ಕೇನ್ಸ್ ಫಿಲ್ಮ್ ಫೆಸ್ಟಿವಲ್ 2023 ಇಂದು ಅದ್ಧೂರಿಯಾಗಿ ಆರಂಭಗೊಂಡಿದ್ದು, ಮೇ27 ರವರೆಗೆ ನಡೆಯಲಿದೆ. ಈ ಉತ್ಸವಕ್ಕೆ ವಿಶ್ವದ ಮೂಲೆ ಮೂಲೆಯಿಂದ ಸಿನಿಮಾ ತಾರೆಯರು ಆಗಮಿಸುತ್ತಿದ್ದಾರೆ. ಭಾರತದಿಂದಲೂ ನಟ, ನಟಿಯರಿಗೆ ಆಹ್ವಾನ ನೀಡಲಾಗಿದೆ.
ಇಂದು ಆರಂಭವಾಗಿರುವ ಕೇನ್ಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಚ್ಚೆ ಹಾಕಿರುವ ಭಾರತೀಯ ಸೆಲೆಬ್ರಿಟಿಗಳ ಪೈಕಿ ಬಾಲಿವುಡ್ ನಟಿ ಸಾರಾ ಅಲಿಖಾನ್ ಮತ್ತು ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಕೂಡ ಸೇರಿದ್ದಾರೆ.
ಸಾರಾ ಅಲಿಖಾನ್ ಮತ್ತು ಮಾನುಷಿ ಚಿಲ್ಲರ್ ಮಾತ್ರವಲ್ಲದೇ ಬಾಲಿವುಡ್ ನಟಿ ಅನುಷ್ಕಾ ಶರ್ಮಾ,ನಟಿ ಐಶ್ವರ್ಯ ರೈ ಬಚ್ಚನ್ ಕೂಡ ಈ ಉತ್ಸವದಲ್ಲಿ ಭಾಗಿಯಾಗಲಿದ್ದಾರೆ. ಇನ್ನೂ ಆಸ್ಕರ್ ಪ್ರಶಸ್ತಿ ವಿಜೇತ ಭಾರತೀಯ ಚಲನಚಿತ್ರ ನಿರ್ಮಾಪಕಿ ಗುನೀತ್ ಮೊಂಗಾ, ನಟಿ ಇಶಾ ಗುಪ್ತಾ, ಕಂಗಬಮ್ ತೊಂಬಾ ಮತ್ತು ಸೋಶಿಯಲ್ ಮೀಡಿಯಾ ಸ್ಟಾರ್ ಮತ್ತು ಕಂಟೆಂಟರ್ ಕ್ರಿಯೆಟರ್ ಡಾಲಿ ಸಿಂಗ್ ಕೇನ್ಸ್ ಚಲಚಿತ್ರೋತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ.
ಆಸ್ಕರ್ನಲ್ಲಿ ತನ್ನ ಶಕ್ತಿಯನ್ನು ಪ್ರದರ್ಶಿಸಿದ ಪ್ಯಾನ್ ಇಂಡಿಯಾ ಮೂವಿ ಆರ್ಆರ್ಆರ್ ಕೇನ್ಸ್ನಲ್ಲಿ ನಿರಾಶೆಯಾಗಿ ಉಳಿದಿದೆ. ಆದರೆ ಕಾನು ಭೇಲ್ ಅವರ ಆಗ್ರಾ ಚಿತ್ರ ತೆರೆ ಕಾಣಲಿದೆ. ಹಿರಿಯ ನಿರ್ದೇಶಕ ಅನುರಾಗ್ ಕಶ್ಯಪ್ ನಿರ್ದೇಶನದ ಕೆನಡಿ ಚಿತ್ರವೂ ಪ್ರದರ್ಶನಗೊಳ್ಳಲಿದೆ.
ಫ್ರಾನ್ಸ್ನ ಫ್ರೆಂಚ್ ರಿವೇರಿಯಾ ಪ್ರದೇಶದ ಕ್ಯಾನೆಸ್ ಪಟ್ಟಣದಲ್ಲಿ ಸಮಾರಂಭವನ್ನು ಅದ್ಧೂರಿಯಾಗಿ ನಡೆಸಲಾಗುತ್ತದೆ. ಈ ಸಮಾರಂಭವನ್ನು ನೇರವಾಗಿ ಕೇನ್ಸ್ ಚಲನಚಿತ್ರೋತ್ಸವದ ಅಧಿಕೃತ ವೆಬ್ಸೈಟ್ನಲ್ಲಿ ವೀಕ್ಷಿಸಬಹುದು. ಇದಲ್ಲದೆ, ಕಾನ್ಸ್ ಫಿಲ್ಲಿ ಫೆಸ್ಟಿವಲ್ನ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳಲ್ಲಿ ಇದನ್ನು ವೀಕ್ಷಿಸಬಹುದು.
