ಕಳೆದ ಮಾರ್ಚ್ ತಿಂಗಳಲ್ಲಿ ಬರೋಬ್ಬರಿ 47 ಲಕ್ಷಕ್ಕೂ ಹೆಚ್ಚಿನ ಭಾರತೀಯರ ವಾಟ್ಸ್ಆ್ಯಪ್ ಖಾತೆ ನಿಷೇಧಿಸಲಾಗಿತ್ತು. ಇದಕ್ಕೆ ಮುಖ್ಯ ಕಾರಣ ತಪ್ಪು ಮಾಹಿತಿಗಳನ್ನು ಶೇರ್ ಮಾಡುತ್ತಿರುವುದು. ದಿನದಿಂದ ದಿನಕ್ಕೆ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸುತ್ತಿರುವ ವಾಟ್ಸ್ಆ್ಯಪ್ ಅನ್ನು ಕೇವಲ ಭಾರತದಲ್ಲೇ ಸುಮಾರು 550 ಮಿಲಿಯನ್ ಜನರು ಉಪಯೋಗಿಸುತ್ತಿದ್ದಾರೆ. ತನ್ನ ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಹೊಸ ಹೊಸ ಫೀಚರ್ಗಳನ್ನು ಬಿಡುಗಡೆಮಾಡುತ್ತಿರುವ ವಾಟ್ಸ್ಆ್ಯಪ್ ಪ್ರೈವಸಿಗೆ ಸಂಬಂಧಿಸಿದಂತೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ.
2021 ರಲ್ಲಿ ನೂತನ ಐಟಿ ನಿಯಮ ಬಂದ ಮೇಲೆ ವಾಟ್ಸ್ಆ್ಯಪ್ ಸುರಕ್ಷತೆ ಬಗ್ಗೆ ಹೆಚ್ಚು ಗಮನ ಹರಿಸುಲಾಗುತಿದ್ದು ಒಂದು ತಪ್ಪಾದರು ನಮ್ಮ ಅಕೌಂಟ್ ನಿಷೇಧಕ್ಕೆ ಒಳಗಾಗುತ್ತದೆ. ಇದೇ ಕಾರಣಕ್ಕೆ ಭಾರತದಲ್ಲಿ ಪ್ರತಿ ತಿಂಗಳು ಮಿಲಿಯನ್ ವಾಟ್ಸ್ಆ್ಯಪ್ ಅಕೌಂಟ್ ನಿಷೇಧವಾಗುತ್ತಿರುತ್ತದೆ.
ನೀವು ತಿಳಿಯದೆ ಮಾಡುವ ಸಣ್ಣ ತಪ್ಪು ಕೂಡ ನಿಮ್ಮ ವಾಟ್ಸ್ಆ್ಯಪ್ ಖಾತೆ ನಿಷೇಧಕ್ಕೆ ಗುರಿಯಾಗಬಹುದು. ಫಾರ್ವರ್ಡ್ ಆಗಿ ಬಂದ ಸುಳ್ಳು ಸುದ್ದಿಗಳನ್ನು ಅರಿಯದೆ ಅದನ್ನು ಇತರರಿಗೆ ಫಾರ್ವರ್ಡ್ ಮಾಡುವುದು ಅಥವಾ ಬ್ರಾಡ್ಕಾಸ್ಟ್ ಲಿಸ್ಟ್ ಅನ್ನು ಅತಿಯಾಗಿ ಉಪಯೋಗಿಸುವುದರಿಂದಲೂ ನಿಮ್ಮ ಖಾತೆ ನಿಷೇಧಕ್ಕೆ ಒಳಗಾಗುತ್ತದೆ. ತಪ್ಪು ಮಾಹಿತಿಗಳನ್ನು ಶೇರ್ ಮಾಡಿದರೆ, ಸ್ಕ್ಯಾಮ್ ಮೆಸೇಜ್ಗಳನ್ನು ಫಾರ್ವರ್ಡ್ ಮಾಡಿರುವುದು. ಹೀಗೆ ಯಾವುದೇ ಅಹಿತಕರ ಚಟುವಟಿಕೆ ಕಂಡುಬಂದಲ್ಲಿ ನಿಮ್ಮ ಖಾತೆ ಬ್ಯಾನ್ ಆಗುತ್ತದೆ.
