ದೇಶದಾದ್ಯಂತ ಎಲೆಕ್ಟ್ರಿಕ್ ವಾಹನಗಳು ದಿನೇ ದಿನೇ ಹೆಚ್ಚು ಜನಪ್ರಿಯತೆ ಗಳಿಸುತ್ತಿದ್ದು, ಎಲೆಕ್ಟ್ರಿಕ್ ವಾಹನಗಳತ್ತ ಜನರ ಒಲವು ಹೆಚ್ಚಾಗಿದೆ.
ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ವಾಹನಗಳಿಗೆ ನೀಡುತ್ತಿದ್ದ ಶೇಕಡ 40ರಷ್ಟು ಸಬ್ಸಿಡಿಯನ್ನು ಶೇಕಡ 15ಕ್ಕೆ ಇಳಿಕೆ ಮಾಡಿದೆ. ಇದರಿಂದಾಗಿ ಜೂನ್ ನಿಂದ ಎಲೆಕ್ಟ್ರಿಕ್ ವಾಹನಗಳು ದುಬಾರಿಯಾಗಲಿದೆ.
ಬೃಹತ್ ಕೈಗಾರಿಕಾ ಸಚಿವಾಲಯದಿಂದ ಉನ್ನತ ಮಟ್ಟದ ಅಂತರ್ ಸಚಿವಾಲಯದ ಸಮಿತಿಗೆ ಶಿಫಾರಸು ಮಾಡಿತ್ತು ಇದರ ಮೇರೆಗೆ ಸಬ್ಸಿಡಿಯನ್ನು ಕಡಿಮೆ ಮಾಡಲಾಗಿದೆ.
ಹಸಿರು ಇಂಧನಕ್ಕೆ ಉತ್ತೇಜನ ನೀಡಲು ದ್ವಿಚಕ್ರ ಎಲೆಕ್ಟ್ರಿಕ್ ವಾಹನಗಳ ಬಳಕೆ ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಫೇಮ್ ಇಂಡಿಯಾ ಯೋಜನೆ ಅಡಿ 10,000 ಕೋಟಿ ರೂಪಾಯಿ ಅನುದಾನವನ್ನು ನೀಡಿತ್ತು. ಹೆಚ್ಚುವರಿ ಆಗಿ ಎರಡನೇ ಹಂತದಲ್ಲಿ ದ್ವಿಚಕ್ರ ವಾಹನಗಳಿಗೆ 3,500 ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಈ ಅನುದಾನಗಳು ಇವಿಗಳ ಖರೀದಿಗೆ ಸಬ್ಸಿಡಿಯನ್ನು ಒದಗಿಸಿತ್ತು.
ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗಿ ಸಬ್ಸಿಡಿ ಹೆಚ್ಚಿನ ಮೊತ್ತ ಖರ್ಚಾಗುತ್ತಿದೆ. ಇದಕ್ಕಾಗಿ ಮೀಸಲಿಟ್ಟ ಹಣ ಕಡಿಮೆಯಾಗುತ್ತೆ ಇದು ಸಬ್ಸಿಡಿ ಪ್ರಮಾಣ ಕಡಿಮೆ ಮಾಡಲು ಮತ್ತು ತ್ರಿಚಕ್ರ ಎಲೆಕ್ಟ್ರಿಕ್ ವಾಹನಗಳ ಸಬ್ಸಿಡಿಗೆ ಇರಿಸಿದ 1000 ಕೋಟಿ ರೂಪಾಯಿ ಬಳಕೆ ಆಗದ ಹಣವನ್ನು ದ್ವಿಚಕ್ರ ವಾಹನಗಳಿಗೆ ವರ್ಗಾವಣೆ ಮಾಡಲು ಬೃಹತ್ ಕೈಗಾರಿಕಾ ಸಚಿವಾಲಯದಿಂದ ಉನ್ನತ ಮಠದ ಅಂತರ್ ಸಚಿವಾಲಯವು ಸಮಿತಿಗೆ ಶಿಫಾರಸು ಮಾಡಿತ್ತು.
ಇದರ ಮೇರೆಗೆ ಸಬ್ಸಿಡಿಯನ್ನು ಕಡಿಮೆ ಮಾಡಲಾಗಿದೆ ಹೀಗೆ ಸಬ್ಸಿಡಿ ಕಡಿಮೆ ಮಾಡುವುದರಿಂದ ಹೆಚ್ಚಿನ ಗ್ರಾಹಕರಿಗೆ ಲಾಭ ದೊರೆಯುತ್ತದೆ. ಹಾಗೆ ಮುಂದಿನ ಎರಡು ತಿಂಗಳೊಳಗೆ ಸಬ್ಸಿಡಿ ಹಣ ಸಂಪೂರ್ಣ ಖಾಲಿಯಾಗುವುದನ್ನು ತಡೆಯುವುದಕ್ಕೆ ಈ ಕ್ರಮವನ್ನು ಜಾರಿಗೆ ತರಲಾಗಿದೆ.