ಬೆಂಗಳೂರು : ಭಾರತದ ಪ್ರಮುಖ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್ಸಂಗ್ ಇಂದು ಎಐ ಫೀಚರ್ ಗಳನ್ನು ಹೊಂದಿರುವ, ಟ್ಯಾಬ್ ವಿಭಾಗದಲ್ಲಿ ಸಂಚಲನ ಉಂಟು ಮಾಡಬಹುದಾದ ಗ್ಯಾಲಕ್ಸಿ ಟ್ಯಾಬ್ ಎಸ್10+ ಮತ್ತು ಟ್ಯಾಬ್ ಎಸ್10 ಅಲ್ಟ್ರಾ ಅನ್ನು ಬಿಡುಗಡೆ ಮಾಡಿದೆ.
ವಿಶ್ವದ ಮೊದಲ ಎಐ ಚಾಲಿತ ಟ್ಯಾಬ್ಲೆಟ್ ಗಳಾದ ಗ್ಯಾಲಕ್ಸಿ ಟ್ಯಾಬ್ ಎಸ್10+ ಮತ್ತು ಎಸ್10 ಅಲ್ಟ್ರಾ ಅದ್ಭುತ ಹೊಸತನಗಳನ್ನು ಒದಗಿಸುತ್ತದೆ. ಅತ್ಯುತ್ತಮ ಕಾರ್ಯಕ್ಷಮತೆ, ಉತ್ಕೃಷ್ಟ ಕ್ರೀಯಾಶೀಲ ಟೂಲ್ ಗಳು ಮತ್ತು ಉತ್ಪಾದಕತೆ ಮತ್ತು ಸೃಜನಶೀಲತೆಯನ್ನು ಹೆಚ್ಚಿಸಲೆಂದೇ ಒದಗಿಸಲಾಗಿರುವ ಅತ್ಯಾಧುನಿಕ ಗ್ಯಾಲಕ್ಸಿ ಎಐ ಫೀಚರ್ ಗಳು ಸೇರಿದಂತೆ ಹಲವಾರು ಹೊಸ ಆವಿಷ್ಕಾರಗಳನ್ನು ಪರಿಚಯಿಸುತ್ತಿದೆ. ನೀವು ಉತ್ಪಾದಕತೆಯನ್ನು ಹೆಚ್ಚಿಸಲು ಬಯಸುವ ವೃತ್ತಿಪರರಾಗಿದ್ದರೆ ಅಥವಾ ನಿಮ್ಮ ಕೆಲಸ ಮತ್ತಷ್ಟು ಆಕರ್ಷಕವಾಗಿ ಮೂಡಿ ಬರಬೇಕೆಂದು ಬಯಸುವ ಕಂಟೆಂಟ್ ಕ್ರಿಯೇಟರ್ ಆಗಿದ್ದರೆ ನಿಮ್ಮ ನಿರೀಕ್ಷೆ ಮೀರಿದ ಕೆಲಸಗಳನ್ನು ಮಾಡುವಂತೆ ಗ್ಯಾಲಕ್ಸಿ ಟ್ಯಾಬ್ ಎಸ್10 ಅಲ್ಟ್ರಾ ಮತ್ತು ಎಸ್10+ ಅನ್ನು ರಚಿಸಲಾಗಿದೆ.
