ಇತ್ತೀಚಿನ ದಿಗಗಳಲ್ಲಿ ಹೆಚ್ಚಿನ ಜನರನ್ನು ಕಾಡುವ ಸಮಸ್ಯೆಯೆಂದರೇ ಅದು ಅತಿಯಾದ ತೂಕ. ತಮ್ಮ ದೇಹದ ತೂಕವನ್ನು ಇಳಿಸಿಕೊಳ್ಳಲು ಜನರು ನಾನಾ ಕಸರತ್ತುಗಳನ್ನು ಮಾಡುತ್ತಾರೆ. ಆದರೆ ತೂಕ ಇಳಿಸುವು ಎಂದರೆ ಸುಲಭದ ಮಾತಲ್ಲ. ಎಷ್ಟು ಶ್ರದ್ದೆಯಿಂದ ನೀವು ತೂಕ ಇಳಿಸಲು ಪ್ರಯತ್ನಿಸುತ್ತೀರೋ ಅಷ್ಟೇ ಉತ್ತಮವಾದ ಫಲಿತಾಂಶ ಕೂಡ ದೊರೆಯುತ್ತದೆ. ಆದರಿಂದ ತೂಕ ಇಳಿಸಿಕೊಳ್ಳುವ ಕೆಲವು ಪರಿಣಾಮಕಾರಿ ಸಲಹೆ ಇಲ್ಲಿದೆ.
ಆಹಾರಕ್ರಮವನ್ನು ನಿಗದಿಪಡಿಸಿ:
ತೂಕ ಇಳಿಸುವಲ್ಲಿ ಆಹಾರವು ಮುಖ್ಯ ಪಾತ್ರವನ್ನು ವಹಿಸುತ್ತದೆ. ಆದರಿಂದ ಸರಿಯಾದ ರೀತಿ ಆಹಾರ ಸೇವನೆ ಇಲ್ಲಿ ಮುಖ್ಯವಾಗುತ್ತದೆ. ನಿಮ್ಮ ನೆಚ್ಚಿನ ಫಾಸ್ಟ್ಫುಡ್ ತಿನ್ನುವ ಬದಲು ಆರೋಗ್ಯಕರವಾದ ಆಹಾರವನ್ನು ಸೇವಿಸಿ. ಕಾರ್ಬೋಹೈಡ್ರೇಟ್ಗಳು ಮತ್ತು ಮೊನೊಸಾಚುರೇಟೆಡ್ ನಂತಹ ಆರೋಗ್ಯಕರ ಕೊಬ್ಬುಗಳಿಗಾಗಿ ಧಾನ್ಯಗಳನ್ನು ಸೇವಿಸಿ. ಕೋಳಿ, ಮೀನು, ಮತ್ತು ಬೀನ್ಸ್ ಮತ್ತು ಕಡಲೆಗಳಂತಹ ಸಸ್ಯ ಆಧಾರಿತ ಪ್ರೋಟೀನ್ ಮೂಲಗಳಂತಹ ಆಹಾರಗಳೊಂದಿಗೆ ನೇರ ಪ್ರೋಟೀನ್ನಲ್ಲಿ ನಿಮ್ಮ ಆಹಾರವನ್ನು ಸಮೃದ್ಧವಾಗಿ ಇರಿಸಿ.
ಕಾರ್ಡಿಯೋ ವ್ಯಾಯಾಮ ರೂಢಿಸಿಕೊಳ್ಳಿ:
ಪ್ರತಿ ದಿನ ಅರ್ಧಗಂಟೆ ಕಾರ್ಡಿಯೋ ವ್ಯಾಯಾಮ ಮಾಡುವುದನ್ನು ಅಭ್ಯಾಸಮಾಡಿಕೊಳ್ಳಿ. ಹೀಗೆ ಮಾಡುವುದ್ದರಿಂದ ನಿಮ್ಮ ಸ್ನಾಯುಗಳು ಆರೋಗ್ಯವಾಗಿರಲು ಮತ್ತು ಹೃದಯ ಬಡಿತವನ್ನು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ. ಇದ್ದರಿಂದ ನಿಮ್ಮ ದೇಹದಲ್ಲಿನ ಕೊಬ್ಬು ಇಳಿಸಲು ಸಹಾಯ ಮಾಡುತ್ತದೆ.
ಆದಷ್ಟು ಚಟುವಟಿಕೆಯಿಂದಿರಿ:
ನಿಮ್ಮ ದಿನನಿತ್ಯದ ವ್ಯಾಯಾಮದ ಜೊತೆಗೆ, ಪ್ರತಿದಿನ ಚಟುವಟಿಕೆಯಿಂದಿರಿ. ತುಂಬಾ ಹೊತ್ತು ಮಲಗಿಕೊಂಡು ಕಾಲ ಕಳೆಯುತ್ತಿದ್ದರೆ, ಅಂತಹ ಅಭ್ಯಾಸವನ್ನು ಬಿಟ್ಟು ಬಿಡಿ. ಸದಾ ಲವಲವಿಕೆಯಿಂದ ಓಡಾಡಿಕೊಂಡಿರುವುದು ತೂಕ ಇಳಿಕೆಗೆ ಸಹಾಯವಾಗುತ್ತದೆ.
ತಾಜಾ ಹಣ್ಣುಗಳನ್ನು ಸೇವಿಸಿ:
ಜ್ಯೂಸ್ ಮತ್ತು ಸ್ಮೂಥಿಗಳ ಬದಲು ತಾಜಾ ಹಣ್ಣುಗಳ ರಸವನ್ನು ಸೇವಿಸಿ ಅದರಲ್ಲಿ ಯಾವುದೇ ಸಕ್ಕರೆಯ ಅಂಶವನ್ನು ಸೇರಿಸದೆ ಕುಡಿಯುವುದು ಉತ್ತಮ. ಜ್ಯೂಸ್ ಮತ್ತು ಸ್ಮೂಥಿಗಳಲ್ಲಿ ಸಕ್ಕರೆ ಹಾಗು ಇತರ ಸಿರಪ್ ಅಂಶಗಳನ್ನು ಸೇರಿಸಲಾಗುತ್ತದೆ. ಆದ್ದರಿಂದ ಆದಷ್ಟು ಮನೆಯಲ್ಲಿಯೇ ತಯಾರಿಸಿದ ಆರೋಗ್ಯಕರ ತಾಜಾ ಹಣ್ಣುಗಳ ರಸವನ್ನು ಕುಡಿಯಿರಿ.
ಒತ್ತಡವನ್ನು ಕಡಿಮೆ ಮಾಡಿ:
ನೀವು ಅತಿಯಾದ ತೂಕವನ್ನು ಹೊಂದ್ದಿದೀರಿ ಎಂಬ ಕಾರಣಕ್ಕಾಗಿ ಕಡಿಮೆ ತಿನ್ನುವುದು , ತಿನ್ನದೇ ಇರುವುದು ಹಾಗೂ ಅತಿಯಾದ ತೂಕದ ಬಗ್ಗೆ ಯೋಚಿಸುವುದು. ಈ ತರಹದ ನಿಮ್ಮ ಅಭ್ಯಾಸಗಳು ನಿಮ್ಮ ಆರೋಗ್ಯವನ್ನು ಹಾಳು ಮಾಡುವ ಸಾಧ್ಯತೆ ಹೆಚ್ಚಿದೆ ಆದರಿಂದ ಇಂತಹ ಅಭ್ಯಾಸವನ್ನು ಬಿಟ್ಟುಬಿಡಿ.