ವಾಟ್ಸ್ಆ್ಯಪ್ ತನ್ನ ಬಳಕೆದಾರರ ಸುರಕ್ಷತೆಗೆ ಹೆಚ್ಚು ಗಮನ ಹರಿಸುತ್ತಿದೆ. ಆದರೆ ಇದಕ್ಕೆ ವಿರುದ್ಧವಾಗಿ ಕಾರ್ಯನಿರ್ವಹಿಸುವ ಚಂದಾದಾರರ ಮೇಲೆ ನೀಷೇಧ ವಿಧಿಸುತ್ತದೆ. ಎಂಡ್–ಟು–ಎಂಡ್ ಎನ್ಕ್ರಿಪ್ಟ್ ಮಾಡಿದ ಸಂದೇಶ ಸೇವೆಗಳ ಬಗ್ಗೆ ಗಮನ ಹರಿಸಲಾಗುತ್ತಿದೆ. ವರ್ಷಗಳಲ್ಲಿ, ನಮ್ಮ ಬಳಕೆದಾರರನ್ನು ನಮ್ಮ ಪ್ಲಾಟ್ಫಾರ್ಮ್ನಲ್ಲಿ ಸುರಕ್ಷಿತವಾಗಿರಿಸಲು ನಾವು ಕೃತಕ ಬುದ್ಧಿಮತ್ತೆ ಮತ್ತು ಇತರ ಅತ್ಯಾಧುನಿಕ ತಂತ್ರಜ್ಞಾನ, ಡೇಟಾ ವಿಜ್ಞಾನಿಗಳು, ತಜ್ಞರು ಮತ್ತು ಇನ್ನಿತರ ಪ್ರಕ್ರಿಯೆಗಳಲ್ಲಿ ಸತತವಾಗಿ ಹೂಡಿಕೆ ಮಾಡಲಾಗುತ್ತಿದೆ ಎಂದು ವಾಟ್ಸಪ್ ತಂಡದವರು ಹೇಳಿಕೊಳ್ಳುತ್ತಾರೆ.
ವಾಟ್ಸ್ಆ್ಯಪ್ ನಿಯಮಗಳು ಮತ್ತು ಷರತ್ತುಗಳ ಪ್ರಕಾರ, ಕಾನೂನು ಬಾಹಿರವಾಗಿದ್ದರೆ, ಅಶ್ಲೀಲ, ಮಾನಹಾನಿಕರ, ಬೆದರಿಕೆಯ, ಕಿರುಕುಳದ, ಸಂದೇಶಗಳನ್ನು ಕಳುಹಿಸಿದರೆ ನಿಮ್ಮನ್ನು ವಾಟ್ಸ್ಆ್ಯಪ್ ಬ್ಯಾನ್ ಮಾಡುವ ಸಾಧ್ಯತೆ ಇರುತ್ತದೆ.
ವಾಟ್ಸ್ಆ್ಯಪ್ ಖಾತೆ ನಿಷೇಧವಾದರೆ ರಿಕವರಿ ಮಾಡುವದು ಹೇಗೆಂದರೆ:
ವಾಟ್ಸ್ಆ್ಯಪ್ ಅನ್ನು ಇಮೇಲ್ ಮಾಡಿ ಅಥವಾ ಆ್ಯಪ್ನಲ್ಲಿ ರಿವ್ಯೂ ರಿಕ್ವೆಸ್ಟ್ ಆಯ್ಕೆಯನ್ನು ಟ್ಯಾಪ್ ಮಾಡಬೇಕು.
ರಿವ್ಯೂ ರಿಕ್ವೆಸ್ಟ್ ನೀಡಿದ ನಂತರ ನಿಮ್ಮ ಸಮಸ್ಯೆಯನ್ನು ಪರಿಶೀಲಿಸಿ ಮತ್ತೆ ನಿಮಗೆ ಮುಂದಿನ ಹಂತದ ಮಾಹಿತಿಯನ್ನು ಒದಗಿಸಲಾಗುತ್ತದೆ.
ಈಗ ವಾಟ್ಸ್ಆ್ಯಪ್ ನಿಮ್ಮ ಬಗ್ಗೆ ಬಂದಿರುವ ದೂರುಗಳನ್ನು ಪರಿಶೀಲಿಸಿ ಬಳಿಕ ನಿಮ್ಮನ್ನು ಸಂಪರ್ಕಿಸುತ್ತದೆ.
ವಾಟ್ಸ್ಆ್ಯಪ್ನಲ್ಲಿ ರಿವ್ಯೂ ರಿಕ್ವೆಸ್ಟ್ ನೀಡಿದಾಗ ನಿಮಗೆ SMS ಮೂಲಕ ಕಳುಹಿಸಲಾದ 6-ಅಂಕಿಯ ನೋಂದಣಿ ಕೋಡ್ ಅನ್ನು ನಮೂದಿಸಬೇಕು.
ಕೋಡ್ ನಮೂದಿಸಿದ ನಂತರ ನಿಮಗೆ ರಿವ್ಯೂ ಬರೆಯಲು ಅನುಮತಿ ಸಿಗುತ್ತದೆ ಜೊತೆಗೆ ನಿಮ್ಮ ಬಗ್ಗೆ ಬಂದ ದೂರಿನ ಬಗ್ಗೆ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.