ಬೇಸಿಗೆಯಲ್ಲಿ ಬಿಸಿಲಿನ ತಾಪದಿಂದ ಅತಿಯಾಗಿ ಸೆಕೆಯಾಗಿ ಸಾಮಾನ್ಯವಾಗಿ ಹೆಚ್ಚಿನವರು ಬೆವರುತ್ತಾರೆ. ಬೆವರುವುದು ಒಳ್ಳೆಯದು ಆದರೆ ಅತಿಯಾಗಿ ಬೆವರುವುದರಿಂದ ಕೆಲವೊಮ್ಮೆ ಆರೋಗ್ಯ ಸಮಸ್ಯೆಕೂಡ ಕಾಡ ಬಹುದು. ಇನ್ನೂ ಅತಿಯಾಗಿ ಬೆವರಿ ದೇಹದಿಂದ ಬರುವ ವಾಸನೆಯಿಂದ ಮುಜುಗರ ಕೂಡ ಉಂಟಾಗಬಹುದು. ಅದರಿಂದ ಅತಿಯಾದ ಬೆವರುವಿಕೆಯನ್ನು ನಿಯಂತ್ರಿಸಲು ಇಲ್ಲಿದೆ ಸರಳ ಮನೆಮದ್ದು.
ಆಪಲ್ ಸೈಡರ್ ವಿನೆಗರ್:
ಆಪಲ್ ಸೈಡರ್ ವಿನೆಗರ್ ಹಲವಾರು ಮನೆಮದ್ದುಗಳಲ್ಲಿ ಬಳಸಲಾಗುತ್ತದೆ. ಬೆವರಿನ ದುರ್ವಾಸನೆಯನ್ನು ತಡೆಯಲು ಕೂಡ ಸಹಾಯ ಮಾಡುತ್ತದೆ. ಕಾಟನ್ ಪ್ಯಾಡ್ ತೆಗೆದುಕೊಂಡು ಬೆವರುವ ಸಾಧ್ಯತೆ ಇರುವ ಜಾಗದಲ್ಲಿ ಸ್ವಲ್ಪ ವಿನೆಗರ್ ಹಚ್ಚಿ. ವಿನೆಗರ್ ಚರ್ಮದ pH ಅನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ ಮತ್ತು ವಾಸನೆಯನ್ನು ಉಂಟುಮಾಡುವ ಯಾವುದೇ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ.
ಅಡಿಗೆ ಸೋಡಾ:
ಅತಿಯಾದ ಬೆವರುವಿಕೆಯಿಂದ ಉಂಟಾಗುವ ದುರ್ವಾಸನೆ ಮತ್ತು ಚರ್ಮ ಸಮಸ್ಯೆಗೆ ಮನೆ ಮದ್ದಾಗಿ ಅಡಿಗೆ ಸೋಡಾವನ್ನು ಬಳಸಬಹದು. ಅಡಿಗೆ ಸೋಡಾ ವಾಸ್ತವವಾಗಿ ದೇಹವನ್ನು ಕಡಿಮೆ ಬೆವರು ಮಾಡುವುದಿಲ್ಲ, ಆದರೆ ಇದು ಅತ್ಯುತ್ತಮ ಡಿಯೋಡರೆಂಟ್ ಆಗಿದೆ ಮತ್ತು ಹೈಪರ್ಹೈಡ್ರೋಸಿಸ್ ಹೊಂದಿರುವುದರಿಂದ ಅತಿಯಾದ ಬೆವರುವಿಕೆಗೆ ಸಂಬಂಧಿಸಿದ ಯಾವುದೇ ಚರ್ಮದ ಕಾಯಿಲೆಗಳನ್ನು ಬರದಂತೆ ತಡೆಯುತ್ತದೆ. ಲ್ಯಾವೆಂಡರ್ನೊಂದಿಗೆ ಅಡಿಗೆ ಸೋಡಾವನ್ನು ಮಿಶ್ರ ಮಾಡಿ ಬೆವರುವ ಕಂಕುಳ ಭಾಗವನ್ನು ಮಿಶ್ರಕ್ಕೆ ಅದ್ದಿದ ಒದ್ದೆ ಬಟ್ಟೆಯಿಂದ ಒರೆಸುವುದರಿಂದ ಬೆವರಿನ ವಾಸನೆಯನ್ನು ಹೋಗಲಾಡಿಸಬಹುದು.
