ಬೆಂಗಳೂರು : ವಿಶ್ವದ ಅತಿದೊಡ್ಡ ವೃತ್ತಿಪರ ನೆಟ್ವರ್ಕ್ ಆಗಿರುವ ಲಿಂಕ್ಡ್ಇನ್ ನ ಹೊಸ ಸಂಶೋಧನಾ ವರದಿ ಬಹಿರಂಗವಾಗಿದೆ. ಆ ವರದಿಯ ಪ್ರಕಾರ ಬೆಂಗಳೂರಿನ ವೃತ್ತಿಪರರು ವೃತ್ತಿ ಕ್ಷೇತ್ರ ಭಾರಿ ಬೇಗ ಬದಲಾಗುತ್ತಿರುವುದನ್ನು ಅರಿತುಕೊಂಡಿದ್ದಾರೆ ಮತ್ತು ಶೇ.87 ಜನರು ಹೆಚ್ಚಿನ ಮಾರ್ಗದರ್ಶನ ಮತ್ತು ನೆರವನ್ನು ಅಪೇಕ್ಷಿಸುತ್ತಿದ್ದಾರೆ.
ಉದ್ಯೋಗ ಕ್ಷೇತ್ರಗಳು ಪರಿವರ್ತನೆಗೊಳ್ಳುತ್ತಿರುವ ಈ ಸಮಯದಲ್ಲಿ ಎಐ ಅನ್ನು ದೈನಂದಿನ ಕಾರ್ಯಗಳಲ್ಲಿ (ಶೇ.40) ಬಳಸುವುದು ಭಾರತದ ವೃತ್ತಿಪರರ ಮುಂದೆ ಇರುವ ದೊಡ್ಡ ಅವಕಾಶವಾಗಿದೆ. ಬೆಂಗಳೂರಿನ ಶೇ.61 ವೃತ್ತಿಪರರು ತಮ್ಮ ವೃತ್ತಿಜೀವನದಲ್ಲಿ ಮುಂದೆ ಬರುವುದು ಎಐ ಬಳಕೆಯ ತಿಳುವಳಿಕೆಯನ್ನು ಅವಲಂಬಿಸಿರುತ್ತದೆ ಎಂದು ತಿಳಿದಿದ್ದಾರೆ. ಹಾಗಾಗಿ ನಾನ್ ಟೆಕ್ನಿಕಲ್ ವಿಭಾಗದ ವೃತ್ತಿಪರರು ಎಐ ಆಪ್ಟಿಟ್ಯೂಡ್ ನ ಮೇಲೆ ಗಮನ ಕೇಂದ್ರೀಕರಿಸಿದ ಲಿಂಕ್ಡ್ಇನ್ ಲರ್ನಿಂಗ್ ಕೋರ್ಸ್ ಗಳನ್ನು ಕಲಿಯುತ್ತಿದ್ದು, ಕಳೆದ ವರ್ಷದಲ್ಲಿ ಆ ಸಂಖ್ಯೆ ಶೇ.117ರಷ್ಟು ಹೆಚ್ಚಾಗಿದೆ.
ಲಿಂಕ್ಡ್ಇನ್ ಮಾಹಿತಿ ಪ್ರಕಾರ ಎರಡು ವರ್ಷಗಳಲ್ಲಿ ಪೋಸ್ಟ್ ಗಳಲ್ಲಿ ಫ್ಲೆಕ್ಸಿಬಲ್ ವರ್ಕ್* ಎಂದು ಉಲ್ಲೇಖಿಸುವವರ ಸಂಖ್ಯೆಯಲ್ಲಿ ಶೇ.123 ಹೆಚ್ಚಳ ಉಂಟಾಗಿದೆ. ಕಂಪನಿಗಳು ತಮ್ಮ ರಿಟರ್ನ್-ಟು-ಆಫೀಸ್ (ಆರ್ಟಿಓ) ಕಾರ್ಯತಂತ್ರ ಮಾಡಿರುವುದರಿಂದ ವೃತ್ತಿಪರರು ಆ ನಿಟ್ಟಿನಲ್ಲಿ ಯೋಚನೆ ಮಾಡಿ ಹೊಂದಿಕೊಂಡು ಕೆಲಸ ಮಾಡಲು ಸಿದ್ಧರಿರುವುದಾಗಿ ತೋರಿಸುತ್ತಿದ್ದಾರೆ.
