ಸಾಮಾನ್ಯವಾಗಿ ಹಿಂದೂ ಧರ್ಮದ ಎಲ್ಲರ ಮನೆಯಲ್ಲಿ ತುಳಸಿ ಗಿಡ ಇದ್ದೆ ಇರುತ್ತದೆ. ಪ್ರತಿದಿನ ತುಳಸಿ ಗಿಡಕ್ಕೆ ನೀರು ಹಾಕಿ ಪೂಜೆ ಮಾಡುವುದರಿಂದ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ. ತುಳಸಿ ಗಿಡದ ಎಲೆಗಳನ್ನು ಹಿಂದು ಧರ್ಮದ ಪ್ರಕಾರ ವಿಷ್ಣುವಿನ ಪೂಜೆಯಲ್ಲಿ ಅತಿ ಹೆಚ್ಚಾಗಿ ಉಪಯೋಗಿಸಲಾಗುತ್ತದೆ. ಜನರು ತುಳಸಿ ಗಿಡ ಅಥವಾ ಲಕ್ಷ್ಮೀದೇವಿಗೆ ತಮ್ಮ ಗೌರವವನ್ನು ಸಲ್ಲಿಸಲು ಬೆಳಿಗ್ಗೆ ಎದ್ದು ಪ್ರದಕ್ಷಣೆ ಹಾಕುತ್ತಾರೆ.
ಮನೆಯಲ್ಲಿ ತುಳಸಿ ಸಸ್ಯವಿದ್ದರೆ ನಕಾರಾತ್ಮಕ ಶಕ್ತಿಗಳನ್ನು ನಿರ್ಮೂಲನೆ ಮಾಡಲು ಅಥವಾ ದುಷ್ಟ ಶಕ್ತಿಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ತುಳಸಿ ಕೇವಲ ಒಂದು ಗಿಡ ಮಾತ್ರ ಅಲ್ಲ. ನಮ್ಮ ಜೀವನದ ಅನೇಕ ಸಮಸ್ಯೆಗಳಿಗೆ ಸಹ ಇದು ಪರಿಹಾರ. ಆರೋಗ್ಯ ಸಮಸ್ಯೆಗಳಿರಬಹುದು ಅಥವಾ ಬೇರೆ ತೊಂದರೆಗೆ ತುಳಸಿಯಲ್ಲಿ ಗಿಡದಲ್ಲಿ ಪರಿಹಾರವಿದೆ ಎಂಬ ನಂಬಿಕೆ ಇದೆ.
ತುಳಸಿಯಲ್ಲಿ ಸತ್ತು ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ ಇದು ಬ್ಯಾಕ್ಟೀರಿಯ ವಿರೋಧಿ ಶಿಲೀಂದ್ರ ವಿರೋಧಿ ಮತ್ತು ಆಂಟಿವೈರಲ್ ಗುಣಗಳನ್ನು ಹೊಂದಿದೆ. ನೆಗಡಿಗಾಗಿ ಅತ್ಯಂತ ಪ್ರಸಿದ್ಧವಾದ ಮನೆಮದ್ದುಗಳಲ್ಲಿ ಒಂದಾದ ತುಳಸಿ ಎಲೆಯ ಶಕ್ತಿಯನ್ನು ಅವಲಂಬಿಸಿದೆ ತುಳಸಿ ಎಲ್ಲಾ ಇತರ ಆಯುರ್ವೇದ ಗಿಡಮೂಲಿಕೆಗಳೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
ತುಳಸಿ ಗಿಡ ಎಲ್ಲರ ಮನೆಯಲ್ಲಿ ಇರುತ್ತದೆ. ಆದರೆ ಅದು ಪದೇ ಪದೇ ಒಣಗಿ ಹೋಗುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ತುಳಸಿ ಗಿಡವನ್ನು ಬಹಳ ನಾಜೂಕಾಗಿ ಆರೈಕೆ ಮಾಡಬೇಕಾಗುತ್ತದೆ. ಹೇಗೆ ಬೇಸಿಗೆಯಲ್ಲಿ ತುಳಸಿ ಒಣಗದಂತೆ ಕಾಪಾಡಬೇಕು ಎಂಬುದಕ್ಕೆ ಸಲಹೆ ಇಲ್ಲಿದೆ.