ಉಪ್ಪುನೀರಿನ ಸ್ನಾನ:
ಸ್ನಾನ ಮಾಡುವಾಗ ನೀರಿಗೆ ಕಲ್ಲುಪ್ಪನ್ನು ಹಾಕುವ ಮೂಲಕ ದೇಹದ ದುರ್ವಾಸನೆಯನ್ನು ತಡೆಯಬಹುದಾಗಿದೆ. ದಿನಕ್ಕೆ ಆದಷ್ಟು ಎರಡು ಬಾರಿ ಸ್ನಾನ ಮಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ದೇಹದ ದುರ್ಗಂಧವನ್ನು ತಡೆಯಬಹುದು.
ಟೊಮೆಟೊ ಜ್ಯೂಸ್:
ಟೊಮೆಟೊ ರಸವು ಬೆವರುವ ರಂಧ್ರಗಳನ್ನು ಕುಗ್ಗಿಸುತ್ತದೆ ಮತ್ತು ದೀರ್ಘಕಾಲದ ಬೆವರುವಿಕೆಯನ್ನು ಕಡಿಮೆ ಮಾಡುತ್ತದೆ. ಪ್ರತಿದಿನ ಒಂದು ಲೋಟ ಟೊಮೆಟೊ ರಸವನ್ನು ಕುಡಿಯುವುದು ಅತಿಯಾದ ಬೆವರುವಿಕೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಟೊಮೆಟೊ ರಸವನ್ನು ನಿಮ್ಮ ಕಂಕುಳಿಗೆ ಹಚ್ಚುವುದರಿಂದ ಬೆವರಿನ ವಾಸನೆಯನ್ನು ಹೋಗಲಾಡಿಸಬಹದು.
ಬಿಳಿ ಶ್ರೀಗಂಧದ ಪುಡಿ:
ಬಿಳಿ ಶ್ರೀಗಂಧದ ಪುಡಿ ಬೆವರುವಿಕೆಯನ್ನು ಕಡಿಮೆ ಮಾಡುವ ಮನೆಮದ್ದುಗಳಲ್ಲಿ ಒಂದಗಿದ್ದು, ಬೆವರಿನಿಂದ ಉಂಟಾಗುವ ಚರ್ಮದ ಊರಿಯನ್ನು ಕೂಡ ಶಮನ ಮಾಡುತ್ತದೆ. ಬಿಳಿ ಶ್ರೀಗಂಧದ ಪುಡಿ, ರೋಸ್ ವಾಟರ್ ಮತ್ತು ನಿಂಬೆ ರಸವನ್ನು ತಲಾ ಒಂದು ಚಮಚ ಸೇರಿಸಿ. ಪೇಸ್ಟ್ ಮಿಶ್ರಣ ಮಾಡಿ. ನಿಮ್ಮ ಚರ್ಮವನ್ನು ಚೆನ್ನಾಗಿ ತೊಳೆದು ನಂತರ ಪೇಸ್ಟ್ ಅನ್ನು ಅನ್ವಯಿಸಿ. ಅದನ್ನು ಸಂಪೂರ್ಣವಾಗಿ ಗಟ್ಟಿಯಾಗಿಸಿ 20-30 ನಿಮಿಷಗಳ ನಂತರ, ನಿಮ್ಮ ಚರ್ಮವನ್ನು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಬೆವರುವಿಕೆಯನ್ನು ಕಡಿಮೆ ಮಾಡಲು ಪ್ರತಿದಿನ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ.
ಲಿಂಬು ರಸ:
ಲಿಂಬು ರಸ ದೇಹದಿಂದ ದುರ್ಗಂಧವನ್ನು ದೂರಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ ನೀವು ಲಿಂಬುರಸವನ್ನು ಬಳಸಬಹುದು. ಲಿಂಬೆ ಚರ್ಮದ ಪಿಹೆಚ್ ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. 2 ಟೇಬಲ್ ಸ್ಪೂನ್ ಕಾರ್ನ್ಸ್ಟಾರ್ಚ್ ಮತ್ತು ನಿಂಬೆ ರಸವನ್ನು ತೆಗೆದುಕೊಂಡು ಪೇಸ್ಟ್ ಮಾಡಿ. ಇದನ್ನು ಕಂಕುಳಲ್ಲಿ ಹಚ್ಚಿ 10 ನಿಮಿಷಗಳ ನಂತರ ಸ್ವಚ್ಛಗೊಳಿಸಿ. ಇದರಿಂದ ಕಂಕುಳಿನಲ್ಲಿ ಬೆವರುವುದು ಕೂಡ ಕಡಿಮೆಯಾಗುತ್ತದೆ, ಜೊತೆಗೆ ದುರ್ವಾಸನೆಯೂ ನಿವಾರಣೆಯಾಗುತ್ತದೆ.