ಮದುವೆ ಅನ್ನೊಂದು ಪ್ರತಿಯೊಬ್ಬರ ಜೀವನದಲ್ಲೂ ಕೂಡ ಒಂದು ಸುಂದರವಾದ ಅಧ್ಯಾಯ. ಹಾಗೇ ಮದುವೆ ಆದ ಮೊದಲ ವರ್ಷ ಪ್ರೀತಿ, ನಂಬಿಕೆ, ಭರವಸೆ ಹೊಸ ಅನುಭವಗಳಿಂದ ಕೂಡಿದ್ದು ಆ ದಿನಗಳೇ ನಿಮ್ಮ ಜೀವನಕ್ಕೆ ಮೈಲಿಗಲ್ಲಾಗುತ್ತದೆ ಎಂಬುದನ್ನು ನೀವು ಮರೆಯುವಂತಿಲ್ಲ. ಮದುವೆಯಾದ ಮೊದಲು ವರ್ಷ ತುಂಬಾ ಮುಖ್ಯ ಆ ಮೊದಲ ವರ್ಷ ಹೇಗೆ ಇರಬೇಕು ಅನ್ನೋದಕ್ಕೆ ನಾವು ಇಲ್ಲಿ ಕೆಲವು ಸಲಹೆಗಳನ್ನು ಕೊಡುತ್ತೆವೆ.
ಮುಕ್ತವಾಗಿ ಮಾತನಾಡಿ
ನಿಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಲು ಮದುವೆಯಾದ ಮೊದಲ ವರ್ಷ ತುಂಬಾ ಒಳ್ಳೆಯ ಸಮಯ. ಹಾಗೇ ನೀವು ಪರಸ್ಪರ ಬಹಳಷ್ಟು ವಿಷಯಗಳನ್ನು ಅರಿತುಕೊಳ್ಳುವಿರಿ. ಮುಕ್ತವಾಗಿ ಮಾತನಾಡುವುದರಿಂದ ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಬಹುದು. ನಿಮ್ಮ ಆಲೋಚನೆ, ಭಾವನೆ ,ನಿರೀಕ್ಷೆಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ನಿಮ್ಮ ಜೀವನದ ಗುರಿಯ ಬಗ್ಗೆ ಸಂಗಾತಿಯೊಂದಿಗೆ ಹಂಚಿಕೊಳ್ಳಿ ನಿಮ್ಮ ಮನಸ್ಸಿನ ಮಾತನ್ನು ಅವರಿಗೆ ಹೇಳಿ ಮತ್ತು ಅವರ ಉತ್ತರವನ್ನು ಕೇಳಲು ಮರಿಬೇಡಿ.
ವಿನಿಮಯ ಮಾಡಿಕೊಳ್ಳುವುದು
“ನಿಮ್ಮ ನೆಚ್ಚಿನ ಬಾಲ್ಯದ ನೆನಪು ಯಾವುದು?” ಅಥವಾ “ಮುಂದಿನ ವರ್ಷದಲ್ಲಿ ನೀವು ಏನನ್ನು ಸಾಧಿಸಲು ಬಯಸುತ್ತೀರಿ?” ಎಂದು ಹೀಗೆ ಹಲವು ಪ್ರಶ್ನೆಗಳನ್ನು ಕೇಳಿ ಅವರ ಅಲೋಚನೆಗಳನ್ನು ತಿಳಿದುಕೊಂಡು ನಿಮ್ಮ ಆಲೋಚನೆಯನ್ನು ಅವರೊಂದಿಗೆ ಹಂಚಿಕೊಳ್ಳಿ.
