ಸಾಮಾನ್ಯವಾಗಿ ಮಹಿಳೆಯರು ತಮ್ಮ ಮನಸ್ಸಿನ ಮಾತುಗಳನ್ನು ಪ್ರತಿಯೊಬ್ಬರಲ್ಲೂ ಹಂಚಿಕೊಳ್ಳುತ್ತಾರೆ. ಅವರ ಹತ್ತಿರ ಯಾವ ಗುಟ್ಟು ಕೂಡ ನಿಲ್ಲುವುದಿಲ್ಲ. ಆದರೆ ಪುರುಷರು ಮಾತ್ರ ತಮ್ಮ ಮನಸ್ಸಿನ ಮಾತನ್ನು ಇತರರ ಬಳಿ ಮುಕ್ತವಾಗಿ ಮಾತನಾಡುವುದಿಲ್ಲ. ಯಾರು ಎಷ್ಟೇ ನಂಬಿಗಸ್ತರಾದರು ಕೂಡ ಅವರೊಂದಿಗೆ ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಪುರುಷರು ಇಷ್ಟ ಪಡುವುದಿಲ್ಲ.
ಪುರುಷರು ಎಂದಿಗೂ ದುರ್ಬಲರಾಗಲು ಸಾಧ್ಯವಿಲ್ಲ, ಅದಕ್ಕಾಗಿಯೇ ಪ್ರತಿಯೊಬ್ಬ ಪುರುಷನು ತನ್ನನ್ನು ತಾನು ಬಲಶಾಲಿ ಎಂದು ಸಾಬೀತುಪಡಿಸಲು ತನ್ನ ಮಾತುಗಳನ್ನು ಎದೆಯಲ್ಲಿ ಇಟ್ಟುಕೊಳ್ಳುತ್ತಾರೆ. ಇದರಿಂದಾಗಿ ಅವನು ತನ್ನ ಹತ್ತಿರದ ಮತ್ತು ಆತ್ಮೀಯರಿಂದ ಅಗತ್ಯವಿದ್ದರು ತಮ್ಮ ಭಾವನೆಯನ್ನು ಹೇಳಿಕೊಳ್ಳಲು ಬಯಸುವುದಿಲ್ಲ.
ಪುರುಷರು ತಮ್ಮ ಭಾವನೆಗಳನ್ನು ದೀರ್ಘಕಾಲದವರೆಗೆ ನಿಗ್ರಹಿಸುವುದರಿಂದ ಮಾನಸಿಕ ಕಾಯಿಲೆಗಳಿಗೆ ಬಲಿಯಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಆದರೆ ಇವೆಲ್ಲವನ್ನು ಲೆಕ್ಕಿಸದೆ, ಪುರುಷರು ವೈಚಾರಿಕತೆ ಮತ್ತು ಸಂಪ್ರದಾಯವಾದಕ್ಕೆ ಆದ್ಯತೆ ನೀಡುತ್ತಾರೆ. ಯಾಕೆಂದರೆ ಅವರಿಗೆ ಪುರುಷರು ಕಲ್ಲಿನಂತೆ ಬಲಶಾಲಿ ಎಂದು ಬಿಂಬಿಸಿ ಅಭ್ಯಾಸವಾಗಿರುತ್ತದೆ.
ಎಲ್ಲಿ ತಮ್ಮ ಭಾವನೆಯನ್ನು ಇತರರ ಮುಂದೆ ಹೇಳಿಕೊಂಡು ಬಿಟ್ಟರೆ ದುರ್ಬಲರಾಗಿ ಕಾಣುತ್ತೆವೆ. ಎನ್ನುವ ಭಯ ಅವರಲ್ಲಿರುತ್ತದೆ. ಹಾಗಾಗಿ ಅವರು ತಮ್ಮ ಭಾವನೆಗಳನ್ನು ಮರೆಮಾಡಲು ಪ್ರಯತ್ನಿಸುತ್ತಾರೆ. ಇದನ್ನು ಪುರುಷರು ಇತರರ ಮುಂದೆ ದುರ್ಬಲರಾಗಿ ಕಾಣಿಸಿಕೊಳ್ಳದಿರುವ ಪರಿಣಾಮಕಾರಿ ಮಾರ್ಗವೆಂದು ಪರಿಗಣಿಸುತ್ತಾರೆ.
ತಮ್ಮ ಭಾವನೆಗಳನ್ನು ಆರೋಗ್ಯಕರ ರೀತಿಯಲ್ಲಿ ವ್ಯಕ್ತಪಡಿಸಲು ಸಾಧ್ಯವಾಗುವ ಪುರುಷರು ಆತಂಕ, ಖಿನ್ನತೆ ಮತ್ತು ಇತರ ಮಾನಸಿಕ ಆರೋಗ್ಯ ತೊಂದರೆಗಳನ್ನು ಹೊಂದಿರುವುದು ಕಡಿಮೆ ಎಂದು ಎಂದು ತಜ್ಞರು ಅಭಿಪ್ರಾಯಪಟ್ಟಿರುತ್ತಾರೆ.
ಜೊತೆಗೆ, ನಿಮ್ಮ ಭಾವನೆಗಳನ್ನು ನೀವು ಇತರರೊಂದಿಗೆ ಹಂಚಿಕೊಂಡಾಗ, ಅದು ಸಂಪರ್ಕ ಮತ್ತು ನಂಬಿಕೆಯ ಅರ್ಥವನ್ನು ಸೃಷ್ಟಿಸುತ್ತದೆ, ಇದು ನಿಮ್ಮ ಜೀವನದಲ್ಲಿ ಎಲ್ಲಾ ಸಂಬಂಧಗಳನ್ನು ಬಲಪಡಿಸುತ್ತದೆ. ಮಾನಸಿಕ ಆರೋಗ್ಯ ಮತ್ತು ಭಾವನೆಗಳ ಬಗ್ಗೆ ಮುಕ್ತವಾಗಿ ಮಾತನಾಡು ಪುರುಷರಲ್ಲಿ ಜಾಗೃತಿ ಮೂಡಿಸುವುದು ಮುಖ್ಯ. ಇದು ಮಾನಸಿಕ ಆರೋಗ್ಯ ವೃತ್ತಿಪರರೊಂದಿಗೆ ಮಾತನಾಡಬೇಕು. ವಿಶ್ವಾಸಾರ್ಹ ಸ್ನೇಹಿತ ಅಥವಾ ಸಂಬಂಧಿಕರೊಂದಿಗೆ ಮನಸ್ಸಿನ ಮಾತನ್ನು ಹಂಚಿಕೊಳ್ಳುವುದು ಮುಖ್ಯ. ಆಗ ಮನಸ್ಸು ಹಗುರವಾಗಿ ಆರಾಮದಾಯಕವಾಗಿರುತ್ತದೆ ಅಲ್ಲದೆ ಮಾನಸಿಕವಾಗಿ ಕೂಡ ಮನಸು ದೃಢವಾಗಿರುತ್ತದೆ.