ಅನುಭವ ಇದ್ದರಷ್ಟೇ ಸಾಕಾಗಲ್ಲ ಎಂದು ವೃತ್ತಿಪರರು ಅರಿತಿದ್ದಾರೆ
ನಗರದಲ್ಲಿನ ಶೇ.64 ವೃತ್ತಿಪರರು ನಿರಂತರವಾಗಿ ಕಲಿಕೆಯು ಅಗತ್ಯವನ್ನು ಒಪ್ಪಿಕೊಂಡಿದ್ದಾರೆ ಮತ್ತು ಶೇ.43 ಮಂದಿ ವೃತ್ತಿಜೀವನದ ಬೆಳವಣಿಗೆಗೆ ಉನ್ನತ ಕೌಶಲ್ಯವು ಅತ್ಯಗತ್ಯ ಎಂದು ನಂಬಿಕೊಂಡಿದ್ದಾರೆ. ಸಂಶೋಧನೆಯ ಪ್ರಕಾರ ಶೇ.62 ಜನರು ವೃತ್ತಿ ಕ್ಷೇತ್ರದ ಬದಲಾವಣೆಗೆ ತಕ್ಕಂತೆ ಸಿದ್ಧರಾಗಲು ಅಗತ್ಯವಿರುವ ಕೌಶಲ್ಯಗಳ ಬಗ್ಗೆ ಮಾರ್ಗದರ್ಶನ ಬಯಸುತ್ತಾರೆ. ಅನೇಕರು ಭವಿಷ್ಯಕ್ಕೆ ಸಿದ್ಧರಾಗಲು ತಾಂತ್ರಿಕ ಪ್ರಗತಿಗಳು (ಶೇ.45), ವಲಯ-ನಿರ್ದಿಷ್ಟ ಮಾರುಕಟ್ಟೆ ವಿಶ್ಲೇಷಣೆ (ಶೇ.38), ಸಾಮಾಜಿಕ ಟ್ರೆಂಡ್ ಗಳು (ಶೇ.38) ಇತ್ಯಾದಿ ವಿಚಾರಗಳನ್ನು ಕಲಿಯುತ್ತಿದ್ದಾರೆ.
ವೃತ್ತಿಪರರು ಹೆಚ್ಚಿನ ಜ್ಞಾನ ಹೊಂದಲು ವಿಡಿಯೋ ನೋಡುವುದು ಅತ್ಯಂತ ಜನಪ್ರಿಯ ವಿಧಾನ
ಬೆಂಗಳೂರಿನ ಶೇ.55 ವೃತ್ತಿಪರರು ಶಾರ್ಟ್-ಫಾರ್ಮ್ ವೀಡಿಯೋಗಳನ್ನು ಅಂದರೆ ಕಡಿಮೆ ಅವಧಿಯ ವಿಡಿಯೋಗಳನ್ನು ಹೆಚ್ಚು ನೋಡುತ್ತಾರೆ. ಶೇ.51 ಜನರು ನಿರ್ದಿಷ್ಟ ಕೌಶಲ್ಯಗಳ ಮಾಹಿತಿಗಳುಳ್ಳ ದೀರ್ಘ ಅವಧಿಯ ವೀಡಿಯೋ ಕೋರ್ಸ್ಗಳು ಹೆಚ್ಚು ಸಹಾಯ ಮಾಡುತ್ತವೆ ಎಂದು ತಿಳಿದುಕೊಂಡಿದ್ದಾರೆ. ವೃತ್ತಿಪರರು ವಿಶೇಷವಾಗಿ ಜೀವನಕತೆಗಳು ಮತ್ತು ಕಲಿಕೆಯ ಪ್ರಸಂಗಗಳನ್ನು ಹೊಂದಿರುವ ವೀಡಿಯೋಗಳನ್ನು ಮೆಚ್ಚಿಕೊಳ್ಳುತ್ತಾರೆ (ಶೇ.53), ಮತ್ತು ಸ್ಕ್ರಿಪ್ಟ್ ಇರದ ಪಾಡ್ಕ್ಯಾಸ್ಟ್ ಮಾತುಕತೆಗಳು (ಶೇ.46) ಕೂಡ ಶ್ಲಾಘನೆಗೆ ಒಳಪಟ್ಟಿವೆ. ಈ ವಿಡಿಯೋಗಳು ಅವರಿಗೆ ವಿವೇಕಯುಕ್ತ ವೃತ್ತಿಪರ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ವೃತ್ತಿ ಭವಿಷ್ಯವನ್ನು ತಿಳಿದುಕೊಳ್ಳಳು ಸಹಾಯ ಮಾಡುತ್ತವೆ.
ಮುಂಚೂಣಿಯಲ್ಲಿರುವುದು ಹೇಗೆ ಎಂಬುದರ ಹುಡುಕಾಟ
ವೃತ್ತಿಪರರು ವೃತ್ತಿಕ್ಷೇತ್ರದಲ್ಲಿ ಉಂಟಾಗುತ್ತಿರುವ ತ್ವರಿತ ಬದಲಾವಣೆಗಳಿಗೆ ಹೊಂದಿಕೊಳ್ಳುವ ಸಲುವಾಗಿ ನೆರವು ಪಡೆಯಲು ಜ್ಞಾನ ಮತ್ತು ಕೌಶಲ್ಯಗಳನ್ನು ಕಲಿಯಲು ಲಿಂಕ್ಡ್ಇನ್ ಬಳಸುತ್ತಿದ್ದಾರೆ. ಪರಿಣಿತರ ಮಾಹಿತಿ, ಎಐ-ಚಾಲಿತ ತರಬೇತಿ ಮತ್ತು ಪ್ರಸ್ತುತ ಸುದ್ದಿಗಳನ್ನು ಒದಗಿಸುವ ಲಿಂಕ್ಡ್ಇನ್ ವೃತ್ತಿಪರರು ಮುಂಚೂಣಿಯಲ್ಲಿ ಉಳಿಯಲು ಅಗತ್ಯವಿರುವ ಟೂಲ್ ಗಳನ್ನು ಒದಗಿಸುತ್ತದೆ.