ಹೊಂದಾಣಿಕೆ ಮಾಡಿಕೊಳ್ಳಿ
ಮದುವೆ ಅನ್ನುವುದು ಹೊಂದಾಣಿಕೆಯ ಮೇಲೆ ನಿಂತಿದೆ. ಮದುವೆ ಆದ ಹೊಸದರಲ್ಲಿ ಒಬ್ಬರನ್ನು ಒಬ್ಬರು ಅರ್ಥಮಾಡಿಕೊಳ್ಳಲು ನಿರೀಕ್ಷೆಗಳನ್ನು ಅರ್ಥಮಾಡಿಸಲು ಮಾತುಕತೆ ಅಗತ್ಯವಾಗಿದೆ. ಒಟ್ಟಿಗೆ ಕೆಲಸ ಮಾಡಲು ಹಣಕಾಸಿನ ವಿಚಾರವನ್ನು ನಿರ್ವಹಣೆ ಮಾಡಲು ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳಬೇಕು. ಹಾಗೂ ಕೆಲಸದ ನಡುವೆ ವೈಯಕ್ತಿಕ ಸಮಯವನ್ನು ಸಂಗಾತಿಗಾಗಿ ಮೀಸಲಿಡಬೇಕು.
ಚರ್ಚೆ ಮಾಡಿ
ವರ್ಷದಲ್ಲಿನ ನಿಮ್ಮ ಪ್ರಮುಖ ವಿಷಯಗಳನ್ನು ಪಟ್ಟಿ ಮಾಡಿ (ಉದಾಹರಣೆಗೆ, ಮನೆಗಾಗಿ ಉಳಿತಾಯ, ನಿಮ್ಮ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುವುದು ಇತ್ಯಾದಿ) ಮತ್ತು ನಿಮ್ಮ ಸಂಗಾತಿಯನ್ನು ಅದೇ ರೀತಿ ಮಾಡಲು ಕೇಳಿ. ಪಟ್ಟಿಗಳನ್ನು ಹೋಲಿಕೆ ಮಾಡಿ ಮತ್ತು ಈ ಗುರಿಗಳನ್ನು ಸಾಧಿಸಲು ನೀವು ಹೇಗೆ ಒಟ್ಟಿಗೆ ಕೆಲಸ ಮಾಡಬಹುದು ಎಂಬುದನ್ನು ಚರ್ಚಿಸಿ.
ನಂಬಿಕೆಯನ್ನು ಗಟ್ಟಿಗೊಳಿಸಿ
ಸಂಬಂಧಗಳು ಅಡಿಪಾಯವೇ ನಂಬಿಕೆ ಹಾಗಾಗಿ ಮದುವೆಯಾದ ಮೊದಲ ವರ್ಷ ನಂಬಿಕೆಯನ್ನು ಗಟ್ಟಿಗೊಳಿಸಲು ಪ್ರಯತ್ನಿಸಿ. ಒಬ್ಬರಿಗೊಬ್ಬರು ಪ್ರಾಮಾಣಿಕವಾಗಿ, ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು, ನಂಬಿಕೆಯನ್ನು ಉಳಿಸಿಕೊಳ್ಳುವುದು ಮುಖ್ಯವಾಗುತ್ತದೆ. ಕೆಲವೊಂದು ವಿಚಾರಗಳನ್ನು ಸಂಗಾತಿಗೆ ಬಹಿರಂಗ ಪಡಿಸದೇ ಅವರಿಗೆ ಸಪ್ರೈಸ್ ನೀಡಿ ಅವರನ್ನು ಖುಷಿಗೊಳಿಸಿ ಅವರ ನಂಬಿಕೆಯನ್ನು ಉಳಿಸಿಕೊಳ್ಳಬೇಕು.
ಮನಸ್ತಾಪವನ್ನು ನಿಭಾಯಿಸಿ
ಯಾವುದೇ ಸಂಬಂಧ ಪರಿಪೂರ್ಣವಲ್ಲ ಮನಸ್ತಾಪಗಳು ಬಂದೇ ಬರುತ್ತದೆ. ಆದರೆ ನಿಮ್ಮ ಮದುವೆಯ ಮೊದಲ ವರ್ಷದಲ್ಲಿ ಬಂದ ಮನಸ್ತಾಪಗಳನ್ನು ನೀವು ಹೇಗೆ ಎದುರಿಸುತ್ತೀರಿ ಎಂಬುದು ಭವಿಷ್ಯದ ಮನಸ್ತಾಪಗಳನ್ನು ನೀವು ಹೇಗೆ ಎದುರಿಸುತ್ತೀರಿ ಎಂಬುದನ್ನು ಸೂಚಿಸುತ್ತದೆ. ಸಂಸಾರದಲ್ಲಿ ಮನಸ್ತಾಪ ಬಂದಾಗ ಸಹಕಾರ ಮತ್ತು ರಾಜಿ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ಭಿನ್ನಾಭಿಪ್ರಾಯಗಳು ಉಂಟಾದಾಗ, ವಿರಾಮ ತೆಗೆದುಕೊಂಡು ಒಟ್ಟಿಗೆ ಇದ್ದು ಬಿಡಿ ಇದು ಸಮಸ್ಯೆಯನ್ನು ಸರಿಮಾಡುತ್ತದೆ.
ಸಮಯವನ್ನು ಮೀಸಲಿಡಿ
ಮದುವೆಯಾದ ಮೊದಲ ವರ್ಷ ಪರಸ್ಪರ ಸಮಯ ಮೀಸಲಿಡುವುದು ಮುಖ್ಯವಾಗುತ್ತದೆ. ಒಟ್ಟಿಗೆ ಸುತ್ತಾಡಲು ಹೋಗುವುದು,ಒಟ್ಟಿಗೆ ಪ್ರಯಾಣಿಸುವುದು ಅಥವಾ ಮನೆಯಲ್ಲಿ ಒಟ್ಟಿಗೆ ಸಮಯವನ್ನು ಕಳೆಯುವುದನ್ನು ಒಳಗೊಂಡಿರುತ್ತದೆ. ಸಂಬಂಧವನ್ನು ಗಟ್ಟಿಗೊಳಿಸಲು ಪರಸ್ಪರ ಸಮಯ ಕಳೆಯುವುದು ಬಹಳ ಮುಖ್ಯವಾಗಿದೆ.
ಮದುವೆಯಾದ ಮೊದಲ ವರ್ಷದ ಮುಖ್ಯವಾದ ಫೋಟೋ ಪ್ರೇಮ ಪತ್ರಗಳನ್ನು ಗೀಫ್ಟ್ ಬಾಕ್ಸ್ ಮಾಡಿ ಉಡುಗೊರೆಯಾಗಿ ನೀಡಿದರೆ ನಿಮ್ಮ ಸಂಗಾತಿ ಖುಷಿಯಾಗುತ್ತಾರೆ.
ಕೊನೆಯದಾಗಿ ಹೇಳಬೇಕಾದರೆ ಮದುವೆಯಾದ ಮೊದಲ ವರ್ಷ ನೀವು ಹೇಗೆ ಇರುತ್ತೀರಿ ಅನ್ನುವುದು ನಿಮ್ಮ ಮುಂದಿನ ಜೀವನದ ಮೈಲಿಗಲ್ಲು ಆದರಿಂದ ಆ ಒಂದು ವರ್ಷದಲ್ಲಿ ಮುಕ್ತವಾಗಿ ಮಾತನಾಡಿ ವಿಚಾರಗಳನ್ನು ಬಯಕೆ ಗಳನ್ನು ವಿನಿಮಯ ಮಾಡಿಕೊಳ್ಳಿ. ನಂಬಿಕೆಯನ್ನು ಗಟ್ಟಿಗೊಳಿಸಿ. ಮನಸ್ತಾಪಗಳು ಬಂದಾಗ ಅದನ್ನು ಪರಿಹರಿಸಿಕೊಂಡು ಒಟ್ಟಿಗೆ ಸಮಯ ಕಳೆಯುವುದರ ಮೂಲಕ ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸಿ