ಸೊಮಾಲಿನ್ ಮಾಡಲ್ ಕಾರ್ಯಕರ್ತೆ ವಾರಿಸ್ ಡೈರಿ ಅವರು ಮಹಿಳಾ ಜನನಾಂಗದ ಊನಗೊಳಿಸುವಿಕೆ ( ಎಫ್ಜಿಎಂ) ವಿರುದ್ಧ ಧ್ವನಿ ಎತ್ತಲು ಹಲವಾರು ಸೊಮಾಲಿ ಹುಡುಗಿಯರು ಮತ್ತು ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ. ವಾರಿಸ್ ಡೈರಿ ತಮ್ಮ 13ನೇ ವಯಸ್ಸಿನಲ್ಲಿ ಮನೆಯಿಂದ ಓಡಿ ಸೊಮಾಲಿಯದ ಬುಡಕಟ್ಟು ಜನಾಂಗದ ಅವೈಜ್ಞಾನಿಕ ಮತ್ತು ಹಿಂಸಾತ್ಮಕ ರೀತಿಯ ಈ ಪದ್ದತಿಯಿಂದ ತಪ್ಪಿಸಿಕೊಂಡು ತಮ್ಮದೇ ಜೀವನದಲ್ಲಿ ಬದುಕುತ್ತಿದ್ದಾರೆ.
1965 ರಲ್ಲಿ ಸೊಮಾಲಿಯಾದ ಗಾಲ್ಕಾಯೊದಲ್ಲಿ ಜನಿಸಿದ ಡೈರಿ ಇಥಿಯೋಪಿಯಾದ ಸೊಮಾಲಿಯಾದ ಗಡಿಯ ಭಾಗದಲ್ಲಿ ವಾಸಿಸುವ ದೊಡ್ಡ ಅಲೆಮಾರಿ ಕುಟುಂಬದ 12 ಮಕ್ಕಳಲ್ಲಿ ಒಬ್ಬಳಾಗಿ ಜನಿಸಿದರು. ಕುಟುಂಬದ ಆರೈಕೆ, ನೀರು ಮತ್ತು ಆಹಾರವನ್ನು ಸಂಗ್ರಹಿಸುದಲ್ಲೆ ಕಳೆದರು.
ಸುಮಾರು 13 ನೇ ವಯಸ್ಸಿನಲ್ಲಿ ಅವಳು ವಯಸ್ಸಾದ ಪುರುಷನೊಂದಿಗೆ ನಿಗಧಿಯಾಗಿದ್ದ ಮದುವೆಯಿಂದ ತಪ್ಪಿಸಿಕೊಳ್ಳಲು ಮನೆಯಿಂದ ಓಡಿಹೋದರು. ವಾರಿಸ್, ತನ್ನ ಆತ್ಮಚರಿತ್ರೆ, “ಡೆಸರ್ಟ್ ಫ್ಲವರ್: ದಿ ಎಕ್ಸ್ಟ್ರಾಆರ್ಡಿನರಿ ಜರ್ನಿ ಆಫ್ ಎ ಡೆಸರ್ಟ್ ನೊಮಾಡ್ (1998)” ನಲ್ಲಿ, ಮನೆಯಿಂದ ಓಡಿಹೋಗುವಾಗ ಸಿಂಹದೊಂದಿಗಿನ ತನ್ನ ಮುಖಾಮುಖಿಯನ್ನು ವಿವರಿಸುತ್ತಾರೆ.
ಹೋರಾಟಗಾರ್ತಿ ವಾರಿಸ್ ತನ್ನ ತಂದೆ ಗೊತ್ತು ಮಾಡಿದ್ದ ವಯಸ್ಸಾದ ವ್ಯಕ್ತಿಯೊಂದಿಗಿನ ಮದುವೆಯಾಗಲು ಇಷ್ಟವಿಲ್ಲದೇ ಮನೆಯಿಂದ ಓಡಿಹೋಗುವ ನಿರ್ಧಾರವನ್ನು ಮಾಡಿ ತಾಯಿಯ ಬಳಿ ಹೇಳುತ್ತಾಳೆ.
