ಶ್ರೀಗಂಧದ ಪರಿಮಳಕ್ಕೆ ಮನಸೋಲದವರೇ ಇಲ್ಲ. ಅದರ ಎಣ್ಣೆಯಿಂದ ಹಿಡಿದು ಅದರ ಕಾಂಡದ ವರೆಗೆ ಬಾರಿ ಬೇಡಿಕೆಯಿರುವ ಮರ ಇದು.
ವಯಸ್ಸಾಗುವಿಕೆ ಪ್ರಕ್ರಿಯೆಯನ್ನು ನಿಧಾನಗೊಳಿಸಲು ಕೆಲವು ಮನೆಮದ್ದುಗಳು ಸಹಾಯ ಮಾಡುತ್ತವೆ. ಇವುಗಳು ಮುಖದ ಮೇಲಿನ ಸುಕ್ಕು, ಗೆರೆ ಮತ್ತು ಮೊಡವೆ ಹೋಗಲಾಡಿಸುತ್ತದೆ. ತ್ವಚೆಯು ಯಂಗ್ ಆಗಿ ಕಾಣುತ್ತದೆ. ಹೀಗೆ ಚರ್ಮದ ಆರೈಕೆಗೆ ನೀವು ಶ್ರೀಗಂಧವನ್ನು ಬಳಸಬಹುದು. ಇದು ತ್ವಚೆಗೆ ಸಾಕಷ್ಟು ಪ್ರಯೋಜನಕಾರಿಯಾಗಿದೆ.
ಪ್ರತಿದಿನವೂ ಶ್ರೀಗಂಧವನ್ನು ತೇಯ್ದು ಪೇಸ್ಟ್ ನ್ನು ಮುಖಕ್ಕೆ ಹಚ್ಚಿದರೆ ವಯಸ್ಸಾಗುವಿಕೆ ಪ್ರಕ್ರಿಯೆ, ಸುಕ್ಕು, ಗೆರೆಗಳು ಕಡಿಮೆ ಆಗುತ್ತವೆ. ನಿಯಮಿತವಾಗಿ ಶ್ರೀಗಂಧವನ್ನು ಚರ್ಮಕ್ಕೆ ಹಚ್ಚಿದರೆ ಸತ್ತ ಜೀವಕೋಶಗಳು ತೆರವಾಗುತ್ತವೆ. ಇದು ಚರ್ಮವನ್ನು ತೇವಾಂಶದಿಂದ ಇಡುತ್ತದೆ. ಚರ್ಮವು ಹೊಳೆಯುತ್ತದೆ.
ಜೇನುತುಪ್ಪದ ಜೊತೆ ಶ್ರೀಗಂಧ ಬಳಸಿ. ಇದು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ. ಚರ್ಮವನ್ನು ತಾಜಾ ಆಗಿರಿಸುತ್ತದೆ. ಶ್ರೀಗಂಧವನ್ನು ಜೇನುತುಪ್ಪದ ಜೊತೆ ಬೆರೆಸಿ ಹಚ್ಚಿರಿ. ಇದು ಚರ್ಮದ ಮೇಲಿನ ಕಲೆಗಳು ನಿವಾರಣೆಯಾಗಲು ಸಹಾಯ ಮಾಡುತ್ತದೆ. ಕೈ ಮತ್ತು ಪಾದಗಳ ಮೇಲೂ ಹಚ್ಚಬಹುದು.