ಎಷ್ಟೋ ಜನರಿಗೆ ಬೆಳಗ್ಗೆ ಬೇಗ ಏಳುವ ಅಭ್ಯಾಸವೇ ಇಲ್ಲ. ಆದರೆ ಬೆಳಗ್ಗೆ ಬೇಗ ಎದ್ದು ಕೆಲ ಹೊತ್ತು ನಮ್ಮ ಮನಸ್ಸಿನೊಂದಿಗೆ ಕಾಲ ಕಳೆಯುವುದರಲ್ಲಿ ಇರುವ ಖುಷಿ ಎಷ್ಟಿದೆ ಅಂತ ಅನುಭವಿಸಿದವರಿಗೆ ಗೊತ್ತು. ಇನ್ನು ನಿಮ್ಮ ಇಡೀ ದಿನ ಉತ್ತಮವಾಗಿರಬೇಕು ಅಂದ್ರೆ ಈ ತಪ್ಪುಗಳನ್ನು ಮಾಡಬೇಡಿ..
• ಲೇಟಾಗಿ ಮಲಗೋದು, ಲೇಟಾಗಿ ಏಳೋದು ಈ ಅಭ್ಯಾಸವನ್ನು ಬಿಟ್ಟುಬಿಡಿ.
• ಎಚ್ಚರ ಆದ ಮೇಲೆ ಬೆಡ್ ಮೇಲೆ ಕೂರದೇ ಎದ್ದು ಬಿಡಿ.
• ಎದ್ದ ಕೂಡಲೇ ಮೊಬೈಲ್, ಸೋಶಿಯಲ್ ಮೀಡಿಯಾ ನೋಡಬೇಡಿ.
• ಎದ್ದ ಕೂಡಲೇ ನಿಮ್ಮ ಹಾಸಿಗೆ ಕ್ಲೀನ್ ಮಾಡಿ, ಹೊದಿಕೆ ಮಡಚಿಡಿ.
• ಪ್ರತಿ ಬೆಳಗ್ಗೆಗೂ ಒಂದು ರೂಟೀನ್ ಇರಲಿ.
• ಖಾಲಿ ಹೊಟ್ಟೆಯಲ್ಲಿ ಕಾಫಿ, ಟೀ ಬೇಡ. ಬಿಸಿ ನೀರು ಕುಡಿಯಿರಿ.
• ನಿಶಬ್ದವಾದ ಜಾಗದಲ್ಲಿ ಒಂದು 10 ನಿಮಿಷ ಕೂತು ಧ್ಯಾನ ಮಾಡಿ.
• ಬೆಳಗ್ಗೆ ಎದ್ದ ಕೂಡಲೇ ಮನೆಯಲ್ಲಿರುವವರ ಸಣ್ಣ ತಪ್ಪುಗಳನ್ನು ಹುಡುಕಿ ಬೈಯೋದು ಬೇಡ.
• ಎಂದಿಗೂ ತಿಂಡಿ ಸ್ಕಿಪ್ ಮಾಡಬೇಡಿ.