ಪ್ರಸ್ತುತ ಪರಿಸ್ಥಿತಿಯಲ್ಲಿ ಕಾಂಗ್ರೆಸ್ಗೆ ಅನುಕೂಲವಾಗುವ ಸ್ಪಷ್ಟಸಾಧ್ಯತೆಗಳಿವೆ, ಬಿಜೆಪಿ ಪಕ್ಷ ರಾಜ್ಯದಲ್ಲಿನ ಆಡಳಿತ ವಿರೋಧಿ ಅಲೆ, ಒಗ್ಗಟ್ಟಿನ ಕೊರತೆಯಿಂದಾಗಿ ಹಿನ್ನಡೆ ಸಾಧಿಸುವ ಸಾಧ್ಯತೆಗಳಿವೆ. ಆದರೂ ರಾಜ್ಯದಲ್ಲಿ ಅವಮಾನಕರ ಸೋಲನ್ನು ತಪ್ಪಿಸಿಕೊಳ್ಳುವ ಭರವಸೆಯನ್ನು ಬಿಜೆಪಿ ಹೊಂದಿದೆ.
ಬಿಜೆಪಿಯಲ್ಲಿ ಆರಂಭದಲ್ಲಿ ಟಿಕೆಟ್ ಹಂಚಿಕೆ, ಪ್ರಚಾರ, ನಾಯಕತ್ವ ವಿಷಯವಾಗಿ ಪಕ್ಷದ ನಾಯಕರು ಮತ್ತು ಸದಸ್ಯರಲ್ಲಿ ಗೊಂದಲ ಉಂಟಾಗಿತ್ತು. ಆದರೆ ಬಿಜೆಪಿ ತನ್ನ ಅಭಿವೃದ್ಧಿಯ ಕಾರ್ಯಗಳನ್ನು ತೋರಿಸಿ ಮತ ಪ್ರಚಾರವನ್ನು ನಡೆಸಿತ್ತು.
ಮತ ಪ್ರಚಾರ ಪ್ರಕ್ರಿಯೆಯ ಆರಂಭದಲ್ಲಿ ಬಿಜೆಪಿ ಪಕ್ಷವು ಹಿಂದೆ ಬಿದ್ದಿದ್ದರಿಂದ, ಅದು ಕ್ರಮೇಣ ತನ್ನ ಗಮನವನ್ನು ಹಿಂದುತ್ವ ಸಿದ್ಧಾಂತದತ್ತ ತಿರುಗಿಸಿತ್ತು, ವಿಶೇಷವಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ಉಲ್ಲೇಖಿಸಿದ ನಂತರ. “ಕರ್ನಾಟಕದಲ್ಲಿ ಹಿಂದುತ್ವ ವಿಧಾನವು ಪರಿಣಾಮಕಾರಿಯಾಗುವುದಿಲ್ಲ ಎಂದು ನಾವು ಅರಿತುಕೊಂಡಿದ್ದೇವೆ, ಆದರೆ ನಾವು ಹಾದಿ ತಪ್ಪಿದ್ದೇವೆ” ಎಂದು ರಾಜ್ಯ ಬಿಜೆಪಿ ನಾಯಕರೊಬ್ಬರು ಒಪ್ಪಿಕೊಂಡಿದ್ದಾರೆ.