ಶ್ರೀನಗರ ಕಿಟ್ಟಿ ಮತ್ತು ಮೋಹಕ ತಾರೆ ರಮ್ಯಾ ಅಭಿನಯಿಸಿರುವ ಸಂಜು ವೆಡ್ಸ್ ಗೀತಾ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ರೊಮ್ಯಾಂಟಿಕ್ ಮ್ಯೂಸಿಕಲ್ ಜರ್ನಿ ಕ್ರಿಯೇಟ್ ಮಾಡಿತ್ತು. ಈಗ ಚಿತ್ರಕ್ಕೆ ಸೀಕ್ವೆಲ್ ಸಿದ್ಧವಾಗುತ್ತಿದ್ದು ಚಿತ್ರದಲ್ಲಿ ನಾಯಕಿ ಯಾರಗಲಿದ್ದಾರೆ ಎಂಬ ಕುತೂಹಲ ಸಿನಿಪ್ರಿಯರಲ್ಲಿತ್ತು. ಇದೀಗ ರಚಿತಾ ರಾಮ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿ ಸಿನಿಮಾ ತಂಡ ಅಧಿಕೃತವಾಗಿ ಘೋಷಣೆ ಮಾಡಿದೆ.
ಕೆಲ ದಿನಗಳ ಹಿಂದೆ ನಿರ್ದೇಶಕ ನಾಗಶೇಖರ್ ‘ಸಂಜು ವೆಡ್ಸ್ ಗೀತಾ 2’ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ಶ್ರೀನಗರ ಕಿಟ್ಟಿ ಹೀರೋ ಆಗಿ ನಟಿಸುತ್ತಿರುವುದಾಗಿಯೂ ಮಾಹಿತಿ ನೀಡಿದ್ದರು. ಆದರೆ ನಾಯಕಿ ಯಾರು ಎಂಬ ವಿಚಾರವನ್ನು ಬಹಿರಂಗ ಪಡಿಸಿರಲಿಲ್ಲ.
ನಾಯಕಿಯಾಗಿ ರಚಿತಾ ರಾಮ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಈಗ ರಚಿತಾ ರಾಮ್ ಅವರು ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ‘ಈ ಚಿತ್ರತಂಡದ ಜೊತೆ ಕೆಲಸ ಮಾಡೋಕೆ ಖುಷಿ ಇದೆ’ ಎಂದು ಅವರು ಬರೆದುಕೊಂಡಿದ್ದಾರೆ.
‘ಸಂಜು ವೆಡ್ಸ್ ಗೀತಾ 2’ ಸಿನಿಮಾಗೆ ನಾಗಶೇಖರ್ ಅವರೇ ಬಂಡವಾಳ ಹೂಡುತ್ತಿದ್ದು, 2024ರ ದಸರಾ ಹಬ್ಬಕ್ಕೆ ಈ ಚಿತ್ರ ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ.
ರಚಿತಾ ರಾಮ್ ಸದ್ಯ ರಿಯಾಲಿಟಿ ಶೋ ‘ಮಿಸ್ಟರ್ ಬ್ಯಾಚುಲರ್’ನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ದರ್ಶನ್ ಅಭಿನಯದ ಕ್ರಾಂತಿ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ನಟಿ, ಮುಂಬರುವ ಚಿತ್ರವಾದ ಮ್ಯಾಟಿನಿಯಲ್ಲಿ ಸತೀಶ್ ನೀನಾಸಂ ಜೊತೆಗೆ ನಟಿಸಿದ್ದಾರೆ. ರಚಿತಾ ಅವರ ಕೃಷ್ಣ ಅಭಿನಯದ ‘ಲವ್ ಮಿ or ಹೇಟ್ ಮಿಟ ಮತ್ತು ನಿರ್ಮಾಣದ ಹಂತಗಳಲ್ಲಿರುವ ‘ಶಬರಿ’ ಚಿತ್ರದಲ್ಲಿ ಬ್ಯೂಸಿಯಾಗಿದ್ದಾರೆ