ಪ್ರಶಸ್ತಿ ಪಡೆದ ಭಾರತೀಯ ಚಲನಚಿತ್ರಗಳು:
*1983 ರಲ್ಲಿ ಬೆಂಗಾಲಿ ಮತ್ತು ಹಿಂದಿ ಸಿನಿಮಾ ನಿರ್ದೇಶಕ ಮೃಣಾಲ್ ಸೇನ್ ಅವರ ಚಲನಚಿತ್ರ ‘ಖರ್ಜಿ’ ಜ್ಯೂರಿ ವಿಭಾಗದಲ್ಲಿ ಪ್ರಶಸ್ತಿ ದೊರೆಯಿತು.
*ನಿರ್ದೇಶಕಿ ಮೀರಾ ನಾಯರ್ ಅವರ ಚಲನಚಿತ್ರ ‘ಸಲಾಮ್ ಬಾಂಬೆ’ ಕ್ಯಾಮೆರಾ ಡಿ’ಓರ್ ಉಲ್ಲೇಖ ವಿಶೇಷ ವಿಭಾಗದಲ್ಲಿ ಪ್ರಶಸ್ತಿ ದೊರೆಯಿತು.
*1998ರಲ್ಲಿ ಮುರಳಿ ನಾಯರ್ ಅವರ ಡೆತ್ ಥ್ರೋನ್ ,ಮನೀಶ್ ಝಾ ಅವರ ‘ಎ ವೆರಿ ವೆರಿ ಸೈಲೆಂಟ್ ಫಿಲ್ಮ್, ಗೀತಾಂಜಲಿ ರಾವ್ ಅವರ ‘ಪ್ರಿಂಟೆಡ್ ರಾಂಬೋ’ ಸಿನಿಮಾಗೆ ಪ್ರಶಸ್ತಿ ದೊರೆಯಿತು.
* 2013 ರಲ್ಲಿ ರಿತೇಶ್ ಬಾತ್ರಾ ಅವರ ದಿ ಲಂಚ್ಬಾಕ್ಸ್ ಅನ್ನು ವಿವಿಧ ವಿಭಾಗಗಳಲ್ಲಿ ಪ್ರದರ್ಶಿಸಿ ಗೌರವಿಸಲಾಯಿತು.
*2015ರಲ್ಲಿ ನೀರಜ್ ಘಯ್ವಾನ್ ಅವರ ‘ಮಸಾನ್’ ಚಲನಚಿತ್ರವನ್ನು ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಯಿತು. ವಿಕ್ಕಿ ಕೌಶಲ್ ಮತ್ತು ರಿಚಾ ಚಡ್ಡಾ ಮುಂತಾದ ತಾರೆಯರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
*ಇನ್ನೂ 2021 ರಲ್ಲಿ ಪಾಯಲ್ ಕಪಾಡಿಯಾ ಅವರ ‘ಎ ನೈಟ್ ಆಫ್ ನೋಯಿಂಗ್ ನಥಿಂಗ್’ ಚಲನಚಿತ್ರದ ಪ್ರದರ್ಶನದ ನಂತರ, ಇದನ್ನು ಗೋಲ್ಡನ್ ಐ ವಿಭಾಗದಲ್ಲಿ ಗೌರವಿಸಲಾಯಿತು.
*ಇದಲ್ಲದೆ ಶೌನಕ್ ಸೇನ್ ಅವರ ಆಲ್ ದಿ ಬ್ರೀತ್ಸ್ ಅನ್ನು ‘ಗೋಲ್ಡನ್ ಐ’ ನಲ್ಲಿ ಗೌರವಿಸಲಾಯಿತು.
* 2022 ಉತ್ಸವದಲ್ಲಿ ನಟ ಟಾಮ್ ಕ್ರೂಸ್ ಅವರಿಗೆ ಗೌರವ ಸಲ್ಲಿಸಲಾಯಿತು. ಅವರ ಚಲನಚಿತ್ರ ಟಾಪ್ ಗನ್: ಮೇವರಿಕ್ ಉತ್ಸವದಲ್ಲಿ ಪ್ರಥಮ ಪ್ರದರ್ಶನಗೊಂಡಿತು ಮತ್ತು ಅಲ್ಲಿ ನಟನಿಗೆ ಗೌರವ ಪಾಮ್ ಡಿ’ಓರ್ ಪ್ರಶಸ್ತಿಯನ್ನು ನೀಡಲಾಯಿತು. ಈ ಬಾರಿ ಯಾವ ಚಿತ್ರಕ್ಕೆ ಪಾಮ್ ಡಿ’ಓರ್ ಪ್ರಶಸ್ತಿ ದೊರೆಯಲಿದೆ ಕಾದು ನೋಡಬೇಕಿದೆ.