ಕವಟೆ ಕಾಯಿ, ಟೆಪ್ಪಲ್ ಅಥವಾ ಟಿರ್ಫಾಲ್ (ಜಂಥೋಕ್ಸಿಲಮ್ ರೆಟ್ಸಾ) ಅದರ ಹೆಚ್ಚು ಪ್ರಸಿದ್ಧ ಸೋದರಸಂಬ0ಧಿ ಸ್ಜೆಚುವಾನ್ ಮೆಣಸು (ಜಂಥೋಕ್ಸಿಲಮ್ ಪೈಪರಿಟಮ್) ಗೆ ಹೋಲಿಸಿದರೆ ತುಲನಾತ್ಮಕವಾಗಿ ಅಪರೂಪದ ಮಸಾಲೆಯಾಗಿದೆ. ಸ್ವಲ್ಪ ದೊಡ್ಡ ಬೆರ್ರಿಗಳನ್ನು ಹೊಂದಿರುವ ಈ ಮಸಾಲೆಯ ಬಳಕೆಯು ಭಾರತದ ಪಶ್ಚಿಮ ಕರಾವಳಿಗೆ ಸೀಮಿತವಾಗಿದೆ. ಇದನ್ನು ಹೆಚ್ಚಾಗಿ ಮಾಂಸಹಾರಿ ಪದಾರ್ಥಗಳಲ್ಲಿ ಬಳಸಲಾಗುತ್ತದೆ.
ಟೆಪ್ಪಲ್ ಅತ್ಯಂತ ಜನಪ್ರಿಯ ‘ಕೊಂಕಣ ಮಸಾಲೆ’. ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ ಮತ್ತು ವ್ಯಾಪಕವಾಗಿ ತಿನ್ನಲಾಗುತ್ತದೆ ಮತ್ತು ಇದನ್ನು ಇತರ ಪಾಕಪದ್ಧತಿಗಳಲ್ಲಿಯೂ ಬಳಸಲಾಗುತ್ತದೆ.
ಹೆಚ್ಚಿನ ಗ್ರಾಮೀಣ ಕರಾವಳಿ ಮನೆಗಳು ತಮ್ಮ ಹಿತ್ತಲಿನಲ್ಲಿ ಎತ್ತರದ ಮುಳ್ಳಿನ ಟೆಪ್ಪಲ್(ಕವಟೆ ಕಾಯಿ) ಮರವನ್ನು ಹೊಂದಿವೆ. ಕವಟೆ ಕಾಯಿ ಎತ್ತರದ ಮುಳ್ಳಿನ ಮರಗಳಲ್ಲಿ ಬೆಳೆಯುತ್ತದೆ ಮತ್ತು ಕೊಯ್ಲು ಮಾಡುವುದು ಕಷ್ಟ.ಇದನ್ನು ವಿವಿಧ ಸಾಂಪ್ರದಾಯಿಕ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಇದು ಬಹಳ ವಿಶಿಷ್ಟವಾದ ಪರಿಮಳ / ಸುವಾಸನೆಯನ್ನು ಹೊಂದಿದೆ, ಅದನ್ನು ಗುರುತಿಸುವುದು ಸುಲಭ ಮತ್ತು ಇದರ ವಿಶೇಷತೆಯನ್ನು ಮರೆಯಲು ಕಷ್ಟ.