ಲಕ್ಸಿ ಟ್ಯಾಬ್ ಎಸ್10+ ಮತ್ತು ಎಸ್10 ಅಲ್ಟ್ರಾ ಎರಡೂ ಬೆರಗುಗೊಳಿಸುವ ಡೈನಾಮಿಕ್ ಅಮೋಲ್ಡ್ 2ಎಕ್ಸ್ ಡಿಸ್ ಪ್ಲೇಗಳನ್ನು ಹೊಂದಿದೆ. ಅತ್ಯುತ್ತಮ ದೃಶ್ಯಗಳನ್ನು ನೋಡಲು ಮತ್ತು ತೀವ್ರವಾದ ಮನರಂಜನಾ ಅನುಭವ ಪಡೆಯಲು ಆಂಟಿ ರಿಫ್ಲೆಕ್ಟಿವ್ ಕೋಟಿಂಗ್ ಅನ್ನು ಹೊಂದಿದೆ. ಗ್ಯಾಲಕ್ಸಿ ಟ್ಯಾಬ್ ಎಸ್10 ಅಲ್ಟ್ರಾ 14.6-ಇಂಚಿನ ಡೈನಾಮಿಕ್ ಅಮೋಲ್ಡ್ 2ಎಕ್ಸ್ ಡಿಸ್ ಪ್ಲೇ ಮೂಲಕ ಆಕರ್ಷಕವಾಗಿ ಕಾಣುತ್ತದೆ. ಇದು ಕೂಡ ಅದ್ಭುತವಾದ ದೃಶ್ಯ ಒದಗಿಸುವ ಮತ್ತು ತೀವ್ರ ವೀಕ್ಷಣಾ ಅನುಭವ ಒದಗಿಸುವ ಆಂಟಿ ರಿಫ್ಲೆಕ್ಟಿವ್ ಕೋಟಿಂಗ್ ಅನ್ನು ಹೊಂದಿದೆ. ಇದರ ಡ್ಯುಯಲ್ 12-ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾಗಳು ಮತ್ತು ಡ್ಯುಯಲ್ ರೇರ್ ಕ್ಯಾಮೆರಾಗಳು (13 ಎಂಪಿ ಮುಖ್ಯ ಮತ್ತು 8 ಎಂಪಿ ಅಲ್ಟ್ರಾವೈಡ್) ವೃತ್ತಿಪರ ಛಾಯಾಗ್ರಹಣ ನಡೆಸಲು ಮತ್ತು ವೀಡಿಯೋ ಕರೆಗಳನ್ನು ಮಾಡಲು ಪರಿಪೂರ್ಣವಾಗಿದೆ.
ಗ್ಯಾಲಕ್ಸಿ ಟ್ಯಾಬ್ ಎಸ್10 ಅಲ್ಟ್ರಾ ಮತ್ತು ಗ್ಯಾಲಕ್ಸಿ ಟ್ಯಾಬ್ ಎಸ್10+ ಶಕ್ತಿಯುತ, ಅತ್ಯುತ್ತಮ ಕಾರ್ಯಕ್ಷಮತೆಯನ್ನು ಒದಗಿಸಲು ಎಐ ಪ್ರಕ್ರಿಯೆಯನ್ನು ಬಳಸಿಕೊಂಡಿವೆ. ಗ್ಯಾಲಕ್ಸಿ ಟ್ಯಾಬ್ ಎಸ್10 ಅಲ್ಟ್ರಾ ಉತ್ಪನ್ನವು ಅದರ ಹಿಂದಿನ ಗ್ಯಾಲಕ್ಸಿ ಟ್ಯಾಬ್ ಎಸ್9 ಅಲ್ಟ್ರಾಗಿಂತ ಶೇ.18ರಷ್ಟು ಹೆಚ್ಚು ಸಿಪಿಯು ಸಾಮರ್ಥ್ಯ, ಶೇ.28ರಷ್ಟು ಹೆಚ್ಚು ಜಿಪಿಯು ಸಾಮರ್ಥ್ಯ ಮತ್ತು ಶೇ.14ರಷ್ಟು ಹೆಚ್ಚು ಎನ್ ಪಿ ಯು ಸಾಮರ್ಥ್ಯ ಹೊಂದಿದೆ. ವಿಸ್ತೃತ ಬ್ಯಾಟರಿ ಬಾಳಿಕೆ ಮತ್ತು ಸೂಪರ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯದ ಮೂಲಕ ಗ್ಯಾಲಕ್ಸಿ ಟ್ಯಾಬ್ ಎಸ್10 ಸರಣಿಯು ದೀರ್ಘಾವಧಿಯ ಬಳಕೆಗಾಗಿ ರೂಪುಗೊಂಡಿದೆ.
