ತಾಯ್ತನ ಎನ್ನುವುದು ಪ್ರತಿ ಹೆಣ್ಣಿನ ಜೀವನದಲ್ಲೂ ಅತಿ ಮಧುರವಾದ ಘಟ್ಟ. ಮಗುವಿನ ಲಾಲನೆ ಪಾಲನೆಯಲ್ಲಿ ಹೆಣ್ಣು ತನ್ನನ್ನು ತಾನೇ ಮರೆತು ಬಿಡುವಳು ಆದರೆ ಕೆಲವೊಮ್ಮೆ ಹೆಣ್ಣು ಪ್ರಸವದ ನಂತರ ಮಾನಸಿಕ ಹಾಗೂ ದೈಹಿಕ ಸಮಸ್ಯೆಯ ಸುಳಿಯಲ್ಲಿ ಸಿಲುಕಿ ನರಳುತ್ತಾಳೆ. ಮಗು ಜನಿಸಿದ ದೈಹಿಕ ಆಯಾಸ ಕಳೆದ ಬಳಿಕವು ಎಲ್ಲರೊಡನೆ ಬೆರಯಲು ಹಿಂದೇಟು ಹಾಕಿ ಮಂಕಾಗಿ ಕುಳಿತು ಬಿಡುತ್ತಾಳೆ. ಇದೇ ಮುಂದುವರೆದು ಗಂಭೀರ ಸಮಸ್ಯೆಯಾಗಿ ಪರಿಣಾಮಿಸಿ ಮಾನಸಿಕ ಖಿನ್ನತೆಗೆ ಒಳಗಾಗುತ್ತಾಳೆ ಇದನ್ನು ಆಡು ಭಾಷೆಯಲ್ಲಿ ಬಾಣಂತಿ ಸನ್ನಿ ಎಂದೂ ಕರೆಯುತ್ತಾರೆ.
ಖಿನ್ನತೆಗೆ ಕಾರಣ:
*ಪ್ರಸವದ ನಂತರ ದೇಹದಲ್ಲಿ ಈಸ್ಟ್ರೋಜನ್, ಪ್ರೊಜೆಸ್ಟರಾನ್ ಮತ್ತು ಥೈರಾಯ್ಡ್ ಹಾರ್ಮೋನ್ ಗಳ ಏರುಪೇರು
*ಕುಟುಂಬದಲ್ಲಿ ಅಶಾಂತಿಯ ವಾತಾವರಣ ಹಾಗೂ ಸತಿ ಪತಿಯರಲ್ಲಿ ಅನ್ಯೋನ್ಯತೆಯ ಕೊರತೆ.
*ಆಕೆ ಬಾಲ್ಯದಿಂದ ಬೆಳೆದುಬಂದ ಹಾದಿ.
*ಮಾನಸಿಕ ಒತ್ತಡ
*ಮಗುವಿನ ಪಾಲನೆಯಲ್ಲಿ ನಿದ್ರೆಯ ಕೊರತೆ ಉಂಟಾಗುವುದು.
*ಗರ್ಭಧಾರಣೆ ಮತ್ತು ತಾಯ್ತನದ ಕುರಿತ ಅಲ್ಪ ಜ್ಞಾನ.
*ಗರ್ಭಾವಸ್ಥೆಯಲ್ಲಿ ಅನಾರೋಗ್ಯ ಸ್ಥಿತಿ.
*ಒಬ್ಬಂಟಿಯಾಗಿ ಮಗುವನ್ನು ಸಾಕುವ ಜವಾಬ್ದಾರಿ.
*ವಿಶೇಷ ಚೇತನ ಮಗುವಿನ ಜನನ
*ಅತಿಯಾಗಿ ಹಠ ಮಾಡುವ ಮಗು ಸಂಭಳಿಸುವಲ್ಲಿ ವಿಫಲವಾದಾಗ.
ಖಿನ್ನತೆಯ ಲಕ್ಷಣಗಳು:
*ಸದಾ ಮಂಕಾಗಿ ಕೂರುವುದು, ಚಿಕ್ಕ ವಿಷಯಕ್ಕೂ ಆತಂಕ, ಭಯ ಪಡುವುದು
*ಕಾರಣವಿಲ್ಲದ ವಿಷಯಕ್ಕೂ ಬೇಸರ, ತಪ್ಪಿತಸ್ಥ ಭಾವದಿಂದ ಇರುವುದು.
*ಯಾವುದೇ ವಿಷಯಗಳಲ್ಲಿ ಆಸಕ್ತಿಯನ್ನು ತೋರದೇ ಇರುವುದು.
