ಇತ್ತೀಚಿನ ದಿನಗಳಲ್ಲಿ ಕೆಲಸಗಳೊಂದಿಗೆ ವೈಯಕ್ತಿಕ ಜೀವನವನ್ನು ಬ್ಯಾಲೆನ್ಸ್ ಮಾಡುವುದರಲ್ಲಿ ಹೆಚ್ಚಿನವರು ಸೋಲುತ್ತಿದ್ದಾರೆ. ಕೆಲವೊಂದು ಸಂದರ್ಭದಲ್ಲಿ ಮನೆಯವರಿಗೆ ಟೈಮ್ ಕೊಡಲಾಗದೇ ಕೆಲಸವನ್ನು ಸರಿಯಾಗಿ ಮಾಡಲಾಗದೇ ಮನಸ್ಸಿನಲ್ಲಿ ಒತ್ತಾಡವನ್ನು ಅನುಭವಿಸುತ್ತಾರೆ. ಕೆಲಸನ ಅಥವಾ ವೈಯಕ್ತಿಕ ಜೀವನನ ಎಂದು ನಿಮ್ಮಲ್ಲಿ ಪ್ರಶ್ನೆ ಕಾಡಲು ಪ್ರಾರಂಭವಾಗುತ್ತದೆ. ಅಂತಹ ಸಂದರ್ಭದಲ್ಲಿ ಕೆಲಸ ಮತ್ತು ವೈಯಕ್ತಿ ಜೀವನವನ್ನು ಬ್ಯಾಲೆನಸ್ ಮಾಡಲು ಇಲ್ಲಿದೆ ಸಲಹೆ.
ನಿಮ್ಮದಲ್ಲದ ಕೆಲಸವನ್ನು ಒಪ್ಪಿಕೊಳ್ಳಬೇಡಿ:
ನಿಮಗೆ ಕೆಲಸ ಮಾಡಲು ತಿಳಿದಿದೆ ಎಂದ ಮಾತ್ರಕ್ಕೆ ಎಲ್ಲ ಕೆಲಸವನ್ನು ನಿಮ್ಮ ತಲೆಯ ಮೇಲೆ ಹಾಕಿಕೊಳ್ಳಬೇಡಿ. ಹಾಗೇ ನೀವು ಹೆಚ್ಚುವರಿ ಕೆಲಸವನ್ನು ತೆಗೆದುಕೊಂಡಾಗ ನಿಮ್ಮ ಕೆಲಸದ ಕ್ವಾಲಿಟಿ ಕಡಿಮೆಯಾಗುವ ಸಾಧ್ಯತೆಗಳೇ ಹೆಚ್ಚು. ಹಾಗೆಯೇ ಉತ್ತಮ ಗುಣಮಟ್ಟದ ಕೆಲಸವನ್ನು ನೀವು ಮಾಡದೇ ಇದ್ದಾಗ ನಿಮ್ಮ ಮೇಲೆ ನೆಗೆಟಿವ್ ಇಂಪ್ರೆಷನ್ ಬರುತ್ತದೆ. ಆದರಿಂದ ನಿಮ್ಮದಲ್ಲದ ಕೆಲಸವನ್ನು ಒಪ್ಪಿಕೊಳ್ಳಬೇಡಿ.
ಕೆಲಸದ ಮಧ್ಯೆ ಬ್ರೇಕ್ ತೆಗೆದುಕೊಳ್ಳಿ:
ಒಂದೇ ಸಮನೆ ಕೆಲಸ ಮಾಡುವುದರಿಂದ ನಿಮ್ಮ ಬ್ರೇನ್ಗೆ ಒತ್ತಡ ಬೀಳುವ ಸಾಧ್ಯತೆಗಳೇ ಹೆಚ್ಚು ಆದರಿಂದ ಕಲೆಸದ ನಡುವೆ ಸಣ್ಣ ಬ್ರೇಕ್ ತೆಗದುಕೊಳ್ಳಿ. ನಿಮ್ಮ ಬ್ರೇನ್ ಕ್ರಿಯೆಟಿವ್ ಆಗಿ ಯೋಚನೆ ಮಾಡಲು ಅದಕ್ಕೆ ಸ್ವಲ್ಪ ಸಮಯ ನೀಡಿ ಆಗ ನಿಮಗೆ ಕೆಲಸವನ್ನು ಖುಷಿಯಿಂದ ಮಾಡಲು ಸಾಧ್ಯವಾಗುತ್ತದೆ.
ಬಾಸ್ ಅಥವಾ ಟೀಂ ಹೆಡ್ ಜೊತೆ ಮುಕ್ತವಾಗಿ ಮಾತನಾಡಿ:
ನಿಮ್ಮ ಸಮಸ್ಯೆಗಳ ನಿಮ್ಮ ಬಾಸ್ ಜೊತೆ ಮಾತನಾಡುವುದರಿಂದ ಒತ್ತಡವು ಕಡಿಮೆಯಾಗುತ್ತದೆ. ನಿಮ್ಮ ಕೆಲಸದ ಬಗ್ಗೆ ರಜೆ ಸಂಬಳ ಹೈಕ್ ಈ ಎಲ್ಲಾ ವಿಚಾರವನ್ನು ನೀವು ಮುಕ್ತವಾಗಿ ಚರ್ಚಿಸುವುದರಿಂದ ಅವರಿಗೂ ನಿಮ್ಮ ಬಗ್ಗೆ ಅರ್ಥವಾಗುತ್ತದೆ ನಿಮಗೆ ಕೆಲಸ ಮಾಡಲು ಉತ್ತಮ ವಾತಾವರಣ ನಿರ್ಮಾಣವಾಗುತ್ತದೆ.
ಆರೋಗ್ಯದ ಬಗ್ಗೆ ಗಮನಕೊಡಿ:
ಕೆಲಸದ ಜೊತೆ ನಿಮ್ಮ ಆರೋಗ್ಯ ಬಗ್ಗೆ ಗಮನವಿರಲಿ. ಹೆಚ್ಚಾಗಿ ಲ್ಯಾಪ್ಟಾಪ್ ಮುಂದೆ ಕುಳಿತು ಕೆಲಸ ಮಾಡುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಒತ್ತಡವನ್ನು ತೆಗೆದುಕೊಳ್ಳುವುದರಿಂದ ಮಾನಸಿಕ ಆರೋಗ್ಯವು ಹದಗೆಡಬಹುದು. ಆದರಿಂದ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಿ.
ಕೆಲಸದ ಮಧ್ಯೆ ವೈಯಕ್ತಿಕ ಜೀವನವನ್ನು ತರಬೇಡಿ:
ನಿಮ್ಮ ವೈಯಕ್ತಿಕ ಜೀವನದಲ್ಲಿ ನಡೆದ ಘಟನೆಗಳಿಂದ ನಿಮ್ಮ ಮನಸ್ಸಿಗೆ ನೋವಾಗಿರಬಹುದು ಇದನ್ನು ಕೆಲಸದ ನಡುವೆ ತರುವುದು ಸರಿಯಲ್ಲ. ಕೆಲಸ ಮಾಡುವಾಗ ವೈಯಕ್ತಿ ಜೀವನದ ವಿಚಾರದ ಬಗ್ಗೆ ತಲೆ ಕೇಡಿಸಿಕೊಳ್ಳಬೇಡಿ. ಹಾಗೆಯೇ ಕೆಲಸದ ಒತ್ತಡವನ್ನು ನಿಮ್ಮ ಮನೆಯವರ ಮೇಲೂ ಹಾಕಬೇಡಿ ಹಾಗೇ ಮಾಡಿದರೆ ನಿಮ್ಮ ಜೀವನದ ನೆಮ್ಮದಿಯನ್ನು ಹಾಳಾಗುತ್ತದೆ.
ಸಮಯವನ್ನು ಬ್ಯಾಲೆನ್ಸ್ ಮಾಡಿ:
ಕೆಲಸಕ್ಕೆ ಸರಿಯಾದ ಟೈಮ್ಗೆ ಲಾಗ್ ಇನ್ ಆಗುವಂತೆ ಕೆಲಸ ಮುಗಿಸಿ ಸರಿಯಾದ ಟೈಮ್ಗೆ ಲಾಗೌಟ್ ಆಗುವುದು ಕೂಡ ಮುಖ್ಯವಾಗುತ್ತದೆ. ಅವಶ್ಯಕತೆ ಇದ್ದಾಗ ಮಾತ್ರ ಹೆಚ್ಚಿನ ಕೆಲಸವನ್ನು ಮಾಡಿ. ಕೆಲಸವನ್ನು ಕೆಲಸದಂತೆ ಪ್ರೀತಿಯಿಂದ ಮಾಡಿ ಆದರೆ ಕೆಲಸವನ್ನೇ ಜೀವನ ಮಾಡಿಕೊಳ್ಳಬೇಡಿ. ನಿಮ್ಮ ವೈಯಕ್ತಿಕ ಜೀವನಕ್ಕೂ ಸಮಯಕೊಡಿ.