ಕೆಲವೊಬ್ಬರಿಗೆ ಎಲ್ಲಾ ಸಮಯದಲ್ಲಿಯೂ ಹಸಿವೆಯಾಗುತ್ತಿರುತ್ತದೆ. ದಿನಪೂರ್ತಿ ಯಾವುದಾದರೂ ಒತ್ತಡದಲ್ಲಿ ಸಿಲುಕಿಕೊಂಡು ಸರಿಯಾದ ಆಹಾರ ನೀರು ಪಡೆದುಕೊಳ್ಳಲು ಅವರಿಗೆ ಸಾಧ್ಯವಾಗದೆ ರಾತ್ರಿ ಮಲಗಿದ ಮೇಲೆ ಅವರಿಗೆ ಹಸಿವೆಯಾಗಲು ಶುರುವಾಗುತ್ತದೆ. ಸೂರ್ಯಾಸ್ತದ ನಂತರ ನಾವು ಹೆಚ್ಚಿನ ಕ್ಯಾಲೋರಿ ಆಹಾರವನ್ನು ಸೇವಿಸುವುದನ್ನು ನಿಲ್ಲಿಸಬೇಕು. ಆದರೆ ಮಧ್ಯರಾತ್ರಿಯಲ್ಲಿ ಒಂದು ವೇಳೆ ನಿಮಗೂ ಹಸಿವಾಗುತ್ತಿದ್ದರೆ ಏನು ಸೇವಿಸಬೇಕು ಎಂದು ಈಗ ನೋಡೋಣ.
ಕೆಲವೊಮ್ಮೆ ಮಧ್ಯರಾತ್ರಿಯಲ್ಲಿ ನಮಗೆ ಹಸಿವಾಗುತ್ತಿದ್ದರೆ, ನಾವು ಏನನ್ನಾದರೂ ತಿನ್ನಬೇಕು. ಹಸಿವೆಯಾಗಿ ಹಾಗೆ ಮಲಗುವುದು ಸರಿಯಲ್ಲ.ಸಾಮಾನ್ಯವಾಗಿ ನಾವು ರಾತ್ರಿಯ ಊಟವನ್ನು ಮಾಡುತ್ತೇವೆ ಮತ್ತು ಮಲಗುವ ಸಮಯ ಬಂದಾಗ ಮಲಗಿಕೊಳ್ಳುತ್ತೇವೆ. ಆದರೆ ಕೆಲವೊಮ್ಮೆ ತಡರಾತ್ರಿಯಲ್ಲಿ ಟಿವಿ ನೋಡುತ್ತಿದ್ದರೆ ಆಗ ಹಸಿವಿನ ಸಮಸ್ಯೆ ಉಂಟಾಗುತ್ತದೆ. ಅಲ್ಲದೆ ಕೆಲವೊಬ್ಬರಿಗೆ ಊಟದ ನಂತರ, ಏನನ್ನಾದರೂ ತಿನ್ನುವ ಅಭ್ಯಾಸ ಇರುತ್ತದೆ. ಹೀಗೆ ರಾತ್ರಿ ಹಸಿವೆಯಾದಾಗ ಏನನ್ನು ತಿನ್ನಬಹುದು ಎಂದರೆ:
ಹಣ್ಣುಗಳು: ತಾಜಾ ಮತ್ತು ಪೌಷ್ಟಿಕ ಹಣ್ಣುಗಳು ಮಧ್ಯರಾತ್ರಿಯ ತಿಂಡಿಗೆ ಉತ್ತಮ ಆಯ್ಕೆಯಾಗಿದೆ. ಸೇಬು, ಬಾಳೆಹಣ್ಣು, ಪೀಚ್, ಕಿತ್ತಳೆ, ಪಪ್ಪಾಯಿ ಹೀಗೆ ಯಾವುದೆ ಬಗೆಯ ಹಣ್ಣುಗಳನ್ನು ಬೇಕಾದರು ತಿನ್ನಬಹುದು. ಇದು ನಿಮಗೆ ಪೋಷಕಾಂಶಗಳನ್ನು ನೀಡುತ್ತದೆ ಮತ್ತು ಆರೋಗ್ಯಕರ ಮತ್ತು ಸಾತ್ವಿಕ ಆಹಾರವಾಗಿದೆ.
ಮೊಸರು ಅಥವಾ ಪನೀರ್: ಮೊಸರು ಮತ್ತು ಪನೀರ್ ಅನ್ನು ಮಧ್ಯರಾತ್ರಿಯಲ್ಲಿ ತೆಗೆದುಕೊಳ್ಳಬಹುದು. ಅವು ಪ್ರೋಟೀನ್ ಮತ್ತು ಕ್ಯಾಲ್ಸಿಯಂನ ಉತ್ತಮ ಮೂಲವಾಗಿರುವುದರಿಂದ ಅಲ್ಲದೆ ಉಪವಾಸ ಮಾಡುವ ಆರೋಗ್ಯಕರ ವ್ಯಕ್ತಿಗೆ ಇದು ಉತ್ತಮ ಆಯ್ಕೆಯಾಗಿವೆ.
ಡ್ರೈ ಫ್ರೂಟ್ಸ್ ಗಳು: ಮಧ್ಯರಾತ್ರಿಯ ತಿಂಡಿಗಾಗಿ ನೀವು ಬಾದಾಮಿ, ಗೋಡಂಬಿ, ಕಡಲೆಕಾಯಿ, ವಾಲ್ನಟ್, ಒಣದ್ರಾಕ್ಷಿ ಮುಂತಾದ ಒಣ ಹಣ್ಣುಗಳನ್ನು ಆಯ್ಕೆ ಮಾಡಬಹುದು. ಅವು ಪ್ರೋಟೀನ್ಗಳು, ವಿಟಮಿನ್ಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿವೆ ಮತ್ತು ದೀರ್ಘಕಾಲದವರೆಗೆ ಹಸಿವು ಆಗಲು ಬಿಡುವುದಿಲ್ಲ.
ಓಟ್ ಮೀಲ್: ಓಟ್ ಮೀಲ್ ನಲ್ಲಿ ಫೈಬರ್, ಪ್ರೊಟೀನ್ ಮತ್ತು ಅಗತ್ಯವಾದ ಖನಿಜಗಳ ಪ್ರಮಾಣವು ಅಧಿಕವಾಗಿರುತ್ತದೆ. ಅದು ನಿಮಗೆ ಪೂರ್ಣತೆಯ ಭಾವನೆಯನ್ನು ನೀಡುತ್ತದೆ. ಹಾಗಾಗಿ ಯಾವಗೆಲ್ಲ ನಮಗೆ ಆಹಾರ ತಿನ್ನಬೇಕೆನಿಸುತ್ತದೆ ಆಗ ಇದನ್ನು ಉಪಯೋಗಿಸಬಹುದು