ಎಲ್ಲರೂ ಮಲಗಿದ್ದ ಸಮಯದಲ್ಲಿ ವಾರಿಸ್ ತಾಯಿ ವಾರಿಸ್ನ್ನು ಮನೆಯಿಂದ ಹೊರಹೋಗಲು ಸಹಾಯ ಮಾಡಿದರು. ಚಿಕ್ಕಮ್ಮ ಮನೆಯಾದ ಮೊಗದಿಶುಗೆ ಹೋಗುವುದಾಗಿ ನಿರ್ಧಾರಿಸಿದ್ದ ವಾರಿಸ್ ಕತ್ತಲೆಯಲ್ಲಿ ಮರುಭೂಮಿಯಲ್ಲಿ ಹೋರಟರು.
ಅವರ ತಂದೆ ಅವರನ್ನು ಹಿಂಬಾಲಿಸಿದರೂ ತಂದೆಯ ಕಣ್ಣಿಗೆ ಬೀಳದಂತೆ ಮರುಭೂಮಿಯಲ್ಲಿ ಮರೆಯಾಗಿ ವಾರಿಸ್ ಸಾಗಿದರು. ಮದುವೆಯೆಂಬ ಸಂಕಷ್ಟದಿಂದ ಪಾರದರೂ ಕೂಡ ದಾರಿಯುದ್ದಕ್ಕೂ ಹಲವಾರು ಸವಾಲುಗಳನ್ನು ಎದುರಿಸಬೇಕಾಯಿತು. ಹಗಲಿನಲ್ಲಿ ಆಫ್ರಿಕದ ಬಿಸಿಯಲ್ಲಿ ತನ್ನನ್ನು ತಾನೂ ರಕ್ಷಿಸಿಕೊಳ್ಳಲು ಮರದ ನೆರಳನ್ನು ಆಶ್ರಯಿಸುತ್ತಿದ್ದರು ನಂತರ ಸೂರ್ಯಸ್ತವಾದ ಬಳಿಕ ತನ್ನ ಪಯಣವನ್ನು ಮುಂದುವರೆಸುತ್ತಿದ್ದರು.
ಒಂದು ದಿನ ಸಿಂಹ ವಾರಿಸ್ ಎದುರಿನಲ್ಲಿ ಕಾಣಿಸಿಕೊಂಡಿತು. ಸುಸ್ತಾಗಿ ನಡೆಯಲು ಶಕ್ತಿಯನ್ನು ಕಳೆದುಕೊಂಡಿದ್ದ ವಾರಿಸ್ ಸಿಂಹಕ್ಕೆ ತನ್ನನ್ನು ತಿನ್ನುವಂತೆ ಹೇಳಿದರು. ಆದರೆ ಸಿಂಹ ಅವಳನ್ನು ತಿನ್ನದೇ ಅವರನ್ನು ನೋಡುತ್ತಾ ಹೊರಟುಹೋಯಿತು.
ಸಿಂಹವು ತಿನ್ನದೇ ಮುಂದೆ ಹೋದಾಗ ದೇವರು ತನಗಾಗಿ ಬೇರೆ ಏನನ್ನೋ ಯೋಚಿಸಿದ್ದಾನೆ ಆ ಕಾರಣಕ್ಕಾಗಿ ತನ್ನನ್ನು ಬದುಕಿಸಿದ್ದಾನೆ ಎಂದು ವಾರಿಸ್ ತಮ್ಮ ಪ್ರಯಾಣವನ್ನು ಮುಂದುವೆರೆಸಿದರು. ನಂತರ ಮರುಭೂಮಿಯ ಮೂಲಕ ಮೊಗಾದಿಶುಗೆ ತಲುಪಿದರು. ಅಂತಿಮವಾಗಿ ಲಂಡನ್ನಲ್ಲಿ ರಾಯಭಾರಿಯಾಗಿದ್ದ ತನ್ನ ಚಿಕ್ಕಪ್ಪನ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡರು.
ವಾರಿಸ್ ಚಿಕ್ಕಪ್ಪನ ಅಧಿಕಾರ ಕೊನೆಗೊಂಡು ಇಡೀ ಕುಟುಂಬವು ಸೊಮಾಲಿಗೆ ಮರಳಲು ಸಿದ್ದವಾದಾಗ ವಾರಿಸ್ ಅವರಿಗೆ ಸೊಮಾಲಿಗೆ ಹೋಗಲು ಇಷ್ಟವಿಲ್ಲದೇ ತನ್ನ ಪಾಸ್ಪೋರ್ಟ್ ಕಳೆದುಹೋಗಿದೆ ಎಂದು ಸುಳ್ಳು ಹೇಳಿ ಹೋಗದೇ ಉಳಿದುಕೊಂಡರು. ನಂತರ ತೋಟದಲ್ಲಿ ಇಟ್ಟಿದ್ದ ಪಾಸ್ಪೋರ್ಟ್ನ್ನು ತೆಗೆದುಕೊಂಡು ಆಕ್ರಮವಾಗಿ ಅಡಗಿಕೊಂಡು ವಾಸಿಸಿದರು.
