ಮಣಿಪಾಲ : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ [ಮಾಹೆ] ನ ಡಿಪಾರ್ಟ್ ಮೆಂಟ್ ಆಫ್ ಸ್ಟೂಡೆಂಟ್ ಆಫೇರ್ಸ್ ವತಿಯಿಂದ ಜೆಂಡರ್ ಚಾಂಪಿಯನ್ ಜಾಗೃತಿ ಕಾರ್ಯಾಗಾರ 3.0 ಅನ್ನು ಕೆಎಂಸಿಯ ಇಂಟರಾಕ್ಟ್ ಹಾಲ್ನಲ್ಲಿ ಆಯೋಜಿಸಲಾಗಿತ್ತು.
ಕಾರ್ಯಾಗಾರವು ವಿವಿಧ ಮಾಹೆ ಸಂಸ್ಥೆಗಳ ವಿದ್ಯಾರ್ಥಿ ಜೆಂಡರ್ ಚಾಂಪಿಯನ್ಗಳು ಮತ್ತು ನೋಡಲ್ ಅಧ್ಯಾಪಕರನ್ನು ಒಂದೆಡೆ ಸೇರಿಸಲು ಅವಕಾಶ ಕಲ್ಪಿಸಿತು. ಅಲ್ಲದೆ ಲಿಂಗ ಸಂವೇದನೆಗೆ ಸಂಬಂಧಿಸಿ ಕ್ಯಾಂಪಸ್ನಲ್ಲಿ ಹೊಸ ಚಿಂತನೆಗಳನ್ನು ಬಿತ್ತುವಲ್ಲಿ ಮತ್ತು ಸಮನ್ವಯತೆಯನ್ನು ಸಾಧಿಸುವಲ್ಲಿ ಈ ಕಾರ್ಯಾಗಾರ ಯಶಸ್ವಿಯಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಮಾಹೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಒಒ) ಡಾ.ರವಿರಾಜ ಎನ್.ಎಸ್. ತಮ್ಮ ಭಾಷಣದಲ್ಲಿ, ವಿಶ್ವವಿದ್ಯಾನಿಲಯ ಕ್ಯಾಂಪಸ್ಗಳಲ್ಲಿ ಸಮಾನತೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವಲ್ಲಿ ಜೆಂಡರ್ ಚಾಂಪಿಯನ್ಗಳು ಪ್ರಮುಖ ಪಾತ್ರವನ್ನು ವಹಿಸುವರು ಎಂದು ಹೇಳಿದರು. ಶೈಕ್ಷಣಿಕ ಪರಿಸರದಲ್ಲಿ ಲಿಂಗ ಸಂವೇದನೆಯು ಬೇರೂರಿದೆ ಎಂದು ಖಚಿತಪಡಿಸಿಕೊಳ್ಳಲು ನಿರಂತರ ಪ್ರಯತ್ನಗಳು ಅಗತ್ಯ ಎಂದರು.
ಮಾಹೆಯ ವಿತ್ತ ವಿಭಾಗದ ನಿರ್ದೇಶಕಿ ಸರಸ್ವತಿ ಗೌರವ ಅತಿಥಿಯಾಗಿ ಭಾಗವಹಿಸಿ, ಶೈಕ್ಷಣಿಕ ಸಂಸ್ಥೆಗಳಲ್ಲಿ ಲಿಂಗ ಸಮಾನತೆಯನ್ನು ಬೆಳೆಸುವ ಪ್ರಾಮುಖ್ಯತೆಯನ್ನು ತಿಳಿಸಿಕೊಟ್ಟರು. ಇದು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳ ಸಮಗ್ರ ಅಭಿವೃದ್ಧಿಗೆ ಪ್ರಮುಖವಾಗಿದೆ ಎಂದು ಹೇಳಿದರು.
ಮಾಹೆಯಯ ವಿದ್ಯಾರ್ಥಿ ವ್ಯವಹಾರಗಳ ವಿಭಾಗದ [ಡಿಪಾರ್ಟ್ ಮೆಂಟ್ ಆಫ್ ಸ್ಟೂಡೆಂಟ್ ಆಫೇರ್ಸ್] ನಿರ್ದೇಶಕಿ ಡಾ. ಗೀತಾ ಮಯ್ಯ ಅವರು ಸ್ವಾಗತಿಸಿದರು. ಹಿರಿಯ ಸಲಹೆಗಾರರಾದ ಡಾ. ರಾಯನ್ ಮಥಿಯಾಸ್ ಅವರು ಕಾರ್ಯಕ್ರಮ ನಿರ್ವಹಿಸಿದರು. ಉಪನಿರ್ದೇಶಕ (ಆರೋಗ್ಯ ವಿಜ್ಞಾನ) ರಾದ ಡಾ.ಅರವಿಂದ್ ಅವರ ಪಾಂಡೆ ಧನ್ಯವಾದಗಳೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು.
ಕಾರ್ಯಕ್ರಮದಲ್ಲಿ ಉಪನಿರ್ದೇಶಕರು (ತಾಂತ್ರಿಕ) ಪ್ರೊ. ರೋಶನ್ ಡೇವಿಡ್ ಮತ್ತು ಡಾ. ರಶ್ಮಿ ಯೋಗೇಶ್ ಪೈ ಹಾಗೂ ಮಂಗಳೂರು ಕ್ಯಾಂಪಸ್ನ ಉಪನಿರ್ದೇಶಕ ಡಾ. ನಿತಿನ್ ಅವರು ಭಾಗವಹಿಸಿದರು