ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಸ್ವಕ್ಷೇತ್ರ ಶಿಗ್ಗಾಂವ-ಸವಣೂರಿನಲ್ಲಿ ಭರ್ಜರಿ ಪ್ರಚಾರ ನಡೆಸಿದರು. ಕ್ಷೇತ್ರದ ವಿವಿಧ ಹಳ್ಳಿಹಳ್ಳಿಗೆ ಭೇಟಿ ನೀಡಿ, ಕ್ಷೇತ್ರದ ಅಭಿವೃದ್ಧಿಗೆ ಸದಾ ಕಂಕಣಬದ್ಧನಾಗಿದ್ದೇನೆ ಎಂದು ಹೇಳಿದರು.
ಇಂದು ಶಿಗ್ಗಾಂವ್ ಕ್ಷೇತ್ರದಲ್ಲಿ ಪ್ರಚಾರ ನಡೆಸಿ ಅವರು ಮಾತನಾಡಿದರು.
ಎನ್.ಎಂ ತಡಸ ಗ್ರಾಮಕ್ಕೆ ಭೇಟಿ ನೀಡಿ ಸಿಎಂ ತಡಸ ಗ್ರಾಮ, ಪ್ರಗತಿಪರ ರೈತರ ಊರು. ಸಹಕಾರಿ ರಂಗದಲ್ಲಿಯೂ ಒಳ್ಳೆಯ ಹೆಸರು ಪಡೆದಿರುವ ಗ್ರಾಮ. ನಾನು ಪ್ರತಿ ಬಾರಿಯೂ ಈ ಭಾಗದಿಂದ ಪ್ರಚಾರ ಕಾರ್ಯ ಆರಂಭಿಸುತ್ತೇನೆ. ಅಡವಿ ಸೋಮಾಪುರ ಎನ್.ಎಂ ತಡಸ ಗ್ರಾಮದ ರಸ್ತೆ, ಎಲ್ಲ ಸಮುದಾಯದ ಸಭಾ ಭವನ, ಉಳಿದಿರುವ ಎಲ್ಲ ಕೆಲಸಗಳನ್ನು ನಿರಂತರವಾಗಿ ಮಾಡುತ್ತೇವೆ. ಕಳೆದ ಹದಿನೈದು ವರ್ಷ ಮಾಡಿದ ಕೆಲಸವನ್ನು ಮುಂದಿನ ಐದು ವರ್ಷದಲ್ಲಿ ಮಾಡುತ್ತೇನೆ. ಮುಂದಿನ ಅವಧಿಗೆ ನಮ್ಮ ಸರ್ಕಾರ ಬರುತ್ತದೆ. ಅಭಿವೃದ್ಧಿಗಾಗಿ ನಾನು ಶ್ರಮ ವಹಿಸಿದ್ದೇನೆ. ಈ ಬಾರಿ ತಾಲೂಕಿನಲ್ಲಿ ಬಿಜೆಪಿ ಪರ ಅಲೆ ಇದೆ ಈ ಬಾರಿ ಕಳೆದ ಬಾರಿಗಿಂತ ಹೆಚ್ಚಿನ ಮತಗಳಿಂದ ಆಯ್ಕೆ ಮಾಡಿ. ಇಲ್ಲಿ ಪಶು ವೈದ್ಯಕೀಯ ಆಸ್ಪತ್ರೆಗೆ ವೈದ್ಯರ ನೇಮಕ ಪ್ರಕರಣ ಕೋರ್ಟ್ನಲ್ಲಿದೆ. ಅದಕ್ಕೆ ಪರಿಹಾರ ಪರಿಹಾರ ಆದ ತಕ್ಷಣ ವೈದ್ಯರ ನೇಮಕ ಮಾಡಿಕೊಳ್ಳಲಾಗುವುದು ಎಂದರು.
ಶಿಗ್ಗಾ0ವಿಯ ಹಿರೇಬೆಂಡಿಗೇರಿ ಗ್ರಾಮಕ್ಕೆ ಕುಡಿಯುವ ನೀರು ಬರುತ್ತದೆ ಎಂದು ಯಾರೂ ಅಂದುಕೊAಡಿರಲಿಲ್ಲ. ಶಿಗ್ಗಾಂವಿ ಏತ ನೀರಾವರಿ ಮೂಲಕ ಕೆರೆ ತುಂಬಿಸುವ ಕೆಲಸ ಮಾಡಿದ್ದು, ಆದಷ್ಟು ಬೇಗ ಮಳೆಯಾಗಿ ಕೆರೆ ತುಂಬಲಿ. ಈ ಗ್ರಾಮದ ಎಲ್ಲ ರಸ್ತೆಗಳು ಕಾಂಕ್ರೀಟ್ ಆಗಿದೆ. ನನ್ನ ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೂ ಕುಡಿಯುವ ನೀರಿನ ಯೋಜನೆ ಮೂಲಕ ಪ್ರತಿ ಮನೆಗೂ 1.20 ಕೋಟಿ ವೆಚ್ಚದಲ್ಲಿ ಅನುಷ್ಠಾನ ಗೊಳಿಸಲಾಗುವುದು ಎಂದರು.
ಹಿರೇಬೆ0ಡಿಗೇರಿಗೆ ಒಂದು ಜೂನಿಯರ್ ಕಾಲೇಜ್ ಮಂಜೂರು ಮಾಡಲಾಗಿದೆ. ಎಲ್ಲ ಹಿರಿಯರು ಒಗ್ಗಟ್ಟಿನಿಂದ ಕೆಲಸ ಮಾಡಿದರೆ, ಅತೀ ಹೆಚ್ಚಿನ ಮತಗಳ ಅಂತರದಿAದ ಗೆಲ್ಲಬಹುದು. ಎಲ್ಲ ರೈತರಿಗೆ ವಿಮಾ ಯೋಜನೆ ಜಾರಿಗೆ ತರಲಾಗುವುದು. ನಿಮ್ಮ ಆಶೀರ್ವಾದದಿಂದ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದೇನೆ. ಇಷ್ಟೆಲ್ಲ ಕಾರ್ಯಕ್ರಮ ಮಾಡಲು ನಿಮ್ಮೆಲ್ಲರ ಆಶೀರ್ವಾದ ಕಾರಣ. ಹಿರೇಬೆಂಡಿಗೇರಿ ಗ್ರಾಮದವರು ಹೆಚ್ಚಿನ ಮತ ನೀಡಿ ಬೆಂಬಲಿಸಬೇಕು ಎಂದರು.
ಈ ಕ್ಷೇತ್ರದ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಗ್ರಾಮೀಣ ರಸ್ತೆಗಳ ಅಭಿವೃದ್ಧಿಯಾಗಿದೆ. ಬಿಜೆಪಿ ಅಂದರೆ ಅಭಿವೃದ್ಧಿ, ಅಭಿವೃದ್ಧಿ ಅಂದರೆ ಬಿಜೆಪಿ. ರಾಜ್ಯದ ಸಮಗ್ರ ಅಭಿವೃದ್ಧಿಗೆ ಮತ್ತೆ ಬಿಜೆಪಿಗೆ ಮತ ಹಾಕಿ ಗೆಲ್ಲಿಸಲು ಮನವಿ ಮಾಡಿದರು.
