ಕಾತುರದಿಂದ ಇಡೀ ರಾಜ್ಯವೇ ಕಾಯುತ್ತಿದ್ದ ಕರ್ನಾಟಕ ವಿಧಾನಸಭಾ ಚುನಾವಣೆ ನಿನ್ನೆ ನಡೆದಿದ್ದು, ರಾಜ್ಯದ ಭವಿಷ್ಯ ಸದ್ಯಕ್ಕೆ ಇವಿಎಂ ಮತಯಂತ್ರದಲ್ಲಿ ಭದ್ರವಾಗಿದೆ. ಅಲ್ಲಲ್ಲಿ ರಾಜಕೀಯ ಪಕ್ಷ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದ್ದು ಹೊರತು ಪಡಿಸಿದರೆ ಮತದಾನ ಶಾಂತಿಯುತವಾಗಿ ನಡೆಯಿತು.
ರಾಜ್ಯದಲ್ಲಿ ಈ ಬಾರಿ ಶೇ. 72.82 ರಷ್ಟು ಮಂದಿ ಮತದಾನ ಮಾಡುವ ಮೂಲಕ ಹಿಂದಿನ ಬಾರಿಯ ಚುನಾವಣೆಯ ದಾಖಲೆಯನ್ನು ಮುರಿದು ಹೊಸ ಮೈಲಿಗಲ್ಲನ್ನು ಸೃಷ್ಟಿಸಿದೆ. ಕಳೆದ ಬಾರಿಯ ಚುನಾವಣೆಯಲ್ಲಿ (2018) 72.44% ಮತದಾನವಾಗಿತ್ತು.
ಗರಿಷ್ಠ ಮತದಾನವು ಚಿಕ್ಕಬಳ್ಳಾಪುರ- 85% , ಕನಿಷ್ಠ ಮತದಾನ ಬೆಂಗಳೂರು ಉತ್ತರ – 52% ಜಿಲ್ಲೆಗಳಲ್ಲಿ ಆಗಿದೆ. ರಾಜ್ಯದ 8,545 ಮತಗಟ್ಟೆಗಳಲ್ಲಿ ಬೆಳಗ್ಗೆ 7ರಿಂದ ಸಂಜೆ 6 ರವರೆಗೆ ಮತದಾನ ನಡೆಯಿತು. ಒಟ್ಟು 5,30,85,566 ಮಂದಿ ಮತದಾರರ ಪೈಕಿ ಶೇ.72.82 ರಷ್ಟು ಮಂದಿ ಮತಚಲಾವಣೆಯನ್ನು ಮಾಡಿದ್ದಾರೆ.
ವಿಜಯಪುರ ಸೇರಿ ಕೆಲವೆಡೆ ತಾಂತ್ರಿಕ ದೋಷ ಹೊರತುಪಡಿಸಿ ಮಿಕ್ಕಂತೆ ಚುನಾವಣೆಯ ಮತದಾನಕ್ಕೆ ಯಾವುದೇ ಅಡ್ಡಿಯಾಗಲಿಲ್ಲ. ಬೆಂಗಳೂರು, ಶ್ರೀನಿವಾಸಪುರ, ರಾಮನಗರ ಜಿಲ್ಲೆಯ ಕೆಲವೆಡೆ ಕಾರ್ಯಕರ್ತರ ಮಾತಿನ ಚಕಮಕಿ ಹೊರತುಪಡಿಸಿದರೆ ರಾಜ್ಯದಲ್ಲಿ ಶಾಂತಿಯುತ ಮತದಾನ ನಡೆಯಿತು.
ಅತಿ ಹೆಚ್ಚು ಮತದಾನವಾದ ಜಿಲ್ಲೆಗಳಿವು:
ಚಿಕ್ಕಬಳ್ಳಾಪುರ -85.83 %
ರಾಮನಗರ – 84.98%
ಮಂಡ್ಯ – 84.36 %
ಬೆಂಗಳೂರು ಗ್ರಾಮಾಂತರ 83.76%
ತುಮಕೂರು – 83.46%
ಕೋಲಾರ – 81.22 %
ಹಾಸನ – 81.59 %
ಹಾವೇರಿ 81.17%
ಚಾಮರಾಜನಗರ – 80.81 %
ಚಿತ್ರದುರ್ಗ – 80.37 %