ಮಂಗಳೂರು: ಕಲ್ಮಕಾರಿನ ಜಯರಾಮ ಕೊಪ್ಪಡ್ಕ ಮತ್ತು ಪದ್ಮಾವತಿ ದಂಪತಿಗಳ ಪುತ್ರರಾದ ದೀಕ್ಷಿತ್ ಅವರು ಜು.14 ರಂದು ಫ್ರಾನ್ಸ್ ನ ಪ್ಯಾರಿಸ್ ನಲ್ಲಿ ನಡೆದ ಬಾಸ್ಟಿಲ್ಲೆ ಡೇ ಪರೇಡ್ ನಲ್ಲಿ ಭಾಗವಹಿಸಿದರು.
ಈ ಪರೇಡ್ನಲ್ಲಿ ಭಾರತೀಯ ಮೂರು ದಳದ ಸೇನಾ ಪಡೆಗಳು ಭಾಗವಹಿಸಿದೆ. ಮತ್ತೊಂದು ವಿಶೇಷವೆಂದರೆ ಕಾರ್ಯಕ್ರಮದಲ್ಲಿ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಅತಿಥಿ ಯಾಗಿ ಭಾಗವಹಿಸಿದ್ದಾರೆ. ಭಾರತದ ನೌಕಾಪಡೆಯ 64 ಸೈನಿಕರು ಇದರಲ್ಲಿ ಭಾಗವಹಿಸಿದ್ದು ಅದರಲ್ಲಿ ದೀಕ್ಷಿತ್ ಅವರು ಕೂಡ ಒಬ್ಬರು.
ಇವರ ತಂದೆಯೂ ಸಹ ಭಾರತೀಯ ನೌಕಾ ಪಡೆಯ ಯೋಧನಾಗಿದ್ದಾರೆ. ಈ ಹಿಂದೆ ಗಣರಾಜ್ಯೋತ್ಸವ ಪೆರೆಡ್ ನಲ್ಲೂ ದೀಕ್ಷಿತ್ ಭಾಗವಹಿಸಿದ್ದರು.