ಇನ್ನೂ ಹಿರೇಮನಕಟ್ಟಿ ಗ್ರಾಮಕ್ಕೆ ಭೇಟಿ ನೀಡಿದ ಸಿಎಂ ಬೊಮ್ಮಾಯಿ ಅವರು, ಈ ಗ್ರಾಮದಲ್ಲಿ ಹತ್ತು ಹಲವಾರು ಅಭಿವೃದ್ಧಿ ಕಾಮಗಾರಿ ಮಾಡುತ್ತಿದ್ದೇವೆ. ಕೆರೆ ಅಭಿವೃದ್ಧಿ, ರಸ್ತೆಗಳ ಅಭಿವೃದ್ಧಿ ಮಾಡಿದ್ದೇವೆ. 438 ಕೋಟಿ ರೂ. ವೆಚ್ಚದಲ್ಲಿ ತಾಲೂಕಿನ ಎಲ್ಲ ಗ್ರಾಮಗಳಿಗೂ ಕುಡಿಯುವ ನೀರು ಒದಗಿಸಲು ಮನೆ-ಮನೆಗೆ ಗಂಗೆ ಯೋಜನೆ ಅನುಷ್ಠಾನ ಮಾಡಲಾಗುವುದು. ಈ ಊರಿನ ದೇವಸ್ಥಾನ, ಸಮುದಾಯ ಭವನಗಳ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ. ಗೊಬ್ಬರ ಖರೀದಿಗೆ ರೈತರಿಗೆ ಜೂನ್ ತಿಂಗಳಲ್ಲಿ 10 ಸಾವಿರ ರೂ ಹಾಕಲಾಗುವುದು. ವರದಾ ನದಿಯಿಂದ ನೀರು ತಂದು ಕೆರೆ ತುಂಬಿಸುವ ಕೆಲಸ ಮಾಡಿದ್ದೇನೆ ಎಂದರು.
ನಾನು ಎಲ್ಲ ಕಡೆ ಪ್ರವಾಸ ಮಾಡಿದ್ದೇನೆ. ಅಭೂತಪೂರ್ವ ಬೆಂಬಲ ದೊರೆಯುತ್ತಿದೆ. ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಮುಂದಿನ ಐದು ವರ್ಷದಲ್ಲಿ ಎರಡು ಪಟ್ಟು ಅಭಿವೃದ್ಧಿ ಮಾಡುತ್ತೇನೆ ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದರು.
ಕಬನೂರು ಗ್ರಾಮದಲ್ಲಿ ನನಗೆ ಇಷ್ಟೊಂದು ಅಭೂತಪೂರ್ವ ಬೆಂಬಲ ಸೂಚಿಸಿದ್ದೀರಿ. 2008 ರ ನಂತರ ಈ ಊರು ಶಿಗ್ಗಾಂವಿಗೆ ಸೇರ್ಪಡೆಯಾಗಿದೆ. ಈ ಊರಿನ ಮತ್ತು ಊರಿಗೆ ಸೇರುವ ಎಲ್ಲ ರಸ್ತೆಗಳ ಅಭಿವೃದ್ಧಿ ಮಾಡಲಾಗಿದೆ. ಮುಂದಿನ ನಾಲ್ಕೈದು ತಿಂಗಳಲ್ಲಿ ಈ ಗ್ರಾಮಕ್ಕೆ ಜಲ ಜೀವನ್ ಮಿಷನ್ ಅಡಿಯಲ್ಲಿ ಕುಡಿಯುವ ನೀರು ಒದಗಿಸಲಾಗುವುದು. ತುಂಗಭದ್ರಾ ನದಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಈ ಊರಿನ ಎಲ್ಲ ಸಮುದಾಯ ಭವನಗಳ ಅಭಿವೃದ್ಧಿ ಮಾಡಲಾಗಿದೆ.
ಒಂದು ತಿಂಗಳು ಮಾತ್ರ ರಾಜಕಾರಣ ಮಾಡೋಣ. ಉಳಿದ ಸಮಯದಲ್ಲಿ ಅಭಿವೃದ್ಧಿ ಮಾಡೋಣ, ರೈತರು, ಕಾರ್ಮಿಕು ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಕಿಸಾನ್ ಸಮ್ಮಾನ್ ಯೋಜನೆ ನೀಡಿದ್ದೆವೆ. ಈ ಕ್ಷೇತ್ರದಲ್ಲಿ 8 ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಯೋಜನೆ ಲಾಭ ದೊರೆತಿದೆ. ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಹೆಚ್ಚಿನ ಮತಗಳನ್ನು ನೀಡಿ ಮತ್ತೊಮ್ಮೆ ಆಶೀರ್ವದಿಸಿ ಎಂದರು.
