ಸುಡುವ ಬಿಸಿಲಿಗೆ ಯಾರ ಮುಖದಲ್ಲಿ ನೋಡಿದರು, ಚರ್ಮದ ಹೊಳಪು ಕಡಿಮೆ ಆಗುವುದು ಅಥವಾ ಕಪ್ಪಾಗುವುದು ಸಾಮಾನ್ಯ. ಕೆಲವೊಮ್ಮೆ ಚರ್ಮದಲ್ಲಿ ಹೈಪರ್ಪಿಗ್ಮೆಂಟೇಶನ್ ಮತ್ತು ಸನ್ ಟ್ಯಾನ್ ಕೂಡ ಉಂಟಾಗುತ್ತದೆ.
ನಾವು ತುಂಬಾ ಹೊತ್ತು ಹೊರಗೆ ಸೂರ್ಯನ ಬಿಸಿಲಿನಲ್ಲಿ ಇದ್ದಾಗ, ಚರ್ಮದ ಹೊಳಪು ಇಲ್ಲದ ಹಾಗೆ ಆಗುತ್ತದೆ. ಆದರೆ, ಈ ಸಮಸ್ಯೆ ದೂರಾಗಿಸಲು ದುಬಾರಿ ಫೇಶಿಯಲ್ಗಳನ್ನು ಮಾಡುವುದಕ್ಕಿಂತ, ಮನೆಯಲ್ಲೇ ಇರುವ ಸಾಮಾಗ್ರಿಗಳನ್ನು ಉಪಯೋಗಿಸಿಕೊಂಡು ಪರಿಹಾರ ಕಂಡುಕೊಳ್ಳಬಹುದು.
ಈ ಮನೆಮದ್ದುಗಳು ಚರ್ಮದ ಟ್ಯಾನ್ ತೆಗೆಯುವುದು ಮಾತ್ರವಲ್ಲದೆ, ಚರ್ಮಕ್ಕೆ ಮೃದುತ್ವವನ್ನೂ ನೀಡುತ್ತವೆ. ಲಿಂಬೆ ರಸ, ಸನ್ ಟ್ಯಾನ್ ತೆಗೆಯುವ ನೈಸರ್ಗಿಕ ಸಾಧಕ ಆಗಿದೆ. ತಾಜಾ ನಿಂಬೆ ಹಣ್ಣಿನ ರಸ ತೆಗೆದುಕೊಂಡು, ಅದಕ್ಕೆ ಒಂದು ಟೇಬಲ್ ಚಮಚ ಜೇನು ತುಪ್ಪ ಸೇರಿಸಿ. ಬೇಕಿದ್ದರೆ, ಈ ಮಿಶ್ರಣಕ್ಕೆ ಸಕ್ಕರೆಯನ್ನು ಸೇರಿಸಿ, ಚರ್ಮದ ಮೇಲೆ ನಿಧಾನಕ್ಕೆ ಸ್ಕ್ರಬ್ ಕೂಡ ಮಾಡಬಹುದು. 20-30 ನಿಮಿಷಗಳ ಕಾಲ ಅದನ್ನು ಮುಖದ ಮೇಲೆ ಹಾಗೆಯೇ ಒಣಗಲು ಬಿಟ್ಟು, ಬಳಿಕ ತೊಳೆದುಕೊಳ್ಳಬೇಕು.
ಕಡಲೇ ಹಿಟ್ಟು, ಚರ್ಮದ ಬಣ್ಣಕ್ಕೆ ಕಾಂತಿ ನೀಡುತ್ತದೆ ಮತ್ತು ಅರಶಿಣ ಚರ್ಮಕ್ಕೆ ಹೊಳಪು ನೀಡುವ ಗುಣವನ್ನು ಹೊಂದಿದೆ. ಮೊಸರಿನಲ್ಲಿ ಇರುವ ಲ್ಯಾಕ್ಟಿಕ್ ಏಜೆಂಟ್ ನಿಮ್ಮ ಚರ್ಮವನ್ನು ಮೃದುವಾಗಿಸುತ್ತದೆ. ಮೊಸರು, ಅರಶಿಣ ಮತ್ತು ಮೊಸರನ್ನು ಸೇರಿಸಿ ಒಂದು ಮಿಶ್ರಣವನ್ನು ತಯಾರಿಸಿ ಮತ್ತು ಅದನ್ನು ನಿಮ್ಮ ಮುಖಕ್ಕೆ ಹಚ್ಚಿ 15 ನಿಮಿಷ ಒಣಗಲು ಬಿಡಿ, ಅದನ್ನು ತೊಳೆದು ತೆಗೆಯುವಾಗ ನಿಧಾನಕ್ಕೆ ಸ್ಕ್ರಬ್ ಮಾಡುತ್ತಾ ಇರಬೇಕು.
ಪಪ್ಪಾಯ ಕೂಡ ಒಂದು ಉತ್ತಮ ನೈಸರ್ಗಿಕ ಬ್ಲೀಚಿಂಗ್. ಆಲೂಗಡ್ಡೆ ರಸವು ಕೂಡ ಬ್ಲೀಚಿಂಗ್ ಏಜೆಂಟ್ ಆಗಿದ್ದು, ಕಣ್ಣಿನ ಸುತ್ತ ಇರುವ ಕಪ್ಪು ವರ್ತುಲಗಳನ್ನು ಮಂದಗೊಳಿಸುತ್ತದೆ. ಟೊಮ್ಯಾಟೋ ಆ್ಯಂಟಿ ಆಕ್ಸಿಡೆಂಟ್ಗಳನ್ನು ಗುಣಗಳನ್ನು ಹೊಂದಿದೆ ಮತ್ತು ಅದು ಚರ್ಮಕ್ಕೆ ಉತ್ತಮ ಕಾಂತಿ ನೀಡಬಲ್ಲದು. ಸೌತೆಕಾಯಿ ಒಂದು ಸೇನ್ಸೆಶನಲ್ ಕೂಲಿಂಗ್ ಏಜೆಂಟ್ ಆಗಿದ್ದು, ಟ್ಯಾನ್ ನಿವಾರಣೆ ಮಾಡಲು ಸಹಾಯ ಮಾಡುವುದು.
ಪಪ್ಪಯಾ ಹಣ್ಣು, ಕಲ್ಲಂಗಡಿ ಹಣ್ಣು, ಆಲೂಗಡ್ಡೆ, ಟೊಮ್ಯಾಟೋ ಮತ್ತು ಸೌತೆಕಾಯಿಯ 4-5 ತುಂಡುಗಳನ್ನು ತೆಗೆದುಕೊಂಡು, ಅದನ್ನು ನುಣ್ಣಗೆ ರುಬ್ಬಿಕೊಳ್ಳಿ. ಆ ಪೇಸ್ಟ್ ಅನ್ನು 15 ನಿಮಿಷಗಳ ಕಾಲ ಫ್ರಿಡ್ಜ್ನಲ್ಲಿ ಇಡಿ. ಬಳಿಕ ಅದನ್ನು ಚರ್ಮದ ಮೇಲೆ ಹಚ್ಚಿ ಮತ್ತು ಚರ್ಮ ಅದನ್ನು ಹೀರಿಕೊಳ್ಳುವ ವರೆಗೆ ಉಜ್ಜಿದ್ದರೆ ಟ್ಯಾನ್ ನಿವಾರಣೆ ಆಗುತ್ತದೆ.