ಅನಕ್ಷರಸ್ಥ ಆಫ್ರಿಕನ್ ಮಹಿಳೆಯೊಬ್ಬಳ ಭೇಟಿಯಾಗಿ ವಾರಿಸ್ ಅವಳೊಂದಿಗೆ ಇರಲು ಪ್ರಾರಂಭಿಸಿದರು. ಆ ಮಹಿಳೆಗೆ ವೈಡಬ್ಲೂಎ ನ ಸಹಾಯದಿಂದ ಫಾಸ್ಟ್ಫುಡ್ ರೆಸ್ಟೊರೆಂಟ್ ಒಂದರ ಅಡುಗೆ ಮನೆಯಲ್ಲಿ ಕೆಲಸವು ದೊರೆಯಿತು ಮತ್ತು ಇಂಗ್ಲೀಷ್ ಓದಲು ಬರೆಯಲು ಕಲಿಯಲು ತರಗತಿಗೆ ಹೋಗಲು ಪ್ರಾರಂಭಿಸಿದರು.
1983 ರಲ್ಲಿ, 18 ನೇ ವಯಸ್ಸಿನಲ್ಲಿ, ಮಹಿಳೆಯೊಬ್ಬರು ಮಾಡೆಲಿಂಗ್ಗಾಗಿ ಡೈರಿಯನ್ನು ರಸ್ತೆಯಲ್ಲಿ ಸಂಪರ್ಕಿಸಿದರು ಮತ್ತು ಅವರನ್ನು ಬ್ರಿಟಿಷ್ ಫೋಟೋಗ್ರಾಫರ್ ಟೆರೆನ್ಸ್ ಡೊನೊವನ್ಗೆ ಪರಿಚಯಿಸಿದರು. ಅವನು ತೆಗೆದ ಫೋಟೋಗಳು ಅವಳ ವೃತ್ತಿಜೀವನವನ್ನು ಪ್ರಾರಂಭಿಸಿದವು.
1987 ರಲ್ಲಿ ಬಹುರಾಷ್ಟ್ರೀಯ ಕಂಪನಿ ಪಿರೆಲ್ಲಿ ಮತ್ತು ಸಿ. ಸ್ಪಾನ ವಿಶೇಷ ಪಿರೆಲ್ಲಿ ಕ್ಯಾಲೆಂಡರ್ನ ಮುಖಪುಟದಲ್ಲಿ ವಾರಿಸ್ ಅವರ ಭಾವಚಿತ್ರವನ್ನು ಪ್ರಕಟಿಸಲಾಗಿತ್ತು ಮತ್ತು ಜೇಮ್ಸ್ ಬಾಂಡ್ ಚಲನಚಿತ್ರ ದಿ ಲಿವಿಂಗ್ ಡೇಲೈಟ್ಸ್ನಲ್ಲಿ ಕೂಡ ಕಾಣಿಸಿಕೊಂಡರು.
ಪ್ಯಾರೀಸ್ ಮಿಲನ್ ಮತ್ತು ನ್ಯೂಯಾರ್ಕ್ನ ರನ್ವೇಗಳಲ್ಲಿ ವಾರಿಸ್ ಕಾಣಿಸಿಕೊಂಡರು. ರೆವ್ಲಾನ್ ಮತ್ತು ಶನೆಲ್ ಸೇರಿದಂತೆ ಉನ್ನತ ಸೌಂದರ್ಯ ಉತ್ಪನ್ನಗಳ ಜಾಹಿರಾತು ಮತ್ತು ಎಲ್ಲೆ, ಗ್ಲಾಮರ್ ಮತ್ತು ವೋಗ್ನಂತಹ ಪ್ರಮುಖ ಫ್ಯಾಷನ್ ನಿಯತಕಾಲಿಕೆಗಳಲ್ಲಿ. ಅವರ ಮಾಡೆಲ್ ಆಗಿ ಕಾಣಿಸಿಕೊಂಡರು. ಎಂದು 1995 ರ ಬಿಬಿಸಿ ಸಾಕ್ಷ್ಯಚಿತ್ರ “ಎ ನೋಮಾಡ್ ಇನ್ ನ್ಯೂಯಾರ್ಕ್” ನಲ್ಲಿ ವಿವರಿಸಲಾಗಿದೆ.