ಕೀಬೋರ್ಡ್ ನಲ್ಲಿರುವ ಎಐ ಕೀಯು ಸುಲಭವಾಗಿ ಪಠ್ಯ ನಿರ್ವಹಣೆ ಮಾಡುವ ಟ್ರಾನ್ಸ್ ಸ್ಕ್ರಿಪ್ಟ್ ಅಸಿಸ್ಟ್ ಮತ್ತು ಸಂಕೀರ್ಣ ಗಣಿತದ ಸಮಸ್ಯೆಗಳನ್ನು ಸೆಕೆಂಡುಗಳಲ್ಲಿ ಪರಿಹರಿಸುವ ನೋಟ್ ಅಸಿಸ್ಟ್ ನಂತಹ ಪ್ರಬಲ ಟೂಲ್ ಗಳನ್ನು ಬಳಸಲು ಬಳಕೆದಾರರಿಗೆ ಅನುವು ಮಾಡಿ ಕೊಡುತ್ತದೆ. ಬಹುಕಾರ್ಯಕ್ಕೆ ಬಳಕೆಯಾಗುವ, ಸೃಜನಶೀಲ ಕಾರ್ಯಕ್ಕೆ ಬಳಸಬಹುದಾದ ಇತರ ಅತ್ಯಾಧುನಿಕ ಫೀಚರ್ ಗಳಾದ ಸ್ಕೆಚ್ ಟು ಇಮೇಜ್ ಮತ್ತು ಜೆಮಿನಿ ಕೂಡ ಇದರಲ್ಲಿ ಲಭ್ಯವಿದೆ. ಎರಡೂ ಟ್ಯಾಬ್ಲೆಟ್ ಗಳು ಐಪಿ68 ರೇಟಿಂಗ್ ಹೊಂದಿದ್ದು, ಎಸ್ ಪೆನ್ ಜೊತೆಗೆ ಲಭ್ಯವಾಗುತ್ತದೆ. ಕಂಟೆಂಟ್ ಕ್ರಿಯೇಟರ್ ಗಳು ಮತ್ತು ವೃತ್ತಿಪರರ ಕಾರ್ಯ ನಿರ್ವಹಣೆ ಹೆಚ್ಚಿಸಲು ಉತ್ತಮ ಕೊಡುಗೆ ನೀಡುತ್ತದೆ.
ಗ್ಯಾಲಕ್ಸಿ ಟ್ಯಾಬ್ ಎಸ್10 ಸರಣಿಯು ಹೋಮ್ ಎಐ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ, 3ಡಿ ಮ್ಯಾಪ್ ವ್ಯೂ ಸ್ಮಾರ್ಟ್ ಥಿಂಗ್ಸ್ ಪರಿಸರ ವ್ಯವಸ್ಥೆಯ ಸಾಧನಗಳ ನಿರ್ವಹಣೆಯನ್ನು ಸುಗಮಗೊಳಿಸಲು ಮನೆ ಮತ್ತು ಎಲ್ಲಾ ಸಂಪರ್ಕಿತ ಸಾಧನಗಳ ದೃಶ್ಯಗಳನ್ನು ಅವಲೋಕಿಸುವ ಅವಕಾಶ ಒದಗಿಸುತ್ತದೆ. ಅತ್ಯುತ್ಕೃಷ್ಟವಾದ ಸ್ಯಾಮ್ಸಂಗ್ ನಾಕ್ಸ್ ಭದ್ರತೆಯು ಬಳಕೆದಾರರಿಗೆ ಮಾಹಿತಿ ಗೌಪ್ಯತೆ ಮತ್ತು ಕಂಟ್ರೋಲ್ ಮಾಡಬಹುದು ಭರವಸೆ ಒದಗಿಸುತ್ತದೆ. ಜೊತೆಗೆ ಇದರಲ್ಲಿ ಬಳಸಿರುವ ಸಾಮಾಗ್ರಿಗಳು ಸುಸ್ಥಿರ ಭವಿಷ್ಯದ ಕಡೆಗೆ ಸ್ಯಾಮ್ ಸಂಗ್ ಹೊಂದಿರುವ ಬದ್ಧತೆಗೆ ಪೂರಕವಾಗಿವೆ.
