ಭಾರತೀಯರು ಹೆಚ್ಚಾಗಿ ಅಕ್ಷಯ ತೃತೀಯದಂತಹ ಶುಭ ಸಮಯದಲ್ಲಿ ಚಿನ್ನವನ್ನ ಖರೀದಿ ಮಾಡುತ್ತಾರೆ. ಬೆಲೆ ಬಾಳುವ ಬೆಳ್ಳಿಬಂಗಾರವನ್ನು ಕೊಂಡು ಕೊಳ್ಳಲು ಅಂದು ಶುಭ ದಿನ ಎನ್ನುವುದು ಭಾರತೀಯರ ನಂಬಿಕೆಯಾಗಿದೆ.
ಕಳೆದ ವರ್ಷದ ಅಕ್ಷಯ ತೃತೀಯದಲ್ಲಿ ಒಂದು ವೇಳೆ ಬಂಗಾರವನ್ನು ಖರೀದಿ ಮಾಡಿದ್ದರೆ ಅದನ್ನು ಈ ಬಾರಿಯ ಅಕ್ಷಯ ತೃತೀಯದಲ್ಲಿ ಶೇಕಡಾ 15 ರಷ್ಟು ಲಾಭದಲ್ಲಿ ವಿನಿಮಯ ಮಾಡಿಕೊಳ್ಳಬಹುದಾಗಿದೆ.
ಚಿನ್ನವನ್ನು ಯೋಜನಾಬದ್ಧ ರೀತಿಯಲ್ಲಿ ಹಂತ ಹಂತವಾಗಿ ಖರೀದಿಸುವುದು ಮತ್ತು ನಿಮ್ಮ ಪೋರ್ಟ್ ಫೋಲಿಯೋದಲ್ಲಿ ಹತ್ತರಿಂದ ಹದಿನೈದು ಶೇಖಡದಷ್ಟು ಚಿನ್ನಕ್ಕೆ ಮೀಸಲಿಡುವುದು ಸಮಂಜಸವಾಗಿದ್ದರೂ ಈ ಬಾರಿಯ ಅಕ್ಷಯ ತೃತೀಯದಂದು ಚಿನ್ನವನ್ನು ಔಪಚಾರಿಕವಾಗಿ ಖರೀದಿಸುವುದೋ ಅಥವಾ ಚಿನ್ನದ ಮೇಲಿನ ಹೂಡಿಕೆಯನ್ನು ಹೆಚ್ಚಿಸುವ ಸಲುವಾಗಿ ಖರೀದಿಸುವುದೋ ಎಂಬುವುದು ಪ್ರಶ್ನೆಯಾಗಿದೆ.
ಚಿನ್ನವನ್ನ ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡಲು ಅಕ್ಷಯ ತೃತೀಯ ಸೂಕ್ತ ಸಮಯ ಯಾಕೆಂದರೆ ಚಿನ್ನದ ಖರೀದಿಯ ಬೆಲೆಯಲ್ಲಿ ರಿಯಾಯಿತಿ ದೊರೆಯುತ್ತದೆ.
ಅಂತರಾಷ್ಟ್ರೀಯ ಚಿನ್ನದ ಬೆಲೆಯಿಂದ ದೇಶಿಯ ಚಿನ್ನದ ಬೆಲೆಯು ನಿಗದಿಯಾಗುತ್ತದೆ. ಹಾಗಾಗಿ ಅಂತರಾಷ್ಟ್ರೀಯ ಚಿನ್ನದ ಬೆಲೆಯು ಯುಎಸ್ ಡಾಲರ್ಗಳಲ್ಲಿ ನಿಗದಿಯಾಗುತ್ತದೆ. ಆದರಿಂದ ಚಿನ್ನದ ಬೆಲೆಯಲ್ಲಿ ಯುಎಸ್ನ ಆರ್ಥಿಕತೆ ಪ್ರಮುಖ ಪಾತ್ರ ವಹಿಸುತ್ತದೆ. ಫೆಡರಲ್ ರಿಸರ್ವ್ ರಿಜಿನಲ್ ಬ್ಯಾಂಕಿನೊದಿಗೆ ಸೇರಿಕೊಂಡು ಬಡ್ಡಿದರ ಹೆಚ್ಚಳದ ಮೂಲಕ ಯುಎಸ್ನ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ.