ಬನ್ನೂರಿಗೆ ತುಂಗಭದ್ರಾದಿ0ದ ಕುಡಿಯುವ ನೀರು
ಬನ್ನೂರು ಗ್ರಾಮದಲ್ಲಿ ರಾಜಕೀಯ ನಾಯಕತ್ವ ಇರುವ ಗ್ರಾಮ. ಈ ಗ್ರಾಮದಲ್ಲಿ ಏನು ನಿರ್ಣಯ ಆಗುತ್ತದೆ ಅದು ಇಡೀ ಕ್ಷೇತ್ರದ ಮೇಲೆ ಪರಿಣಾಮ ಬೀರುತ್ತದೆ.
ಈ ಗ್ರಾಮದಲ್ಲಿ ಎಲ್ಲರೂ ಪರಿಚಯಸ್ಥರು ಇದ್ದಾರೆ. ಈ ಗ್ರಾಮದ ಸಮಗ್ರ ಅಭಿವೃದ್ಧಿಗೆ ಕಂಕಣ ಬದ್ದರಾಗಿದ್ದೇವೆ. ಕಾಂಕ್ರಿಟ್ ರಸ್ತೆ, ಕುಡಿಯುವ ನೀರಿಗೆ 1.17 ಕೋಟಿ ವೆಚ್ಚದಲ್ಲಿ ಮನೆ-ಮನೆಗೆ ಕುಡಿಯುವ ನೀರು ಒದಗಿಸುವ ಮನೆ-ಮನೆಗೆ ಗಂಗೆ ಯೋಜನೆ ಜಾರಿಗೆ ತಂದಿದ್ದೇವೆ.
ಪ್ರತಿ ವರ್ಷ ಕೇಂದ್ರದಿAದ 12,000 ಕೋಟಿ ಬರುತ್ತದೆ. ರಾಜ್ಯದಿಂದಲೂ ಅಷ್ಟೇ ಪ್ರಮಾಣದ ಹಣ ನೀಡಿ ಈ ಯೋಜನೆ ರೂಪಿಸಿದ್ದೇವೆ. ಈ ಗ್ರಾಮಕ್ಕೆ ತುಂಗ ಭದ್ರಾದಿಂದ ನೀರು ತರಲಾಗುತ್ತದೆ. ಇದರಿಂದ ತಾಯಂದಿರಿಗೆ ಹೆಚ್ಚು ಅನುಕೂಲವಾಗಲಿದೆ. ಬನ್ನೂರಿಗೆ ಇರುವ ಎಲ್ಲ ಸಂಪರ್ಕ ರಸ್ತೆಗಳ ಅಭಿವೃದ್ಧಿ ಮಾಡಿದ್ದೇವೆ. ನಿಮ್ಮ ಆಶೀರ್ವಾದದಿಂದ ನಾನು ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದೇನೆ. ಇದಕ್ಕೆ ಕಾರಣ ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಕಾರಣ ಎಂದರು.
ನಾನು ವಿದ್ಯಾನಿಧಿ ಯೊಜನೆ ಜಾರಿಗೆ ತಂದಿದ್ದೇನೆ. ರೈತರ ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆ ಪಡೆಯುವುದರಿಂದ ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.
ಸಾಮಾಜಿಕ ನ್ಯಾಯ ಒದಗಿಸಲು ಮೀಸಲಾತಿ ಹೆಚ್ಚಳ ಮಾಡಿದ್ದೇನೆ. ಎಲ್ಲ ಜಾತಿ ಸಮುದಾಯದ ದೇವಸ್ಥಾನಗಳಿಗೂ ಅನುದಾನ ನೀಡಿದ್ದೇನೆ. ಯಾವುದೇ ಬೇಧ ಮಾಡದೇ ಸಹಾಯ ಮಾಡಿದ್ದೇನೆ. ಈ ಬಾರಿ ಎರಡು ಪಟ್ಟು ಹೆಚ್ಚಿನ ಮತ ನೀಡಿ ಆಶೀರ್ವದಿಸಬೇಕು ಎಂದರು.