ಲಿಂಕ್ಡ್ಇನ್ ಇಂಡಿಯಾದ ಕೆರಿಯರ್ ಎಕ್ಸ್ ಪರ್ಟ್ ಮತ್ತು ಸಂಪಾದಕೀಯ ಮುಖ್ಯಸ್ಥರಾದ ನಿರಾಜಿತಾ ಬ್ಯಾನರ್ಜಿ ಅವರು, “ಎಐ ಮತ್ತು ಹೈಬ್ರಿಡ್ ವರ್ಕ್ ಮಾಡೆಲ್ ಗಳು ನಾವು ಕೆಲಸ ಮಾಡುವ ರೀತಿಯನ್ನು ಬದಲಿಸುತ್ತಿವೆ. ಹಾಗಾಗಿ ಹೊಸ ಉದ್ಯಮ ಟ್ರೆಂಡ್ ಗಳ ಕುರಿತು ಮಾಹಿತಿ ಹೊಂದುವುದು ಈಗ ಬಹಳ ಮುಖ್ಯವಾಗಿದೆ. ಇಂದು ಬೆಂಗಳೂರಿನ 10 ರಲ್ಲಿ 8 (ಶೇ.79) ವೃತ್ತಿಪರರು ವೃತ್ತಿ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಈಗಾಗಲೇ ಉದ್ಯಮದ ಪರಿಣತರು ಮತ್ತು ಗೆಳೆಯರು, ಸಹೋದ್ಯೋಗಿಗಳ ಬಳಿ ಸಲಹೆ, ಮಾರ್ಗದರ್ಶನ ಕೇಳುತ್ತಿದ್ದಾರೆ. ಇಂಥಾ ಮನಸ್ಥಿತಿಯನ್ನು ಅಳವಡಿಸಿಕೊಳ್ಳುವುದು, ಕುತೂಹಲ ಇಟ್ಟುಕೊಳ್ಳುವುದು ಮತ್ತು ನಿರಂತರವಾಗಿ ಹೊಸ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳುವುದರಿಂದ ವೃತ್ತಿಪರರು ಯಶಸ್ಸು ಪಡೆಯಬಹುದಾಗಿದೆ ಮತ್ತು ಬದಲಾವಣೆಯ ಕಾಲದಲ್ಲಿ ಮುಂಚೂಣಿಯಲ್ಲಿ ಇರಬಹುದಾಗಿದೆ” ಎಂದು ಹೇಳಿದರು.
ಬದಲಾವಣೆಗೆ ಹೊಂದಿಕೊಳ್ಳಲು ಮತ್ತು ಮುಂಚೂಣಿಯಲ್ಲಿ ಇರಲು ಲಿಂಕ್ಡ್ಇನ್ ಕೆರಿಯರ್ ಎಕ್ಸ್ ಪರ್ಟ್ ಗಳ ಸಲಹೆಗಳು:
ಬದಲಾವಣೆ ಸಂದರ್ಭದಲ್ಲಿ ಮುಂಚೂಣಿಯಲ್ಲಿರಿ: ಎಐ ಮತ್ತು ಹೈಬ್ರಿಡ್ ವರ್ಕ್ ಸಂಗತಿಗಳು ನಿರಂತರವಾಗಿ ಬದಲಾಗುತ್ತಿವೆ. ಲಿಂಕ್ಡ್ಇನ್ ಟಾಪ್ ವಾಯ್ಸ್ ಗಳಂತಹ ವಿಶ್ವಾಸಾರ್ಹ ತಜ್ಞರು ನೀಡುವ ಹೊಸ ಉದ್ಯಮ ಸುದ್ದಿ ಮತ್ತು ಒಳನೋಟಗಳನ್ನು ಪಡೆದು ಅಪ್ ಟು ಡೇಟ್ ಆಗಿ ಉಳಿಯುವ ಮೂಲಕ ಆ ಎಲ್ಲಾ ಬೆಳವಣಿಗೆಗಳು ನಿಮ್ಮ ದೈನಂದಿನ ಕೆಲಸದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಮತ್ತು ಭವಿಷ್ಯದಲ್ಲಿ ಅವು ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ನೀವು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು.
