ಬೇಸಿಗೆಯಲ್ಲಿ ಚರ್ಮ ಹಾಗೂ ತ್ವಚೆಗೆ ಸಂಬಂಧಿಸಿದ ಸಮಸ್ಯೆಗಳು ಶುರುವಾಗುತ್ತದೆ. ಸೂರ್ಯನ ಬೆಳಕಿನಿಂದ ಟ್ಯಾನಿಂಗ್, ಪಿಗ್ಮೆಂಟೇಶನ್ ಮತ್ತು ಇತರ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಇವುಗಳಲ್ಲಿ ಒಂದು ಕುತ್ತಿಗೆಯ ಮೇಲೆ ಕೊಳಕು ಶೇಖರಣೆಯಾಗುವುದು. ಬೇಸಿಗೆಯಲ್ಲಿ ಬೆವರಿನ ಶೇಖರಣೆಯಿಂದಾಗಿ ಕುತ್ತಿಗೆಯ ಭಾಗದಲ್ಲಿ ಕಪ್ಪಾಗುತ್ತದೆ.ಇದು ನಿಮ್ಮ ಸೌಂದರ್ಯವನ್ನು ಕಡಿಮೆ ಮಾಡುತ್ತದೆ. ನೀವು ಎಷ್ಟೇ ಸೋಪ್, ಕ್ರೀಮ್ ಹಚ್ಚಿದರೂ ಕುತ್ತಿಗೆ ಬಣ್ಣ ಬದಲಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಕಪ್ಪಗಿನ ಕುತ್ತಿಗೆಯನ್ನು ಬೆಳ್ಳಗಾಗಿಸಲು ಕೆಲವು ಮನೆಮದ್ದನ್ನು ಇಲ್ಲಿ ಹೇಳಲಾಗಿದೆ ಅದನ್ನು ಉಪಯೋಗಿಸಿದರೆ ಒಂದು ಪ್ರಮಾಣದಲ್ಲಿ ಕಪ್ಪಾಗಿರುವ ಕುತ್ತಿಗೆ ಭಾಗವನ್ನು ಬೆಳ್ಳಗೆ ಮಾಡಿಕೊಳ್ಳಬಹುದು.
ಆಲೂಗಡ್ಡೆಯನ್ನು ತುರಿದು ಅದರ ರಸವನ್ನು ಕುತ್ತಿಗೆಯ ಮೇಲೆ ಹಚ್ಚಿ, 15 ನಿಮಿಷಗಳ ಕಾಲ ಬಿಡಿ. ನಂತರ ಸಾಮಾನ್ಯ ನೀರಿನಿಂದ ಅದನ್ನು ಸ್ವಚ್ಛಗೊಳಿಸಿ. ಇದನ್ನು ನಿಯಮಿತವಾಗಿ ಮಾಡುವುದರಿಂದ ನಿಮ್ಮ ಕುತ್ತಿಗೆ ಬೆಳ್ಳಗಾಗಬಹುದು.
ಒಂದು ಚಮಚ ಹಿಟ್ಟಿನಲ್ಲಿ ಎರಡು ಚಮಚ ಹಾಲು ಮತ್ತು ಒಂದು ಚಿಟಿಕೆ ಅರಿಶಿನವನ್ನು ಬೆರೆಸಿ ಪೇಸ್ಟ್ ತಯಾರಿಸಿ. ಈಗ ಈ ಪೇಸ್ಟ್ ಅನ್ನು ಕುತ್ತಿಗೆಯ ಸುತ್ತಲೂ ಹಚ್ಚಿ ಮಸಾಜ್ ಮಾಡಿ. 10 ನಿಮಿಷಗಳ ನಂತರ ಕುತ್ತಿಗೆಯನ್ನು ಸಾಮಾನ್ಯ ನೀರಿನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ ಕತ್ತಿನ ಕೊಳೆ ಸ್ವಚ್ಛವಾಗಿರುತ್ತದೆ..
ನಿಂಬೆಯಲ್ಲಿ ವಿಟಮಿನ್ ಸಿ ಇರುವುದರಿಂದ ಮೈಬಣ್ಣವನ್ನು ಸುಧಾರಿಸಲು ಸಹಾಯಮಾಡುತ್ತದೆ. ಕುತ್ತಿಗೆಗೆ ನಿಂಬೆ ರಸವನ್ನು ಹಚ್ಚಿ 15 ನಿಮಿಷಗಳ ಕಾಲ ಬಿಡಿ. ಇದರ ನಂತರ ಕುತ್ತಿಗೆಯನ್ನು ಸಾಮಾನ್ಯ ನೀರಿನಿಂದ ತೊಳೆಯಿರಿ.
ಸೌತೆಕಾಯಿಯು ಕುತ್ತಿಗೆ ಭಾಗದಲ್ಲಿರುವ ಕಪ್ಪು ಕಲೆಯನ್ನು ಕಡಿಮೆ ಮಾಡಲು ಸಹಾಯಕವಾಗುತ್ತದೆ.
ಇದಕ್ಕಾಗಿ ಎರಡು ಚಮಚ ಸೌತೆಕಾಯಿ ರಸ ಮತ್ತು ಒಂದು ಚಮಚ ಅಲೋವೆರಾ ಜೆಲ್ ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿ.ಈ ಪೇಸ್ಟ್ ಅನ್ನು ಕುತ್ತಿಗೆಗೆ ಹಚ್ಚಿ 15 ನಿಮಿಷಗಳ ನಂತರ ನೀರಿನಿಂದ ಕುತ್ತಿಗೆಯನ್ನು ಸ್ವಚ್ಛಗೊಳಿಸಿ. ಹೀಗೆ ಮಾಡುವುದರಿಂದ ಕ್ರಮೇಣವಾಗಿ ಕುತ್ತಿಗೆಯ ಭಾಗ ಬೆಳ್ಳಗಾಗುವುದರಲ್ಲಿ ಅನುಮಾನವಿಲ್ಲ.