ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸೋಮವಾರದಿಂದ ಮೂರು ದಿನಗಳ ವಿಶೇಷ ವಿಧಾನಸಭಾ ಅಧಿವೇಶನ ನಡೆಸಲಿದೆ ಎಂದು ತಿಳಿಸಿದೆ.
ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದ ನಂತರ ವಿಧಾನಸೌಧಕ್ಕೆ ಆಗಮಿಸಿ ಸಚಿವ ಸಂಪುಟ ಸಭೆ ನಡೆಸಿದ ಸಿದ್ದರಾಮಯ್ಯ, ಬಳಿಕ ಸುದ್ದಿಗೋಷ್ಠಿ ನಡೆಸಿ ಸೋಮವಾರದಿಂದ 3 ದಿನಗಳ ವಿಶೇಷ ಅಧಿವೇಶನ ನಡೆಸುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಇದೇ ವೇಳೆ ನೂತನವಾಗಿ ಆಯ್ಕೆಯಾಗಿರುವ ಶಾಸಕರಿಗೆ ಪ್ರಮಾಣ ವಚನ ಭೋದಿಸಬೇಕಿರುವ ಕಾರಣ ಸೋಮವಾರದಿಂದ 3 ದಿನಗಳ ವಿಶೇಷ ಅಧಿವೇಶನ ನಡೆಸಲಾಗುತ್ತದೆ ಎಂದರು.
ಹಂಗಾಮಿ ಸ್ಪೀಕರ್ ಆಗಿ ಆರ್.ವಿ.ದೇಶಪಾಂಡೆ ನೇಮಕಗೊಳ್ಳಲಿದ್ದಾರೆ. ಬಳಿಕ ನೂತನ ಸ್ಪೀಕರ್ ಅವರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.
–
2024 ರಲ್ಲಿ ಕ್ವಾಡ್ ಶೃಂಗಸಭೆಯನ್ನು ಭಾರತ ಆಯೋಜಿಸಲಿದೆ ಎಂದು ಪ್ರಧಾನಿ ಮೋದಿ ಅವರು ಜಪಾನ್ ನ ಹಿರೋಶಿಮಾದಲ್ಲಿ ಜಿ7 ಶೃಂಗಸಭೆಯಲ್ಲಿ ಘೋಷಣೆ ಮಾಡಿದ್ದಾರೆ.
ಜಾಗತಿಕ ಒಳಿತಿಗಾಗಿ, ಜನರ ಕಲ್ಯಾಣ, ಸಮೃದ್ದಿ ಮತ್ತು ಶಾಂತಿಗಾಗಿ ಕ್ವಾಡ್ ಪ್ರಯತ್ನಗಳನ್ನು ಮುಂದುವರೆಸುತ್ತದೆ ಎಂದು ಪ್ರಧಾನಿ ಮೋದಿ ತಿಳಿಸಿದರು.
2024ರಲ್ಲಿ ಕ್ವಾಡ್ ಶೃಂಗಸಭೆಯನ್ನು ಆಯೋಜಿಸಲು ಭಾರತ ಸಂತಸಪಡಲಿದೆ ಎಂದಿದ್ದಾರೆ.
–
ರಾಜ್ಯ ರಾಜಧಾನಿ ಬೆಂಗಳೂರನ್ನು ವರುಣ ತಂಪಾಗಿಸಿದ್ದಾನೆ. ಇಂದು ಬೆಂಗಳೂರಿನಲ್ಲಿ ಸಂಜೆ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ.
ಬಿಸಿಲ ಧಗೆಯಿಂದ ಕಂಗೆಟ್ಟಿದ್ದ ಜನರಿಗೆ ವರುಣ ತಂಪೆರೆದಿದ್ದಾನೆ. ಕಳೆದ ಎರಡು ದಿನಗಳಿಂದ ನಗರದಲ್ಲಿ ಮುಂಜಾನೆಯಿಂದ ಸಂಜೆಯವರೆಗೆ ಬಿಸಿಲು ನೆತ್ತಿಗೇರಿತ್ತು.
