ಮ ದೇಶದಲ್ಲೂ ಕೂಡ ಇಂತಹ ಪ್ರಯತ್ನಕ್ಕೆ ಕೆಲವರು ಕೈ ಹಾಕುವವರು ಇದ್ದಾರೆ.
ಬೆಂಗಳೂರಿನ ಚರ್ಚ್ ಸ್ಟ್ರೀಟ್ ಬೀದಿಯಲ್ಲಿ ಒಬ್ಬ ಯುವಕ ತಾನು ಬರೆದ ಪುಸ್ತಕವನ್ನು ಮಾರಾಟ ಮಾಡುವ ವಿನೂತನ ಪ್ರಯೋಗವನ್ನು ಮಾಡುತ್ತಿದ್ದಾನೆ. ಆತನ ಹೆಸರು ಮೊಯೀನ್ ತನ್ನ ಮೊದಲ ಕಥಾಸಂಕಲನವನ್ನು ಚರ್ಚ್ ಸ್ಟ್ರೀಟ್ ಬೀದಿಯಲ್ಲಿಟ್ಟು, ತಾನೇ ಅದರ ಲೇಖಕ ಎಂಬ ಫಲಕ ಹಿಡಿದು ಮಾರಾಟ ಮಾಡುತ್ತಿದ್ದಾನೆ.
ತನ್ನ ಪುಸ್ತಕವನ್ನು ಏಕೆ ಓದಬೇಕು ಮತ್ತು ಅದರಲ್ಲಿ ಯಾವ ವಿಶೇಷವಿದೆ ಎಂದು ಕೇಳುಗರಿಗೆ ಉತ್ಸಾಹದಿಂದ ಮೊಯೀನ್ ವಿವರಿಸುತ್ತಾನೆ. ವೃತ್ತಿಯಲ್ಲಿ ರಿಯಲ್ ಎಸ್ಟೇಟ್ ಬ್ಯೂಸಿನೆಸ್ ಮಾಡುವ ಮೊಯೀನ್ ತನ್ನ ಬಹುತೇಕ ಸಮಯ ಪುಸ್ತಕ ಓದುವುದು ಮತ್ತು ಬರೆಯುವುದರಲ್ಲಿ ಕಳೆಯುತ್ತಾನೆ. ಮೂಲತಃ ಮುಂಬಯಿ ಮೂಲದವನಾಗಿರುವ ಮೊಯೀನ್ ಈ ರೀತಿ ಬೀದಿಯಲ್ಲಿ ನಿಂತು ಈವರೆಗೆ ಸುಮಾರು 4500 ಪ್ರತಿಗಳನ್ನು ಮಾರಾಟ ಮಾಡಿದ್ದಾನೆ.
ಪ್ರಸಿದ್ದ ಲೇಖಕರ ಪುಸ್ತಕಗಳು ಇಂದಿನ ಕಾಲದಲ್ಲಿ 4500 ಪುಸ್ತಕಗಳು ಅಂಗಡಿಯಲ್ಲಿ ಮಾರಾಟವಾಗುವುದೂ ಅಪರೂಪ. ಆದರೆ ಒಬ್ಬ ಯುವಕ ಬೇರೆಯವರ ಸಹಾಯವಿಲ್ಲದೇ ತಾನೊಬ್ಬನೇ ಬೀದಿಯಲ್ಲಿ ನಿಂತು ತನ್ನ ಪುಸ್ತಕದ 4500 ಪ್ರತಿಗಳನ್ನು ಮಾರಾಟ ಮಾಡಿರುವುದು ಇತರೆ ಹೊಸ ಬರಹಗಾರರಿಗೆ ಉತ್ತಮ ಸಂದೇಶ ಕೊಟ್ಟಾಂತಾಗಿದೆ. ಸ್ವಂತ ಪುಸ್ತಕ ಪ್ರಕಟ ಮಾಡಿ ತಮ್ಮ ಪುಸ್ತಕಗಳನ್ನು ಅಂಗಡಿಯಲ್ಲಿಟ್ಟು ಮಾರಾಟವಾಗುವುದಿಲ್ಲ ಎಂದು ಯೋಚಿಸುವ ಕನ್ನಡದ ಹೊಸ ಲೇಖಕರು ಇಂತಹದೇನಾದರೂ ಪ್ರಯೋಗ ಮಾಡಬಹುದು.