ಬೆಂಗಳೂರು: ಕ್ರಿಕೆಟ್ ಕ್ಷೇತ್ರದ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರು ತಾವು ಈವರೆಗೆ ತಂಬಾಕು ಜಾಹಿರಾತಿನಲ್ಲಿ ನಟಿಸದೇ ಇರುವುದಕ್ಕೆ ತಮ್ಮ ತಂದೆಯ ಸಲಹೆಯೇ ಕಾರಣ ಎಂದು ತಿಳಿಸಿದ್ದಾರೆ.
ತಂಬಾಕು ಹಾಗೂ ಅದರ ಉತ್ಪನ್ನಗಳನ್ನು ಉತ್ತೇಜನ ಹಾಗೂ ಪ್ರೊಮೋಟ್ ಮಾಡಲು ಸಾಕಷ್ಟು ಅವಕಾಶಗಳು ಬಂದಿತ್ತು. ಆದರೆ ಜೀವನದಲ್ಲಿ ಫಿಟ್ನೆಸ್ ಹಾಗೂ ಶಿಸ್ತನ್ನು ಬೆಳೆಸಿಕೊಳ್ಳುವುದು ತುಂಬಾ ಮುಖ್ಯವಾಗುತ್ತದೆ ಎಂದು ತೆಂಡೂಲ್ಕರ್ ಹೇಳಿದ್ದಾರೆ.
ಈ ಬಗ್ಗೆ ಮಹಾರಾಷ್ಟ್ರ ಸರ್ಕಾರದ ಸ್ವಚ್ಛ ಮುಖ್ ಅಭಿಯಾನ್ (ಎಸ್ಎಂಎ) ಗೆ ನಗುವಿನ ರಾಯಭಾರಿಯಾಗಿ ನೇಮಕಗೊಂಡ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಭಾರತ ಕ್ರಿಕೆಟ್ ತಂಡಕ್ಕಾಗಿ ಆಡಲು ಆರಂಭಿಸಿದಾಗ ಶಾಲಾ ವಿದ್ಯಾಭ್ಯಾಸ ಮುಗಿದಿದ್ದು, ನಂತರ ನನಗೆ ತಂಬಾಕು ಉತ್ಪನ್ನಗಳನ್ನು ಪ್ರೊಮೋಟ್ ಮಾಡಲು ಹಲವು ಅವಕಾಶಗಳು ಬಂದಿತ್ತು. ಆಗ ಬಂದ ಆಫರ್ ಗಳನ್ನು ತಂದೆಯ ಸಲಹೆ ಮೇರೆಗೆ ನಿರಾಕರಿಸಿದ್ದೆ. ಬಾಯಿಯ ಆರೋಗ್ಯ ಉತ್ತಮವಾಗಿದ್ದರೆ ಒಟ್ಟಾರೆ ಆರೋಗ್ಯ ಉತ್ತಮವಾಗಿರಲಿದೆ ಎಂದು ತೆಂಡೂಲ್ಕರ್ ತಿಳಿಸಿದ್ದಾರೆ.