ಮಂಜಿನ ನಗರಿ ಮಡಿಕೇರಿಗಳಲ್ಲಿ ಪ್ರವಾಸಿ ತಾಣಗಳಿಗೇನು ಕಮ್ಮಿ ಇಲ್ಲ. ಇಲ್ಲಿಯ ಪ್ರಕೃತಿ ಸೌಂದರ್ಯ, ತಂಪಾದ ವಾತಾವರಣ, ಕಾವೇರಿ ಉದ್ಭವ ಸ್ಥಳ ತಲಕಾವೇರಿ, ರಾಜ ಸೀಟು, ಆನೆಗಳ ಕ್ಯಾಂಪ್ ದುಬಾರೆ, ಕುಶಲ್ ನಗರದ ಗೋಲ್ಡನ್ ಟೆಂಪಲ್ ಹೀಗೆ ಮಡಿಕೇರಿ ಮತ್ತು ಕೊಡಗಿನ ಆಕರ್ಷಣೀಯ ಸ್ಥಳಗಳ ಪಟ್ಟಿ ಬೆಳೆಯುತ್ತಲೆ ಹೋಗುತ್ತದೆ.
ಕಾಫೀ ತೋಟಗಳ ಮಧ್ಯೆ ಒಂದು ರೌಂಡ್ ಪೋಟೋ ಶೂಟ್ ಮಾಡುತ್ತಾ, ಜಲ ಪಾತದಂತಹ ಜಲ ಸಿರಿಯಲ್ಲಿ ಆಡುತ್ತಾ, ಹೋಂ ಸ್ಟೇ, ರೆಸಾರ್ಟ್ಗಳಲ್ಲಿ ಒಂದಿಷ್ಟು ಕಾಲಕಳೆಯಲು ಸರಿಯಾದ ಪ್ರವಾಸ ಸ್ಥಳವಾಗಿದೆ.
ಇಂತಹ ಒಂದು ನಯನಮನೋಹರ ಸ್ಥಳಕ್ಕೆ ಗರಿ ಎಂಬಂತೆ ಈಗ ಗ್ಲಾಸ್ ಸ್ಕೈ ವಾಕ್ ಬ್ರಿಡ್ಜ್ ಕೂಡ ಸೇರ್ಪಡೆಯಾಗಿದೆ. ಮಡಿಕೇರಿ-ತಲಕಾವೇರಿ ಮಾರ್ಗದ ಉಡೋತ್ ಮೊಟ್ಟೆಯ ಪಪ್ಪಿಸ್ ಪ್ಲಾಂಟೇಷನ್ ಐಲ್ಯಾಂಡ್ ನಲ್ಲಿ 32 ಮೀಟರ್ ಉದ್ದದ ‘ಗ್ಲಾಸ್ ಸ್ಕೆöÊ ವಾಕ್ ಬ್ರಿಡ್ಜ್’ ನ ನಿರ್ಮಾಣವಾಗಿದೆ.
ಕಾಫಿ ತೋಟದಿಂದ 78 ಅಡಿ ಎತ್ತರ, 2 ಮೀಟರ್ ಅಗಲ, 5 ಟನ್ ಬಾರ ಹೊರುವ ಸಾಮರ್ಥ್ಯವಿರುವ ಬ್ರಿಡ್ಜ್ ಮೇಲಿಂದ ಎಕಕಾಲಕ್ಕೆ 40-50 ಮಂದಿ ಪ್ರಕೃತಿ ಸೌಂದರ್ಯವನ್ನು ಸವಿಯಬಹುದಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಸದ್ಯಕ್ಕೆ 10-20 ಮಂದಿ ಎಕಕಾಲಕ್ಕೆ ಬ್ರಿಡ್ಜ್ ಮೇಲೆ ನಡೆದಾಡುವ ಅವಕಾಶ ನೀಡಲಾಗಿದೆ.
200 ರೂಪಾಯಿ ಟಿಕೆಟ್ ಖರೀದಿಸಿ 32ಮೀಟರ್ ಉದ್ದದ ಬ್ರಿಡ್ಜ್ ನಲ್ಲಿ 10 ನಿಮಿಷಗಳ ಕಾಲ ನಡೆದಾಡಬಹುದು ಮತ್ತು ಪ್ರಕೃತಿ ಸೌಂದರ್ಯವನ್ನು ಸವಿಯಬಹುದಾಗಿದೆ.
ರಾಜ್ಯದ ಮೊದಲ ಗ್ಲಾಸ್ ಸ್ಕೈ ವಾಕ್ ಬ್ರಿಡ್ಜ್ ಇದಾಗಿದು. ವಿರಾಜಪೇಟೆಯ ಶಾಸಕ ಎ.ಎಸ್.ಪೊನ್ನಣ್ಣ ಇತೀಚೆಗಷ್ಟೆ ಉದ್ಘಾಟಿಸಿದ್ದಾರೆ.