*ಋಣಾತ್ಮಕ ಚಿಂತನೆ, ಆತ್ಮಹತ್ಯೆಯ ಯೋಚನೆಗಳನ್ನು ಮಾಡುತ್ತಿರುವುದು.
*ಹಸಿವಿನ ಕೊರತೆ ಹಾಗೂ ನಿದ್ರಾಹೀನತೆ ಕಾಡುವುದು.
*ದೈಹಿಕ ನಿಶ್ಯಕ್ತಿ, ಅತಿಯಾದ ಸೋಮಾರಿತನ.
*ಮಗು ಬೇಡವಾಗಿತ್ತು ಎಂಬ ಯೋಚನೆಗಳು. ಮಗು ಅತ್ತಾಗ ಅದನ್ನು ಸಮಾಧಾನ ಪಡಿಸದೇ ಸಿಟ್ಟಿನಿಂದ ಇರುವುದು.
ಖಿನ್ನತೆಗೆ ಪರಿಹಾರ:
*ಪತಿ ಹಾಗು ಕುಟುಂಬದ ಸದಸ್ಯರು ತಾಯಿಯ ಬೆಂಬಲಕ್ಕೆ ನಿಂತು ಅವಳಿಗೆ ಉತ್ತಮ ವಾತಾವರಣ ಕಲ್ಪಿಸುವುದು
*ಮಗುವಿನ ಲಾಲನೆಯನ್ನು ಅವಳಿಗೆ ಸಹಾಯ ಮಾಡಿ ಧೈರ್ಯ ನೀಡುವುದು.
* ಹಾರ್ಮೋನ್ ಸಮತೋಲವನ್ನು ಮಾಡಲು ಪ್ರೋಟೀನ್ ಬರಿತ ಕಾಳುಗಳನ್ನು ತಿನ್ನುವುದು ಅತ್ಯುತ್ತಮ.
* ಒಮೆಗಾ-3 ಫ್ಯಾಟಿ ಆಸಿಡ್ ಯುಕ್ತ ಆಹಾರಗಳ ಸೇವನೆ ಹಾರ್ಮೋನ್ ಸಮತೋಲನ ಏರ್ಪಡಿಸಿ ಖಿನ್ನತೆ ನಿವಾರಣೆಗೆ ಸಹಾಯ ಮಾಡುತ್ತದೆ.
* ಅತ್ಯಧಿಕ ಫೈಬರ್ ಅಂಶ ಹೊಂದಿರುವ ಆಹಾರಗಳು ಬಾಣಂತಿಯ ಆಹಾರ ಕ್ರಮದಲ್ಲಿದ್ದರೆ ಮಲಬದ್ದತೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ಕಡಿಮೆ ಮಾಡಬಹುದು.
*ಲ್ಯಾವೆಂಡರ್ ಆಯಿಲ್ ಮತ್ತು ಕ್ಯಾಮಮೈಲ್ ಆಯಿಲ್ ಅನ್ನು ತಾಯಿ ಮಲಗುವ ಕೋಣೆಗೆ ಸಿಂಪಡಿಸುವುದು ಆಕೆಯಲ್ಲಿ ಹೊಸ ಚೈತನ್ಯ ಮೂಡಲು ಸಹಾ ಸಹಕಾರಿ.
*ಸಾಮಾನ್ಯವಾಗಿ ತಾಯಂದಿರಿಗೆ ಹೆರಿಗೆಯ ನಂತರ ನಿದ್ರೆಯ ಕೊರತೆ ಉಂಟಾಗುತ್ತದೆ. ಹೀಗಾಗಿ ಮಗುವು ನಿದ್ರಿಸುತ್ತಿರುವಾಗ ತಾಯಿ ಕೂಡಾ ನಿದ್ರೆ ಮಾಡಿ ವಿಶ್ರಾಂತಿ ಪಡೆಯಬೇಕು.
*ದೈನಂದಿನ ಚಟುವಟಿಕೆಗಳ ಜೊತೆಗೆ ಕನಿಷ್ಠ ಇಪ್ಪತ್ತು ನಿಮಿಷಗಳು ಧ್ಯಾನದಲ್ಲಿ ತೊಡಗಿಕೊಳ್ಳುವುದು ಉತ್ತಮ
*ಹೊರಗಿನ ಸ್ವಚ್ಚಂದ ವಾತಾವರಣದಲ್ಲಿ ಮಗುವಿನೊಡನೆ ಒಂದಿಷ್ಟು ಗಾಳಿ ಸೇವನೆ ಮಾಡುತ್ತಾ ವಾಕಿಂಗ್ ಮಾಡಿದರೆ ಮನಸ್ಸಿಗೆ ಉಲ್ಲಾಸವೆನಿಸುತ್ತದೆ.