ಬೆಳವಣಿಗೆಯ ಮನಸ್ಥಿತಿಯನ್ನು ಅಳವಡಿಸಿಕೊಳ್ಳಿ: ಬದಲಾವಣೆ ಸುಲಭವಲ್ಲ ಮತ್ತು ಅದಕ್ಕಾಗಿ ನರ್ವಸ್ ಆಗುವುದು ತಪ್ಪೂ ಅಲ್ಲ. ಆದರೆ ಮುಕ್ತ ಮನಸ್ಸಿನಿಂದ ಬದಲಾವಣೆಯ ಹಾದಿಯಲ್ಲಿ ನಡೆಯಲು ಯತ್ನಿಸಬೇಕು. ಕಲಿಯುವ ಇಚ್ಛೆ ಇದ್ದರೆ ಬದಲಾವಣೆಗೆ ನೀವು ಸುಲಭವಾಗಿ ಹೊಂದಿಕೊಳ್ಳುವ ವಿಷಯಗಳ ಕುರಿತು ಈಗಲೇ ಜ್ಞಾನವನ್ನು ಬೆಳೆಸಿಕೊಳ್ಳಬಹುದು. ಉದಾಹರಣೆಗೆ ಎಐ ಅನ್ನು ತೆಗೆದುಕೊಳ್ಳಿ. ಸಭೆಯಲ್ಲಿ ಟಿಪ್ಪಣಿಗಳನ್ನು ಬರೆಯಲು ಪ್ರಾಂಪ್ಟ್ ಬರೆಯುವಿಕೆಯನ್ನು ಅಭ್ಯಾಸ ಮಾಡುವುದು ಅಥವಾ ಎಐ ಅನ್ನು ಬಳಸುವುದರಿಂದ ಭವಿಷ್ಯದಲ್ಲಿ ಈ ಟೂಲ್ ಗಳನ್ನು ಬಳಸಲು ಸುಲಭವಾಗುತ್ತದೆ. ಲಿಂಕ್ಡ್ಇನ್ 2024ರ ನವೆಂಬರ್ 25ರವರೆಗೆ ಬಿಲ್ಡಿಂಗ್ ಆನ್ ಅಡಾಪ್ಟೇಬಿಲಿಟಿ ಮೈಂಡ್ ಸೆಟ್ ಇನ್ ದಿ ಏಜ್ ಆಫ್ ಎಐ ಎಂಬ ಕಲಿಕಾ ಕೋರ್ಸ್ ಅನ್ನು ಉಚಿತವಾಗಿ ಒದಗಿಸುತ್ತಿದೆ ಮತ್ತು 2025ರ ಅಂತ್ಯದವರೆಗೆ ಜೆನ್ ಎಐ ಕುರಿತ ಎರಡು ಉಚಿತ ವೃತ್ತಿಪರ ಸರ್ಟಿಫಿಕೇಷನ್ ಕೋರ್ಸ್ ಗಳನ್ನು ಸಹ ಒದಗಿಸುತ್ತಿದೆ.
ಕಲಿಕೆಯ ಸುಲಭ ಮಾರ್ಗ ಅಳವಡಿಸಿಕೊಳ್ಳಿ: ಹೊಸ ಕೌಶಲ್ಯ ಮತ್ತು ಜ್ಞಾನವನ್ನು ಪಡೆಯಲು ಸುಲಭವಾದ ಮಾರ್ಗಗಳನ್ನು ಕಂಡುಕೊಳ್ಳಿ. ಹಾಗಾಗಿ ನಿರಂತರವಾಗಿ ಕಲಿಯಬಹುದು ಮತ್ತು ಆ ವಿಧಾನ ಸೂಕ್ತ ಅನ್ನಿಸಬಹುದು. ಮಾಹಿತಿಗಾಗಿ ವೃತ್ತಿಪರರು ಕಿರು ರೂಪದಲ್ಲಿರುವ ವೀಡಿಯೊವನ್ನು ಹೆಚ್ಚು ಸಹಾಯಕ ಅಂದುಕೊಳ್ಳುತ್ತಾರೆ ಮತ್ತು ಅವುಗಳನ್ನು ನೋಡುತ್ತಾರೆ. ಈ ಟ್ರೆಂಡ್ ಲಿಂಕ್ಡ್ಇನ್ನಲ್ಲಿ ವೇಗವಾಗಿ ಬೆಳೆಯುತ್ತಿದ್ದು, ವರ್ಷದಿಂದ ವರ್ಷಕ್ಕೆ ವೀಡಿಯೊ ಅಪ್ಲೋಡ್ಗಳು ಶೇ.34ರಷ್ಟು ಹೆಚ್ಚಾಗುತ್ತಿವೆ.