ತುಳಸಿ ನೆಡುವ ಮಣ್ಣು ಕೂಡ ಇಲ್ಲಿ ಮುಖ್ಯವಾಗುತ್ತದೆ. ಯಾವ ರೀತಿಯ ಮಣ್ಣಿನಲ್ಲಿ ನಾವು ತುಳಸಿ ಗಿಡ ಬೆಳೆಸುತ್ತೇವೆಯೋ ಅದರ ಮೇಲೆ ಗಿಡದ ಆಯಸ್ಸು ನಿಂತಿರುತ್ತದೆ. ಹಾಗಾಗಿ ಯಾವಾಗಲೂ ಕೆಂಪು ಅಥವಾ ಮರಳು ಮಣ್ಣನ್ನ ಮಾತ್ರ ಬಳಕೆ ಮಾಡಿದರೆ ಉತ್ತಮ.
ತುಳಸಿ ಗಿಡಕ್ಕೆ ಹಸುವಿನ ಗೊಬ್ಬರಕ್ಕಿಂತ ಬೇರೆ ಯಾವುದೂ ಸೂಕ್ತವಲ್ಲ ಎನ್ನಬಹುದು. ಹೌದು, ಯಾವಾಗಲೂ ಹಸುವಿನ ಗೊಬ್ಬರವನ್ನು ಮಾತ್ರ ಹಾಕಿ. ಮುಖ್ಯವಾಗಿ ಬೇಸಿಗೆ ಅಂತ ಹಸುವಿನ ಸಗಣಿಯನ್ನು ಹಾಗೆಯೇ ತಂದು ಹಾಕಬೇಡಿ. ಅದನ್ನು ಒಣಗಿಸಿ ನಂತರ ಪುಡಿ ಮಾಡಿ ಹಾಕಿದರೆ ತುಳಸಿ ಒಣಗುವುದಿಲ್ಲ.
ತುಳಸಿ ಗಿಡವನ್ನು ಕೀಳಲು ಸಹ ಒಂದು ದಿನ ಹಾಗೂ ಸಮಯವಿದೆ. ಯಾವುದೇ ಕಾರಣಕ್ಕೂ ಮಧ್ಯಾಹ್ನ 12 ಗಂಟೆಯ ನಂತರ ತುಳಸಿ ಎಲೆಯನ್ನು ಕೀಳಬಾರದು. ಹಾಗೆಯೇ, ಸ್ನಾನ ಮಾಡದೇ ಸಹ ತುಳಸಿ ಗಿಡವನ್ನು ಮುಟ್ಟಬಾರದು. ಇಲ್ಲದಿದ್ದರೆ ಗಿಡ ಬೇಗ ಒಣಗಿ ಹೋಗುತ್ತದೆ.
ಇಷ್ಟೇ ಅಲ್ಲದೇ, ಏಕಾದಶಿ ಹಾಗೂ ಅಮವಾಸ್ಯೆಯ ದಿನ ಯಾವುದೇ ಸಂದರ್ಭ ಇದ್ದರೂ ಸಹ ತುಳಸಿ ಎಲೆಗಳನ್ನು ಕೀಳಬಾರದು. ನಿಮಗೆ ಏಕಾದಶಿ ದಿನ ವಿಷ್ಣುವಿನ ಪೂಜೆ ಮಾಡಲು ಬೇಕು ಎಂದರೆ ಹಿಂದಿನ ದಿನವೇ ಅಥವಾ 2 ದಿನ ಮೊದಲು ಕಿತ್ತು ಇಟ್ಟುಕೊಳ್ಳಬಹುದು.
ತುಳಸಿ ಗಿಡ ನಮ್ಮ ಮನೆಯಲ್ಲಿ ಇದ್ದಷ್ಟು ಪ್ರಯೋಜನಕಾರಿಯೇ ಆಗಿದೆ ಇದು ಸುಂದರವಾಗಿ ಕಾಣುತ್ತದೆ ಸುಂದರವಾದ ಪರಿಮಳವನ್ನು ಹರಡುತ್ತದೆ. ಗಾಳಿಯನ್ನು ಶುದ್ಧೀಕರಿಸಿಸುತ್ತದೆ ಮತ್ತು ಔಷಧಿಯ ಪ್ರಯೋಜನಗಳನ್ನು ಹೊಂದಿರುವ ತುಳಸಿ ಗಿಡದ ಬಗ್ಗೆ ಎಷ್ಟು ಹೇಳಿದರು ಮುಗಿಯದು.