ಕರಿಮೆಣಸಿಗೆ ಸ್ವಲ್ಪ ಹೋಲಿಕೆಯನ್ನು ಹೊಂದಿದ್ದರೂ, ಮೆಣಸು ಕುಟುಂಬಕ್ಕೆ ಸೇರಿಲ್ಲ. ಬದಲಾಗಿ ಮರದ ಒಣಗಿದ ಹಣ್ಣುಗಳಾಗಿವೆ. ಟೆಪ್ಪಲ್ ಮುಳ್ಳಿನ ಮರದ ಮೇಲೆ ದ್ರಾಕ್ಷಿಯಂತಹ ಗೊಂಚಲುಗಳಲ್ಲಿ ಬೆಳೆಯುತ್ತದೆ. ಒಣಗಿದಾಗ, ಹಣ್ಣು ಕಂದು ಮಿಶ್ರಿತ ಕಪ್ಪು ಬಣ್ಣಕ್ಕೆ ತಿರುಗುತ್ತದೆ ಮತ್ತು ಕಪ್ಪು ಬೀಜಗಳನ್ನು ತೆರೆಯುತ್ತದೆ. ಬೀಜವನ್ನು ಬಳಸದೆ ಅದನ್ನು ಬಿಸಾಡಲಾಗುತ್ತದೆ ಮತ್ತು ಕೇವಲ ಹೊಟ್ಟು ಅಂದರೆ ಅದರ ಹೊರ ಪದರವನ್ನು(ಸಿಪ್ಪೆಯನ್ನು) ಮಾತ್ರ ಬಳಸಲಾಗುತ್ತದೆ.
ತೆಂಗಿನಕಾಯಿ ಬೇಸ್ ಹೊಂದಿರುವ ಮಾಂಸಹಾರಿ ಮತ್ತು ತರಕಾರಿ ಪದಾರ್ಥಗಳಲ್ಲಿ ಟೆಪ್ಪಲ್ ಅನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇದು ಬಲವಾದ ಮರದ ಸುವಾಸನೆಯನ್ನು ಹೊಂದಿದೆ, ಅದನ್ನು ಬಳಸುವ ಭಕ್ಷ್ಯಗಳಿಗೆ ಸ್ಪಷ್ಟವಾದ ವಿಶಿಷ್ಟ ಪರಿಮಳವನ್ನು ನೀಡುತ್ತದೆ. ನಾಲಿಗೆಯಲ್ಲಿ ಒಂದು ಸಂವೇದನೆ, ಅದು ಬಹುತೇಕ ಮರೆಯಲಾಗದು.
ಸಾಂಪ್ರದಾಯಿಕ ಭಾರತೀಯ ಅಡುಗೆ ಅಭ್ಯಾಸಗಳಿಗೆ ವ್ಯತಿರಿಕ್ತವಾಗಿ, ಇದನ್ನು ಸಾಮಾನ್ಯವಾಗಿ ಇತರ ಮಸಾಲೆಗಳೊಂದಿಗೆ ಸಂಯೋಜಿಸಲಾಗುವುದಿಲ್ಲ. ಏಕೆ0ದರೆ ಅದರ ಪರಿಮಳವನ್ನು ಸೂಕ್ಷ್ಮವೆಂದು ಪರಿಗಣಿಸಲಾಗುತ್ತದೆ ಮತ್ತು ಇತರ ಮಸಾಲೆಗಳ ನಡುವೆ ಸುಲಭವಾಗಿ ಕಳೆದುಹೋಗುತ್ತದೆ.
ಇದನ್ನು ಚೀನಿ ಆಹಾರ ಪದ್ಧತಿಗಳಲ್ಲಿಯೂ ಹೆಚ್ಚಾಗಿ ಬಳಸಲಾಗುತ್ತದೆ.ಇದು ನಾಲಿಗೆಯನ್ನು ಏಕಕಾಲದಲ್ಲಿ ಬೆಚ್ಚಗಾಗಿಸುತ್ತದೆ ಮತ್ತು ತಂಪಾಗಿಸುತ್ತದೆ ಮತ್ತು ಯಾವುದೇ ಮಾಂಸಹಾರಿ ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ.
ಕರಾವಳಿಯ ಸ್ಥಳೀಯ ಅಂಗಡಿಗಳಲ್ಲಿ ಮಾತ್ರ ಅದು ಕೂಡ ತೀರ ಅಪರೂಪಕ್ಕೆ ದುಬಾರಿ ಬೆಲೆಗೆ ಲಭ್ಯವಿರುತ್ತದೆ.