ಆದರೆ ಇಂದು ಸಂಜೆ ಸುಮಾರು 5 ಗಂಟೆಗೆ ಸುರಿದ ಮಳೆಯಿಂದ ಬೆಂಗಳೂರು ತಣ್ಣಗಾಗಿದೆ. ಆದರೆ ಮಳೆಯಿಂದಾಗಿ ವಾಹನ ಸಂಚಾರ ಅಸ್ಥವ್ಯಸ್ಥವಾಗಿತ್ತು. ವೀಕೆಂಡ್ ಮೂಡಿನಲ್ಲಿದ್ದ ಜನತೆಗೆ ಮಳೆ ನಿರಾಸೆ ತಂದಿದೆ.
ನಗರದ ಕಾರ್ಪೋರೇಶನ್ ಸರ್ಕಲ್ ಬಳಿ ಬಿಎಂಟಿಸಿ ಬಸ್ ಹಾಗೂ ಆಟೋ ಮೇಲೆ ಬೃಹತ್ ಮರ ಉರುಳಿ ಬಿದ್ದಿದೆ.
–
ಬ್ರಿಟನ್ ನ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ತಮ್ಮ 58ನೇ ವಯಸ್ಸಿನಲ್ಲಿ 8ನೇ ಮಗುವಿಗೆ ತಂದೆಯಾಗಿದ್ದಾರೆ.
ಹೌದು, ತಮ್ಮ 3ನೇ ಪತ್ನಿ ಕ್ಯಾರಿ ಜಾನ್ಸನ್ ದಂಪತಿ ತಮ್ಮ ಮೂರನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ.
ಈ ಬಗ್ಗೆ ಸ್ವತಃ ಬೋರಿಸ್ ಜಾನ್ಸನ್ ಪತ್ನಿ ಕ್ಯಾರಿ ಜಾನ್ಸನ್ ಅವರು ಇನ್ಸ್ಟಾಗ್ರಾಮ್ ನಲ್ಲಿ ಮಾಹಿತಿ ನೀಡಿದ್ದು, ತಮ್ಮ ಇಬ್ಬರು ಮಕ್ಕಳ ಫೋಟೋವನ್ನು ಹಂಚಿಕೊಂಡು ಹೊಸ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವುದಾಗಿ ಹೇಳಿದ್ದಾರೆ.
ಕಳೆದ 8 ತಿಂಗಳಿನಿಂದ ನಾನು ನನ್ನ ಕುಟುಂಬ ಪುಟ್ಟ ಮಗುವಿನ ಭೇಟಿಗೆ ಕುತೂಹಲದಲ್ಲಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಮೇ.2021 ರಲ್ಲಿ ಮದುವೆಯಾದ ಬೋರಿಸ್ ಜಾನ್ಸನ್ ಮತ್ತು ಕ್ಯಾರಿ ಜಾನ್ಸನ್ ದಂಪತಿಗೆ ರೋಮಿ ಹಾಗೂ ವಿಲ್ಫ್ ಎಂಬ ಇಬ್ಬರು ಮಕ್ಕಳಿದ್ದಾರೆ. ಇದು ಬೋರಿಸ್ ಜಾನ್ಸನ್ ಅವರ ಮೂರನೇ ಮದುವೆ.
ಇದಕ್ಕೂ ಮುನ್ನ ಮರೀನಾ ವೀಲರ್ ಎಂಬುವವರೊಂದಿಗೆ ಜಾನ್ಸನ್ ಮದುವೆಯಾಗಿದ್ದರು. ಮರೀನಾ ವೀಲರ್ ರಿಂದ ಜಾನ್ಸನ್ ದಂಪತಿ 4 ಮಕ್ಕಳನ್ನು ಹೊಂದಿದ್ದಾರೆ. ಇದು ಮಾತ್ರವಲ್ಲದೆ ಜಾನ್ಸನ್ ಹೆಲೆನ್ ಮ್ಯಾಕಿನ್ಟೈರ್ ಅವರೊಂದಿಗಿನ ಸಂಬಂಧದಿಂದ ಒಂದು ಮಗುವನ್ನು ಹೊಂದಿದ್ದಾರೆ. ಮೊದಲ ಪತ್ನಿ ಅಲ್ಲೆಗ್ರಾ ಮೊಸ್ಟಿನ್-ಓವನ್ ಅವರೊಂದಿಗೆ ಮಕ್ಕಳಿಲ್ಲ.