ಸುಮಾರು ಐದನೇ ವಯಸ್ಸಿನಲ್ಲಿ ಎಫ್ಜಿಎಂಗೆ ಒಳಗಾದ ಡೈರಿ, 1996 ರ ನಿಯತಕಾಲಿಕದ ಸಂದರ್ಶನದಲ್ಲಿ ಅದರ ಬಗ್ಗೆ ವೈಯಕ್ತಿಕ ಮತ್ತು ಸಾಂಸ್ಕೃತಿಕ ಅಡೆತಡೆಗಳನ್ನು ಮೀರಿ ಬಹಿರಂಗವಾಗಿ ಮಾತನಾಡಿದರು. ಇದು ಆಕೆಯ ಬಗ್ಗೆ ಜನಸಾಮನ್ಯರಿಗೆ ಮತ್ತಷ್ಟು ತಿಳಿಯಲು ಸಹಾಯ ಮಾಡಿತು. 1997 ರಲ್ಲಿ ಅವರು ಎಫ್ಜಿಎಂ ಅನ್ನು ತೆಗೆದುಹಾಕಲು ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯ ವಿಶೇಷ ರಾಯಭಾರಿಯಾಗಿ ವಾರಿಸ್ ನೇಮಕಗೊಂಡರು.
ರಾಯಭಾರಿಯಾದ ನಂತರ ವಾರಿಸ್ ಹಲವಾರು ಪ್ರದೇಶಗಳಿಗೆ ಭೇಟಿ ನೀಡಿ ಎಫ್ಜಿಎಂ ಹಿಂಸಾತ್ಮಕ ಪದ್ದತಿಯ ಅರಿವನ್ನು ಮಹಿಳೆಯರಲ್ಲಿ ಮೂಡಿಸಿದರು. 1990 ರ ದಶಕದ ಅಂತ್ಯದಲ್ಲಿ 130 ಮಿಲಿಯನ್ ಹುಡುಗಿಯರು ಮತ್ತು ಮಹಿಳೆಯರು ಕೆಲವು ರೀತಿಯ ಎಫ್ಜಿಎಂ ಗೆ ಒಳಗಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ. ಇದು ಮಧ್ಯಪ್ರಾಚ್ಯ, ಏಷ್ಯಾ, ಆಫ್ರಿಕಾದಲ್ಲಿ ಹೆಚ್ಚು ಪ್ರಚಲಿತವಾಗಿದೆ.
ಸೊಮಾಲಿಯದ ಅಂದಾಜು 98 ಪ್ರತಿಶತ ಮಹಿಳೆಯರ ಮೇಲೆ ಈ ಕೃತ್ಯ ನಡೆಸಲಾಗಿದೆ. ಇನ್ಫಿಬ್ಯುಲೇಷನ್ ಎಂದು ಕರೆಯಲ್ಪಡುವ ಅತ್ಯಂತ ತೀವ್ರವಾದ ನೋವವನ್ನು ಅನುಭವಿಸಬೇಕು. ಇದರಲ್ಲಿ ಬಾಹ್ಯ ಜನನಾಂಗದ ಭಾಗವನ್ನು ಕತ್ತರಿಸಲಾಗುತ್ತದೆ ಮತ್ತು ಯೋನಿಯನ್ನು ಹೊಲಿಯಲಾಗುತ್ತದೆ, ಕೇವಲ ಒಂದು ಸಣ್ಣ ಮತ್ತು ಆಗಾಗ್ಗೆ ಸಾಕಷ್ಟಿಲ್ಲದ – ದೈಹಿಕ ದ್ರವಗಳ ಅಂಗೀಕಾರಕ್ಕೆ ಉಳಿಸಲಾಗುತ್ತದೆ. ಅರಿವಳಿಕೆ ಇಲ್ಲದೆ ನೈರ್ಮಲ್ಯದ ಪರಿಸ್ಥಿತಿಗಳಲ್ಲಿ ನಡೆಸಲಾಗುತ್ತದೆ, ಮತ್ತು ಅವಳು ಅಸಹನೀಯ ನೋವು ಮತ್ತು ಅಲ್ಪಾವಧಿಯ ಮತ್ತು ದೀರ್ಘಾವಧಿಯ ತೊಡಕುಗಳನ್ನು ಸಹಿಸಿಕೊಳ್ಳುವಂತೆ ಒತ್ತಾಯಿಸಲಾಗುತ್ತದೆ. ವಾರಿಸ್ ಎಫ್ಜಿಎಮ್ನೊಂದಿಗಿನ ತನ್ನ ಅನುಭವವನ್ನು ತನ್ನ ಆತ್ಮಚರಿತ್ರೆ “ಡೆಸರ್ಟ್ ಫ್ಲವರ್: ದಿ ಎಕ್ಸ್ಟ್ರಾರ್ಡಿನರಿ ಜರ್ನಿ ಆಫ್ ಎ ಡೆಸರ್ಟ್ ನೊಮಾಡ್ (1998)” ನಲ್ಲಿ ವಿವರಿಸಿದ್ದಾರೆ.
