ಬಡವರಿಗೆ ಕಡಿಮೆ ದರದಲ್ಲಿ ಆಹಾರ ನೀಡಲು ಆಂಧ್ರಪ್ರದೇಶ ಸರ್ಕಾರ ಹೊಸ ಉಪಾಯ ಮಾಡಿದೆ. ಹಿಂದಿನ ಅಣ್ಣಾ ಕ್ಯಾಂಟೀನ್ಗಳಂತೆಯೇ ಹೊಸ ಆಲೋಚನೆಯೊಂದಿಗೆ ಆಹಾ ಕ್ಯಾಂಟೀನ್ ಜಾರಿಗೆ ತರಲು ಹೊರಟಿದೆ.
ಈಗಾಗಲೇ ಅಮ್ಮಾ ಕ್ಯಾಟೀನ್, ಅಣ್ಣಾ ಕ್ಯಾಂಟೀನ್, ಇಂದಿರಾ ಕ್ಯಾಂಟೀನ್ ಎಂಬ ಬಡವರಿಗಾಗಿ ಸರ್ಕಾರವೇ ಕ್ಯಾಂಟೀನ್ ತೆರೆದು ಕಡಿಮೆ ಬೆಲೆ ಆಹಾರ ಒದಗಿಸುತ್ತಿರುವುದನ್ನ ನೋಡಿದ್ದೇವೆ. ಇದೀಗ ಆ ಪಟ್ಟಿಗೆ ಮತ್ತೊಂದು ಕ್ಯಾಂಟೀನ್ ಸೇರ್ಪಡೆಯಾಗಲಿದೆ.
ಆಂಧ್ರ ಪ್ರದೇಶ ಸರ್ಕಾರವು ರಾಜ್ಯಾದ್ಯಂತ ಆಹಾ ಕ್ಯಾಂಟೀನ್ಗಳನ್ನು ಮೆಪ್ಮಾ ( Mission for Elimination of Poverty in Municipal Areas) ಅಡಿಯಲ್ಲಿ ಹಂತ ಹಂತವಾಗಿ ಇವುಗಳನ್ನು ಸ್ಥಾಪಿಸುತ್ತಿದೆ. ಈ ಹಿಂದೆ ರಾಜ್ಯದಲ್ಲಿ ಅಣ್ಣಾ ಕ್ಯಾಂಟೀನ್ ಆರಂಭಿಸಲಾಗುತ್ತು. ಇದೀಗ ರಾಜ್ಯದ 140 ಪುರಸಭೆಗಳಲ್ಲಿ ಆಹಾ ಹೆಸರಿನಲ್ಲಿ ಸರ್ಕಾರ ಈ ಕ್ಯಾಂಟೀನ್ಗಳನ್ನು ನಿರ್ಮಿಸುತ್ತಿದೆ. ಇದರ ನಿರ್ವಹಣೆಗಾಗಿ ಸ್ವಸಹಾಯ ಸಂಘಗಳ ಸದಸ್ಯರಿಗೆ ಸರ್ಕಾರ ತಲಾ 13 ಸಾವಿರ ರೂಪಾಯಿ ಆರ್ಥಿಕ ನೆರವು ನೀಡಲಿದೆ.
ಈ ಕ್ಯಾಂಟೀನ್ನಲ್ಲಿ ಬೆಳಗಿನ ಟಿಫಿನ್, ಮಧ್ಯಾಹ್ನ ಮತ್ತು ರಾತ್ರಿ ಊಟ ಅತ್ಯಲ್ಪ ದರದಲ್ಲಿ ದೊರೆಯಲಿದೆ. ಪುಳಿಯೊಗರೆ, ಫ್ರೈಡ್ ರೈಸ್, ಮೊಸರು, ವಡೆ ಇದರಲ್ಲಿ ಸಿಗುತ್ತವೆ. ಪಾಕೆಟ್ಸ್ ರೂಪದಲ್ಲೂ ಖರೀದಿದಾರರಿಗೆ ಸರಬರಾಜು ಮಾಡಲಾಗುತ್ತದೆ. ಪ್ರತಿ ಪಾಕೆಟ್ಗೆ 10 ರೂಪಾಯಿಯಂತೆ ಸ್ವಸಹಾಯ ಸಂಘಗಳು, ಮೆಪ್ಮಾ ಅಡಿಯಲ್ಲಿ ನಿರ್ವಹಿಸಲ್ಪಡುವುದರಿಂದ, ಆದಾಯವು ಅವರಿಗೆ ಹೋಗುತ್ತದೆ.