ಬೆಂಗಳೂರು: ಸ್ಯಾಂಡಲ್ವುಡ್ನ ಪ್ಯಾನ್ ಇಂಡಿಯಾ ಬ್ಲಾಕ್ ಬಸ್ಟರ್ ಚಿತ್ರ ಮೊದಲ ವಾರ್ಷಿಕೋತ್ಸವನ್ನು ಆಚರಿಸಿದ್ದು, ಈ ಸಂದರ್ಭದಲ್ಲಿ ಚಿತ್ರದ ತಯಾರಕರು ಕೆಜಿಎಫ್ ಚಾಪ್ಟರ್ ೨ನ ಪಯಣದ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಕೆಜಿಎಫ್ ಸರಣಿಯ ಮೂರನೇ ಭಾಗದ ಸುಳಿವು ಇದರಲ್ಲಿದ್ದು ಅಭಿಮಾನಿಗಳ ಸಂಭ್ರಮವನ್ನು ಹೆಚ್ಚಿಸಿದೆ.
ಈ ವಿಡಿಯೋ ಕೆಜಿಎಫ್ ಚಾಪ್ಟರ್೩ಯ ಸ್ಕ್ರಿಪ್ಟ್ ಕಾಪಿಯ ದೃಶ್ಯದೊಂದಿಗೆ ಕೊನೆಗೊಂಡಿದ್ದು, ಚಿತ್ರದ ಮತ್ತೊಂದು ಅಧ್ಯಾಯದ ಕುರಿತು ಸುಳಿವನ್ನು ನೀಡಿದೆ. ಪ್ರಶಾಂತ್ ನಿರ್ದೇಶನದ ರಾಕಿಬಾಯ್ ಆಗಿ ಯಶ್ ನಟನೆಯ ಕೆಜಿಎಫ್ ಚಾಪ್ಟರ್೨, ಸಂಜಯ್ ದತ್, ರವಿನಾ ಟಂಡನ್, ಶ್ರೀನಿಧಿ ಶೆಟ್ಟಿ, ಅರ್ಚನಾ ಜೋಯಿಸ್, ವಸಿಷ್ಠ ಎನ್. ಸಿಂಹ ಮತ್ತು ರಾವ್ ರಮೇಶ್ ಸೇರಿದಂತೆ ಅನೇಕ ದಿಗ್ಗಜ್ಜರನ್ನೊಳಗೊಂಡ ತಾರಾಗಣವನ್ನು ಹೊಂದಿತ್ತು.
ಬಾಲಿವುಡ್ನಲ್ಲಿ ೫೪ ಕೋಟಿ ಮೊತ್ತದ ಬೃಹತ್ ಆರಂಭಿಕ ಕಲೆಕ್ಷನ್ ಮತ್ತು ವಿಶ್ವಾದ್ಯಂತ ೧೨೦೦ಕೋಟಿ ರೂಪಾಯಿ ಗಳಿಕೆ ಮಾಡಿ ಜಾಗತಿಕ ವಲಯದಲ್ಲಿ ಕನ್ನಡ ಸಿನಿಮಾರಂಗದ ಆಗಮನವನ್ನು ಈ ಸಿನಿಮಾ ಸೂಚಿಸಿತ್ತು.
ಹೊಂಬಾಳೆ ಫಿಲ್ಮ್ಸ್ ಶುಕ್ರವಾರ ಚಿತ್ರದ ಯಶಸನ್ನು ಸೂಚಿಸುವ ಶೀರ್ಷಿಕೆಯೊಂದಿಗೆ ಪೋಸ್ಟರ್ ಒಂದನ್ನು ಹಂಚಿಕೊಂಡಿತ್ತು. “ಅವನು ಬಂದನು, ಅವನು ನೋಡಿದನು, ಅವನು ಗೆದ್ದನು. ಒಂದು ವರ್ಷದ ಹಿಂದೆ ಈ ದಿನ #KGF Chapter2 ನಮ್ಮನ್ನು ಬೆರಗುಗೊಳಿಸುವ ಆಕ್ಷನ್, ತೀವ್ರ ಭಾವನೆ ಹಾಗೂ ಮರೆಯಲಾಗದ ಪಾತ್ರಗಳಿಂದ ಕೂಡಿದ ಅವಿಸ್ಮರಣೀಯ ಪಯಣಕ್ಕೆ ಕೊಂಡೊಯ್ದಿತ್ತು. ಚಿತ್ರದ ಬಿಡುಗಡೆಯು ಅಭಿಮಾನಿಗಳೊಂದಿಗಿನ ಹಬ್ಬವಲ್ಲದೇ ಮತ್ತೇನು ಅಲ್ಲ…”
ತಯಾಕರು ಕೆಜಿಎಫ್-೩ನ್ನು ೨೦೨೫ರಲ್ಲಿ ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಬಿಡುಗಡೆಯ ದಿನಾಂಕವಿನ್ನೂ ನಿಗಧಿಯಾಗಿಲ್ಲ.