ಬೆಂಗಳೂರು: ಒಂದು ಕಡೆ ಪೊಲೀಸರು ಎಲೆಕ್ಷನ್ ಡ್ಯೂಟಿಯಲ್ಲಿ ಫುಲ್ ಬ್ಯುಸಿಯಾಗಿದ್ದರು. ಸಂಚಾರಿ ಪೊಲೀಸರು ಟ್ರಾಫಿಕ್ ಆಗದಂತೆ ನೋಡುತ್ತಿದ್ದರು ಇದರ ನಡುವೆ ವಾಹನ ಸವಾರಕರು ಪೊಲೀಸರು ಹೇಗು ಇಲ್ಲ ಅಂತ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುತ್ತಿದ್ದರು. ಸಂಚಾರಿ ಪೊಲೀಸರು ರಸ್ತೆಯಲ್ಲಿ ನಿಂತು ವಾಹನಗಳನ್ನು ತಡೆಯದೆ ಇರುವುದರಿಂದ ಪೊಲೀಸರು ಇಲ್ಲ ಅಂತ ತಮಗೆ ಬೇಕಾದ ರೀತಿ ವಾಹನ ಓಡಾಡಿಸುತ್ತಿದ್ದರು.
ಆದರೆ ಪೊಲೀಸರು ಇಲ್ಲ ಅಂತ ವಾಹನಗಳನ್ನು ಹಿಗ್ಗಾಮುಗ್ಗಾ ಓಡಿಸುತ್ತಿದ್ದವರಿಗೆ ಟ್ರಾಫಿಕ್ ಪೊಲೀಸ್ ಇಲಾಖೆ ಅಳವಡಿಸಿರುವ ಕ್ಯಾಮೆರಾಗಳಂದ ಸವಾರಕರಿಗೆ ಶಾಕ್ ಸಿಕ್ಕಿದೆ. ನಿಯಮ ಉಲ್ಲಂಘಟನೆ ಮಾಡಿ ವಾಹನ ಚಲಾಯಿಸುವ ವಾಹನಗಳ ಮೇಲೆ ಕೇಸ್ಗಳು ದಾಖಲಿಸಿ ಮನೆಗೆ ನೋಟಿಸ್ ಕಳಿಸಲಾಗಿದೆ.
ಚುನಾವಣೆ ನೀತಿ ಸಂಹಿತೆ ವೇಳೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಆಗಿರುವುದು ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲಿ ಕಳೆದ 25 ದಿನದಲ್ಲಿ 4 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು 4.12 ಲಕ್ಷ ಪ್ರಕರಣಗಳಿಗೆ ಒಟ್ಟು 22 ಕೋಟಿ 89 ಲಕ್ಷ ದಂಡವನ್ನು ಸಂಚಾರಿ ಪೊಲೀಸರು ವಿದಿಸಿದ್ದಾರೆ. ನೀತಿ ಸಂಹಿತೆ ವೇಳೆ ಬಿರುಸಿನ ಪ್ರಚಾರ ನಡೆಸಿದ್ದ ರಾಜಕೀಯ ಪಕ್ಷದ ಕಾರ್ಯಕರ್ತರು ರೋಡ್ ಶೋ, ಬೈಕ್ ರ್ಯಾಲಿ ನಡೆಸಿದ್ದರು. ಈ ವೇಳೆ ಬಹುತೇಕ ಕಾರ್ಯಕರ್ತರು ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದರು. ನಂಬರ್ ಪ್ಲೇಟ್ ಆಧರಿಸಿ ಸಂಚಾರಿ ಪೊಲೀಸರು ದಂಡ ಹಾಕಿದ್ದಾರೆ. ಕೆಲ ವಾಹನ ಮಾಲೀಕರ ಮೊಬೈಲ್ಗಳಿಗೆ ಈಗಾಗಲೇ ದಂಡದ ಸಂದೇಶ ರವಾನಿಸಲಾಗಿದ್ದು ಅತಿವೇಗದ ಚಾಲನೆ, ಸಿಗ್ನಲ್ ಜಂಪ್, ಜೀಬ್ರಾ ಕ್ರಾಸಿಂಗ್, ತ್ರಿಬಲ್ ರೈಡಿಂಗ್, ಹೆಲ್ಮೇಟ್ ರಹಿತ ಚಾಲನೆ, ಮೊಬೈಲ್ ಬಳಕೆಗೆ ದಂಡ ಹಾಕಲಾಗಿದೆ. 250ಕ್ಕೂ ಹೆಚ್ಚು ಜಂಕ್ಷನ್ನಲ್ಲಿ ಅಳವಡಿಸಿದ್ದ ಕ್ಯಾಮೆರಾದಲ್ಲಿ ಉಲ್ಲಂಘನೆ ಮಾಡಿದ್ದು ಬಯಲಾಗಿದೆ.