ಯುಎಸ್ ಉಂಟಾಗಿರುವ ಆರ್ಥಿಕ ಸಮಸ್ಯೆಯನ್ನು ನೋಡಿದರೆ ಮುಂದಿನ ದಿನಗಳಲ್ಲಿ ಹಣಕಾಸಿನ ವ್ಯವಸ್ಥೆಯಲ್ಲಿ ಇನ್ನೂ ಹೆಚ್ಚಿನ ಸಮಸ್ಯೆ ಉಂಟಾಗುವ ಸಾಧ್ಯತೆಗಳಿವೆ. ಕಳೆದ 9 ತಿಂಗಳಿನಿಂದ ಯುಎಸ್ಎನ ಬೊಕ್ಕಸದಲ್ಲಿ ಆರ್ಥಿಕ ಸಮಸ್ಯೆ ಉಂಟಾಗಿದ್ದು ಇನ್ನೂ ಮುಂದಿನ 12 ತಿಂಗಳುಗಳ ಕಾಲ ಇದು ಮುಂದುವರೆಯುವ ಸೂಚನೆಗಳಿವೆ. ಆರ್ಥಿಕ ಪರಿಸ್ಥಿತಿಯು ಹೀಗೆ ಮುಂದುವರೆದರೆ ಚಿನ್ನದ ಬೆಲೆ ಇನ್ನೂ ದುಬಾರಿಯಾಗಲಿದೆ.
ಯುಎಸ್ನ ಆರ್ಥಿಕ ಮತ್ತು ಹಣಕಾಸಿನ ಸಮಸ್ಯೆಯು ಫೆಡರಲ್ ಹಾಕಿಶ್ನ ಸಾಮರ್ಥ್ಯವನ್ನು ಮಿತಿಗೊಳಿಸಲಿದೆ. ಯುಎಸ್ ಸೆಂಟ್ರರ್ ಬ್ಯಾಂಕ್ನ ಯೋಜನೆಯ ಕೊನೆಯ ದರವು 5-5.25 ಪ್ರತಿಶತದಲ್ಲಿದೆ. ಇದರಲ್ಲಿ ಒಂದು 25 ಪಾಯಿಂಟ್ ಹೆಚ್ಚಾಗುವ ಸಾಧ್ಯತೆಗಳಿವೆ. ಚಿನ್ನದ ದರವನ್ನು ಕಡಿಮೆ ಮಾಡಲು ಮತ್ತು ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಬಡ್ಡಿದರ ದಲ್ಲಿ ಬದಲಾವಣೆ ಅವಶ್ಯಕವಾಗಿದೆ.
ಯುಎಸ್ನಲ್ಲಿ ನೀತಿ ರೂಪಿಸುವವರ ಹಿಡಿತಕ್ಕೆ ಸಿಗದಷ್ಟು ದೊಡ್ಡ ಮಟ್ಟದಲ್ಲಿ ಹಣದುಬ್ಬರ ಉಂಟಾಗಿದೆ. ಇದರಿಂದಾಗಿ ಚಿನ್ನಕ್ಕೆ ಉತ್ತಮ ಬೆಲೆ ದೊರಕಿದ್ದು, ಚಿನ್ನವನ್ನು ಬಂಡವಾಳವನ್ನಾಗಿ ಉಪಯೋಗಿಸಲು ಇದು ಸಮಯವಾಗಿದೆ. ಪೋರ್ಟ್ಫೋಲಿಯೊ ಹಂಚಿಕೆಗೆ ಚಿನ್ನವು ಈಗ ಉಪಯುಕ್ತವಾದ ಸಾಧನವಾಗಿದೆ. ಮತ್ತು ಎಲ್ಲಾ ಸಮಯದಲ್ಲೂ ಹೆಚ್ಚು ಬೆಲೆಯನ್ನು ಹೊಂದಿದ ವಸ್ತು ಈಗ ಕಡಿಮೆ ಬೆಲೆಯಲ್ಲಿ ದೊರೆಯುತ್ತಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳಬಹುದು.
ಈ ಬಾರಿಯ ಅಕ್ಷಯ ತೃತೀಯದಲ್ಲಿ ಚಿನ್ನದ ಮೇಲೆ ಹೂಡಕೆ ಮಾಡುವಾಗ ಗೋಲ್ಡ್ ಇಟಿಎಫ್ಗಳು ಮತ್ತು ಚಿನ್ನದ ಉಳಿತಾಯ ನಿಧಿಗಳಂತಹ ಆರ್ಥಿಕ ಮಾರ್ಗಗಳು ನಿಮ್ಮ ಹೂಡಿಕೆಯನ್ನು ಹೆಚ್ಚಿಸುತ್ತದೆ. ಮತ್ತು ಶುದ್ಧತೆ, ಬೆಲೆ ದಕ್ಷತೆಗಳಂತಹ ಪ್ರಯೋಜನಗಳನ್ನು ನೀಡುತ್ತದೆ.