ಮೇ.10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣಾ ಹಿನ್ನೆಲೆ ಮತದಾನಕ್ಕೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಮೂರು ವಿಶೇಷ ರೈಲುಗಳ ಸಂಚಾರ ನಡೆಸಲು ರೈಲ್ವೆ ಇಲಾಖೆ ತೀರ್ಮಾನಿಸಿದೆ.
ಬೆಂಗಳೂರಿನಿಂದ ಮುರುಡೇಶ್ವರ (ಕರಾವಳಿ), ಬೆಳಗಾವಿ (ಉತ್ತರ ಕರ್ನಾಟಕ), ಬೀದರ್ (ಕಲ್ಯಾಣ ಕರ್ನಾಟಕ) ಸೇರಿ ಒಟ್ಟು ಮೂರು ವಿಶೇಷ ರೈಲುಗಳು ಸಂಚರಿಸಲಿವೆ.
ಬೆಂಗಳೂರು- ಬೆಳಗಾವಿ- ಸರ್ ಎಂವಿ: ರೈಲು ಸಂಖ್ಯೆ 06585 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರಿನಿಂದ ಮೇ 9 ರಾತ್ರಿ 08:30 ಕ್ಕೆ ಹೊರಡಲಿದೆ. ಮರುದಿನ ಬೆಳಿಗ್ಗೆ 08:20 ಕ್ಕೆ ಬೆಳಗಾವಿ ತಲುಪುತ್ತದೆ.
ಯಶವಂತಪುರ- ಮುರ್ಡೇಶ್ವರ: ರೈಲು ಸಂಖ್ಯೆ 06587 ಯಶವಂತಪುರದಿಂದ ಮೇ 9 ರಂದು ರಾತ್ರಿ 11:55 ಕ್ಕೆ ಹೊರಡುತ್ತದೆ. ಮರುದಿನ ಮಧ್ಯಾಹ್ನ 12:55ಕ್ಕೆ ಮುರ್ಡೇಶ್ವರ ತಲುಪಲಿದೆ.
ಕೆಎಸ್ಆರ್ ಬೆಂಗಳೂರು -ಬೀದರ್: ರೈಲು ಸಂಖ್ಯೆ 06597 ಕೆಎಸ್ಆರ್ ಬೆಂಗಳೂರಿನಿಂದ ಮೇ 9 ರಂದು ಸಂಜೆ 5 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 7:20 ಗಂಟೆಗೆ ಬೀದರ್ ತಲುಪುತ್ತದೆ.