ತನ್ನನ್ನು ಸಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ವಾರಿಸ್ ಮಾಡೆಲಿಂಗ್ ಕ್ಷೇತ್ರದಿಂದ ನಿವೃತ್ತಿಯನ್ನು ಪಡೆದುಕೊಳ್ಳುತ್ತಾರೆ. ಸೋಮಾಲಿಯನ್ ಚಿಕಿತ್ಸಾಲಯಗಳಿಗೆ ಮತ್ತು ಶಾಲೆಗಳಿಗಾಗಿ ನಿಧಿಯನ್ನು ಸಂಗ್ರಹಿಸಲು ಡೆಸರ್ಟ್ ಡಾನ್ ಫೌಂಡೇಶನ್ (2001) ಅನ್ನು ಸ್ಥಾಪಿಸಿದರು ಮತ್ತು ಎಫ್ಜಿಎಂ ರ ರದ್ದತಿಯನ್ನು ಪ್ರತಿಪಾದಿಸಲು ವಾರಿಸ್ ಡೈರಿ ಫೌಂಡೇಶನ್ (2002) ಅನ್ನು ಸ್ಥಾಪಿಸಿದರು. 2010 ರಲ್ಲಿ ವಾರಿಸ್ ಡೈರಿ ಫೌಂಡೇಶನ್ ಅನ್ನು ಡೆಸರ್ಟ್ ಫ್ಲವರ್ ಫೌಂಡೇಶನ್ ಎಂದು ಮರುನಾಮಕರಣ ಮಾಡಲಾಯಿತು. ಇದು ಸೇವ್ ಎ ಲಿಟಲ್ ಡೆಸರ್ಟ್ ಫ್ಲವರ್ನಂತಹ ಯೋಜನೆಗಳನ್ನು ರೂಪಿಸಿತು ಮತ್ತು 2010 ರ ದಶಕದಲ್ಲಿ ಇದು ಬರ್ಲಿನ್, ಸ್ಟಾಕ್ಹೋಮ್, ಪ್ಯಾರಿಸ್ ಮತ್ತು ಆಂಸ್ಟರ್ಡ್ಯಾಮ್ನಲ್ಲಿ ಎಫ್ಜಿಎಂ ಸಂತ್ರಸ್ತರ ಚಿಕಿತ್ಸೆಗಾಗಿ ವೈದ್ಯಕೀಯ ಕೇಂದ್ರಗಳನ್ನು ಸ್ಥಾಪಿಸಿತು.
ಎಫ್ಜಿಎಂ ನ ವಿರುದ್ದ ಹೋರಾಡಿ ಪ್ರಪಂಚದ ಗಮನವನ್ನು ಸೆಳೆಯುವ ಮೊದಲ ವ್ಯಕ್ತಿಯಾಗಿ, ವಾರಿಸ್ ಲಕ್ಷಾಂತರ ಹುಡುಗಿಯರನ್ನು ಸ್ತ್ರೀ ಸುನ್ನತಿ ಎಂಬ “ಹಿಂಸಾಚಾರ” ದಿಂದ ರಕ್ಷಿಸುವ ತನ್ನ ಕಾರ್ಯವನ್ನು ಮುಂದುವರೆಸಿದ್ದಾರೆ.