ಹೊಂಬಾಳೆ ಫಿಲಂಸ್ ರವರ ಕಾಂತಾರ ಸಿನಿಮಾವನ್ನು ಸೆಪ್ಟೆಂಬರ್ 30ರಂದು ಅದ್ದೂರಿಯಾಗಿ ಬಿಡುಗಡೆಗೊಳಿಸಿತು. ಇಂದಿಗೂ ಕೆಲವು ಕಡೆ ಹೌಸ್ ಫುಲ್ ಆಗಿ ಪ್ರದರ್ಶನ ನೀಡುತ್ತಿದೆ. ರಿಷಬ್ ಮತ್ತು ಸಪ್ತಮಿ ಗೌಡ ಜೊತೆಯಾಗಿ ಅಭಿನಯಿಸಿ ಸಿನಿಮಾ ಪ್ರಿಯರಿಗೆ ರಸದೌತಣವನ್ನು ನೀಡುತ್ತಿದ್ದಾರೆ.
ದೈವ ನರ್ತಿಸುವ ದೃಶ್ಯವನ್ನು ಇದುವರೆಗೆ ಕೋಲದಲ್ಲಿ ಭಾಗವಹಿಸಿದಾಗ ಮಾತ್ರ ಆ ತೀವ್ರ ಕ್ಷಣವನ್ನು ಅನುಭವಿಸಿದ್ವಿ, ಆದರೆ ಅದನ್ನು ಈ ಸಿನಿಮಾದಲ್ಲಿ ನೋಡುವಾಗ ಬೇರೆಯದೇ ಲೋಕಕ್ಕೆ ಕರೆದುಕೊಂಡು ಹೋಗಿ ಕೊನೆಯ 20 ನಿಮಿಷ ರೋಮಾಂಚಕ ಭಾವ, ಅಭೂತಪೂರ್ವ ಧ್ವನಿ ಶಕ್ತಿ, ವಾವ್ ಸೂಪರ್.
ಹೈ ವೋಲ್ಟೇಜ್ ದೃಶ್ಯಗಳಿಂದ ಆರಂಭಗೊಂಡ ಕಾಂತಾರ ಮಂತ್ರಮುಗ್ಧ ಗೊಳಿಸುವ ದೃಶ್ಯಗಳೊಂದಿಗೆ ಕೊನೆಗೊಂಡಿತು. ಈ ಸಿನಿಮಾದಲ್ಲಿ ಎಲ್ಲಾ ಪಾತ್ರಗಳಿಗೂ ಜೀವ ತುಂಬಿಸಿ ಅಷ್ಟು ಚೆನ್ನಾಗಿ ಸ್ಕ್ರೀನ್ ಮೇಲೆ ಮೂಡುವ ಹಾಗೆ ಮಾಡಿದ ನಿರ್ದೇಶಕರ ಕಲ್ಪನಾ ಶಕ್ತಿ ಶ್ಲಾಘನೀಯ. ಕಾಂತಾರ ಒಂದು ಸಿನಿಮಾ ಅನ್ನೋದಕ್ಕಿಂತ ವಿಶೇಷ ಅನುಭೂತಿ, ಎಷ್ಟೆಲ್ಲಾ ಹೇಳಿದ ಮೇಲೆಯೂ ಮತ್ತೆ ಉಳಿದುಕೊಂಡಂತಿರುತ್ತದೆ. ಕಾಂತಾರ ಸಿನಿಮಾದ ಹವಾ ಜೋರಾಗಿತ್ತು, ದಿನದಿಂದ ದಿನಕ್ಕೆ ಚಿತ್ರದ ಕಲೆಕ್ಷನ್ ಹೆಚ್ಚಾಗುತ್ತಿತ್ತು. ರಿಷಬ್ ಅಬ್ಬರಕ್ಕೆ ಬಾಲಿವುಡ್ ದಂಗಾಗಿದೆ.
ಮೊದಲು ಕನ್ನಡ ಭಾಷೆಯಲ್ಲಿ ಅಷ್ಟೇ ಬಿಡುಗಡೆಯಾದ ಸಿನಿಮಾ ಪ್ರೇಕ್ಷಕರ ಪ್ರತಿಕ್ರಿಯೆ ನೋಡಿ ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಯಿತು. ಈ ಸಿನಿಮಾದಿಂದ ರಿಷಬ್ ಶೆಟ್ಟಿ ಪಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ.