ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ನಡುವಿನ ವಾಗ್ವಾದವು ಕ್ರಿಕೆಟ್ ವಲಯದಲ್ಲಿ ಸಖತ್ ಚರ್ಚೆಗೆ ಗುರಿಯಾಗಿತ್ತು. ಆದರೆ ಇದೀಗ ಗಂಭೀರ್ ಮತ್ತು ಕೊಹ್ಲಿಗೆ ದಂಡವನ್ನು ವಿಧಿಸಲಾಗಿದ್ದು, ಇದರ ನಡುವೆ ಕೊಹ್ಲಿಗೆ ಹೊಸ ಟೆನ್ಷನ್ ಶುರುವಾಗಿದೆ.
ಲಕ್ನೋ ಮತ್ತು ಬೆಂಗಳೂರು ನಡುವಿನ ಪಂದ್ಯದಲ್ಲಿ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ನಡುವೆ ಮೈದಾದ್ಲಲಿಯೇ ಜಗಳ ನಡೆದಿರುವುದು ಎಲ್ಲರಿಗೂ ತಿಳಿದ ಸಂಗತಿ. ಪಂದ್ಯದಲ್ಲಿ ನಿಯಮಗಳನ್ನು ಉಲ್ಲಂಘಿಸಿದಕ್ಕಾಗಿ ಆಟಗಾರರ ವಿರುದ್ಧ ದಂಡವನ್ನು ವಿಧಿಸಲಾಗಿದ್ದು, ಹೀಗಾಗಿ ಕೊಹ್ಲಿ ಮತ್ತು ಗಂಭೀರ್ಗೆ ಪಂದ್ಯದ ಸಂಪೂರ್ಣ ಶುಲ್ಕವನ್ನು ದಂಡವಾಗಿ ವಿಧಿಸಲಾಯಿತು. ಆದರೆ ವಿವಾದಗಳಿಂದ ಸುತ್ತುವರಿದಿರುವ ವಿರಾಟ್ ಕೊಹ್ಲಿ, ಮತ್ತೆ ಯಾವುದೇ ಪಂದ್ಯದಲ್ಲಿ ಈ ರೀತಿ ವರ್ತಿಸಿದರೆ ಸಂಕಷ್ಟಕ್ಕೆ ಸಿಲುಕುತ್ತಾರೆ. ಲಕ್ನೋದ ಮೆಂಟರ್ ಗೌತಮ್ ಗಂಭೀರ್ ಮತ್ತು ಬೆಂಗಳೂರಿನ ಹಿರಿಯ ಆಟಗಾರ ವಿರಾಟ್ ಕೊಹ್ಲಿ ಅವರನ್ನು ನೀತಿ ಸಂಹಿತೆಯ ಲೆವೆಲ್ -2 ರ ಅಡಿಯಲ್ಲಿ ತಪ್ಪಿತಸ್ಥರೆಂದು ಘೋಷಿಸಲಾಯಿತು.
ಮ್ಯಾಚ್ ರೆಫರಿ ಶಿಕ್ಷೆಯಾಗಿ ಇಬ್ಬರಿಗೂ ಪಂದ್ಯ ಶುಲ್ಕದ 100% ದಂಡವನ್ನು ವಿಧಿಸಿದರು. ಐಪಿಎಲ್ ನೀತಿ ಸಂಹಿತೆ ಪ್ರಕಾರ ಮತ್ತೊಮ್ಮೆ ಇಂತಹ ತಪ್ಪು ನಡೆದರೆ ವಿರಾಟ್ ಕೊಹ್ಲಿಯನ್ನು ಇಡೀ ಐಪಿಎಲ್ ಸೀಸನ್ನಿಂದ ಹೊರಹಾಕುವ ಸಾಧ್ಯತೆ ಇದೆ.
ಐಪಿಎಲ್ ನೀತಿ ಸಂಹಿತೆಯ ಪ್ರಕಾರ, ಪಂದ್ಯದ ವೇಳೆ ಎದುರಾಳಿ ತಂಡದ ಯಾವುದೇ ಆಟಗಾರನೊಂದಿಗೆ ಅನುಚಿತವಾಗಿ ವರ್ತಿಸಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಪಂದ್ಯದ ವೇಳೆ ಆಟಗಾರರು ಮೈದಾನದಲ್ಲಿ ತಪ್ಪಿತಸ್ಥರೆಂದು ಕಂಡುಬಂದರೆ, ನಂತರ 8 ಪಂದ್ಯಗಳ ನಿಷೇಧವನ್ನು ವಿಧಿಸಲಾಗುತ್ತದೆ.
ಪಂಜಾಬ್ ಕಿಂಗ್ಸ್ ಇಲೆವೆನ್ ಆಟಗಾರ ಎಸ್ ಶ್ರೀಶಾಂತ್ ಅವರೊಂದಿಗೆ ಜಗಳವಾಡಿದ್ದಕ್ಕಾಗಿ ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ವಿರುದ್ಧ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅಶಿಸ್ತಿನ ಆರೋಪದಿಂದಾಗಿ ಒಂದು ಸೀಸನ್ ಪೂರ್ತಿ ಬ್ಯಾನ್ ಆಗಿದ್ದರು. ತಪ್ಪಿತಸ್ಥರೆಂದು ಸಾಬೀತಾದ ನಂತರ, ಅವರನ್ನು 11 ಪಂದ್ಯಗಳಿಗೆ ನಿಷೇಧಿಸಲಾಗಿತ್ತು. ಆಟಗಾರ ಅಥವಾ ತಂಡವು ಮೂರಕ್ಕಿಂತ ಹೆಚ್ಚು ಬಾರಿ ನಿಯಮವನ್ನು ಉಲ್ಲಂಘಿಸಿದರೆ ಒಂದು ವರ್ಷದವರೆಗೆ ನಿಷೇಧವನ್ನು ವಿಧಿಸಬಹುದು.