ಮಂಗಳೂರು : ಬೀದಿ ಬದಿ ವ್ಯಾಪಾರಿಗಳ ಮೇಲೆ ಮಂಗಳೂರು ಮಹಾನಗರಪಾಲಿಕೆ ಟೈಗರ್ ಕಾರ್ಯಾಚರಣೆ ಆರಂಭಿಸಿದೆ. ಲೇಡಿಹಿಲ್ನ ನಾರಾಯಣ ಗುರು ವೃತ್ತದಿಂದ ಮಣ್ಣಗುಡ್ಡೆವರೆಗೆ ಹಾಗೂ ಕೆಪಿಟಿಯಿಂದ ಯೆಯ್ಯಾಡಿವರೆಗೆ ರಸ್ತೆ ಬದಿಯಲ್ಲಿ ಗೂಡಂಗಡಿಗಳನ್ನುಇಂದು ತೆರವುಗೊಳಿಸಲಾಯಿತು. ಈ ವೇಳೆ ಬೀದಿ ಬದಿ ವ್ಯಾಪಾರಿಗಳು ಹಾಗೂ ಅವರ ಸಂಘಟನೆಯ ಮುಖಂಡರು ಭಾರಿ ಸಂಖ್ಯೆಯಲ್ಲಿ ಸ್ಥಳದಲ್ಲಿ ಸೇರಿ ಪ್ರತಿರೋಧ ಒಡ್ಡಿದರು. ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪಾಲಿಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಪೊಲೀಸರ ನೆರವಿನೊಂದಿಗೆ ಟೈಗರ್ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಈ ವೇಳೆ ಅಂಗಡಿಗಳನ್ನು ಬುಲ್ಡೋಜರ್ಗಳ ಮೂಲಕ ಗೂಡಂಗಡಿಗಳನ್ನು ಧ್ವಂಸಗೊಳಿಸಿದೆ. ಅದರಲ್ಲಿದ್ದ ಮಾರಾಟ ಸಾಮಗ್ರಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಂಗಡಿಯನ್ನು ಹಾನಿಗೊಳಿಸದಂತೆ ವ್ಯಾಪಾರಿಗಳು ಗೋಳಿಟ್ಟರೂ ಅಧಿಕಾರಿಗಳು ಕಿವಿಗೊಡಲಿಲ್ಲ.
ಮಂಗಳೂರು ಬೀದಿಬದಿ ವ್ಯಾಪಾರಿಗಳ ಮೇಲಿನ ದಾಳಿ ‘ಕಾನೂನು ಬಾಹಿರ’
ಮಂಗಳೂರಿನಲ್ಲಿ ಪಾಲಿಕೆ ನಡೆಸಿದ್ದ ಬೀದಿಬದಿ ವ್ಯಾಪಾರಿಗಳ ಮೇಲಿನ ದಾಳಿ ಕಾನೂನು ಬಾಹಿರ ಎಂದು ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘ ಹೇಳಿದೆ.
ಪಾಲಿಕೆ ಮೇಯರ್ ಸುಧೀರ್ ಶೆಟ್ಟಿಯವರ ಸರ್ವಾಧಿಕಾರಿ ತೀರ್ಮಾನವನ್ನು ಪಾಲಿಕೆ ಅಧಿಕಾರಿಗಳು ಜಾರಿ ಮಾಡುತ್ತಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ಗೌರವಾಧ್ಯಕ್ಷರಾದ ಬಿಕೆ ಇಮ್ತಿಯಾಜ್ ಆರೋಪಿಸಿದ್ದಾರೆ.
ಪಾಲಿಕೆ ಅಧಿಕಾರಿಗಳು ಮಂಗಳೂರು ನಗರದ ವಿವಿಧೆಡೆ ಸುಮಾರು ನೂರಕ್ಕೂ ಅಧಿಕ ಬಡಬೀದಿ ವ್ಯಾಪಾರಿಗಳ ಮೇಲೆ ಅಕ್ರಮ ಕಾರ್ಯಾಚರಣೆ ನಡೆಸಿ ಅವರ ಸೊತ್ತುಗಳನ್ನು ಹಾನಿ ಮಾಡಿ ನಾಶ ಮಾಡಿ ಅಮಾನವೀಯವಾಗಿ ವರ್ತಿಸಿದ್ದಾರೆ ಮೇಯರ್ ಆವರ ಕುಮ್ಮಕ್ಕಿನಿಂದ ಮಾಡಿದ್ದಾರೆ ಹೊರಟು ಕಾನೂನು, ನಿಯಮಾನುಸಾರ ಮಾಡಿಲ್ಲ ಪಾಲಿಕೆಯಲ್ಲಿರುವ ಪಟ್ಟಣ ವ್ಯಾಪಾರ ಸಮಿತಿ ಸಭೆ ನಡೆಸದೆ ಅನುಮೋದನೆಗೊಂಡಿರವ ಅಧಿಕೃತ ಬೀದಿ ವ್ಯಾಪಾರಿಗಳ ಮೇಲೆಯೂ ಧಾಳಿ ನಡೆಸಿರುವುದು ಖಂಡನೀಯ ಸಂಘದ ಮುಖಂಡರಾದ ನಮ್ಮನ್ನು ಬಂಧನದಲ್ಲಿಟ್ಟು ಕಾರ್ಯಾಚರಣೆ ನಡೆಸಿ ನಮ್ಮ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ ಕಾರ್ಯಾಚರಣೆ ನಿಲ್ಲಿಸದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಬಿಕೆ ಇಮ್ತಿಯಾಜ್ ಹೇಳಿದ್ದಾರೆಮಂಗಳೂರು. ಅಲ್ಲದೆ ಈ ಸಂದರ್ಭದಲ್ಲಿ ಕಾರ್ಯಾಚರಣೆಗೆ ಅಡ್ಡಿ ಪಡಿಸಿದ ಹಿನ್ನಲೆಯಲ್ಲಿ ಪೊಲೀಸರು ಬಿಕೆ ಇಮ್ತಿಯಾಜ್ ರನ್ನ ಬಂಧಿಸಿದ್ದಾರೆ.