ಬೃಹತ್ ಗಾತ್ರದ 11,200 ಎಂಎಎಚ್ ಬ್ಯಾಟರಿ, 16ಜಿಬಿ ರಾಮ್ ಮತ್ತು 1 ಟಿ ಸ್ಟೋರೇಜ್ ಹೊಂದಿರುವ ಗ್ಯಾಲಕ್ಸಿ ಟ್ಯಾಬ್ ಎಸ್10 ಅಲ್ಟ್ರಾ ಅತ್ಯುತ್ತಮವಾಗಿ ಕೆಲಸ ಮಾಡಲು ಮತ್ತು ಗೇಮಿಂಗ್ ಅದ್ಭುತ ಒಡನಾಡಿಯಾಗಿದ್ದು, ಈ ಹಿಂದಿನ ಟ್ಯಾಬ್ ಗಳಿಗಿಂತ ಹೈ ಎಂಡ್ ಸ್ಪೆಸಿಫಿಕೇಷನ್ ಗಳನ್ನು ಒದಗಿಸುತ್ತದೆ.
ಗ್ಯಾಲಕ್ಸಿ ಟ್ಯಾಬ್ ಎಸ್10+ ಹೆಚ್ಚು ಕಾಂಪ್ಯಾಕ್ಟ್ ಆದ 12.3-ಇಂಚಿನ ಡೈನಾಮಿಕ್ ಅಮೋಲ್ಡ್ 2ಎಕ್ಸ್ ಡಿಸ್ಪ್ಲೇ, 12 ಎಂಪಿ ಪ್ಟರ್ ಕ್ಯಾಮರಾ ಮತ್ತು ಅತ್ಯಾಧುನಿಕ ರೇರ್ ಕ್ಯಾಮರಾ ಸೆಟಪ್ ಅನ್ನು ಹೊಂದಿದೆದೆ. 12ಜಿಬಿ ವರೆಗಿನ ರಾಮ್ ಮತ್ತು 512 ಜಿಬಿ ಸ್ಟೋರೇಜ್ ಹೊಂದಿರುವ ಈ ಟ್ಯಾಬ್ಲೆಟ್ ಅನ್ನು ಪೋರ್ಟೆಬಲ್ ಸಾಧನಗಳಲ್ಲಿ ಗರಿಷ್ಠ ಕಾರ್ಯಕ್ಷಮತೆಯನ್ನು ಬಯಸುವ ಬಳಕೆದಾರರಿಗಾಗಿ ವಿನ್ಯಾಸಗೊಳಿಸಲಾಗಿದೆ. ಇಡೀ ದಿನ ಕೆಲಸಗಳಲ್ಲಿ ಬಳಕೆಯಾಗುವಂತೆ ಮಾಡಲು 10,090 ಎಂಎಎಚ್ ಬ್ಯಾಟರಿ ಹೊಂದಿದೆ. ಅತ್ಯಾಧುನಿಕ ಆಂಟಿ ರಿಫ್ಲೆಕ್ಟಿವ್ ತಂತ್ರಜ್ಞಾನ ಹೊಂದಿರುವುದರಿಂದ ಅದು ಎಲ್ಲಾ ರೀತಿಯ ಪರಿಸರದಲ್ಲಿಯೂ ಗ್ಲೇರ್ ಅನ್ನು ಕಡಿಮೆ ಮಾಡುವ ಮೂಲಕ ಮತ್ತು ರಿಫ್ಲೆಕ್ಷನ್ ಅನ್ನು ಕಡಿಮೆ ಮಾಡುವ ಮೂಲಕ ಡಿಸ್ ಪ್ಲೇಯನ್ನು ಯಾವ ಆಂಗಲ್ ನಿಂದ ನೋಡಿದರೂ ಪ್ರತಿ ಅಂಶ ಕೂಡ ಸೂಕ್ಷ್ಮವಾಗಿ ಕಾಣಿಸುತ್ತದೆ. ಸರಣಿಯು ಎಐ ಚಾಲಿತ ಡೈಲಾಗ್ ಬೂಸ್ಟ್ ನಿಂದ ವರ್ಧಿಸಲ್ಪಟ್ಟ ಕ್ವಾಡ್-ಸ್ಪೀಕರ್ ಸಿಸ್ಟಮ್ ಅನ್ನು ಸಹ ಹೊಂದಿದ್ದು, ಇದು ಅಸಾಧಾರಣವಾದ ಸ್ಪಷ್ಟವಾದ ಆಡಿಯೋ ಒದಗಿಸಲು ಹಿನ್ನೆಲೆ ಶಬ್ದಗಳನ್ನು ಹಿನ್ನೆಲೆಗೆ ತಳ್ಳಲು ಧ್ವನಿ ಸ್ಪಷ್ಟತೆ ಹೆಚ್ಚು ಮಾಡುತ್ತದೆ.
ಗ್ಯಾಲಕ್ಸಿ ಟ್ಯಾಬ್ ಎಸ್10 ಸರಣಿಯು ಅತ್ಯುತ್ತಮ ಮತ್ತು ಅದ್ಭುತ ಉತ್ಪಾದಕ ಅನುಭವವನ್ನು ನೀಡುತ್ತದೆ. ಇದು ನಿಮ್ಮ ಸೃಜನಶೀಲತೆಯನ್ನು ತೋರಿಸಲು ಪರಿಪೂರ್ಣ ವೇದಿಕೆಯಾಗಿದೆ. ನೋಟ್ ಅಸಿಸ್ಟ್ ಮತ್ತು ಎಸ್ ಪೆನ್ ಮೂಲಕ ದೊಡ್ಡ ಡಿಸ್ ಪ್ಲೇಯಲ್ಲಿ ಟಿಪ್ಪಣಿಗಳನ್ನು ಸುಲಭವಾಗಿ ಬರೆಯಬಹುದಾಗಿದೆ. ಎಐ ಚಾಲಿತ ಸ್ವಯಂಚಾಲಿತ ಟ್ರಾನ್ಸ್ ಕ್ರಿಪ್ಷನ್ ಮತ್ತು ಸಮ್ಮರೀಸ್ ಮೂಲಕ ಶಾಲಾ ಕೆಲಸ, ಟಿಪ್ಪಣಿ ಬರೆಯುವುದು ಮತ್ತು ಬರವಣಿಗೆ ಕಾರ್ಯಗಳು ಹೆಚ್ಚು ಪರಿಣಾಮಕಾರಿಯಾಗಿ ಮಾಡಬಹುದು.
ಗ್ಯಾಲಕ್ಸಿ ಟ್ಯಾಬ್ ಎಸ್10ಸರಣಿಯು ಪಿಡಿಎಫ್ ಓವರ್ಲೇ ಟ್ರಾನ್ಸ್ ಲೇಷನ್ ಸೌಲಭ್ಯವನ್ನು ಸಹ ಹೊಂದಿದ್ದು, ಆನ್-ಸ್ಕ್ರೀನ್ ಓವರ್ಲೇ ಮೂಲಕ ಪಿಡಿಎಫ್ ಗಳ ಸುಲಭ ಅನುವಾದವನ್ನು ಮಾಡಬಹುದು. ಹ್ಯಾಂಡ್ ರೈಟಿಂಗ್ ಹೆಲ್ಪ್ ಫೀಚರ್ ಗೊಂದಲಮಯ ಟಿಪ್ಪಣಿಗಳನ್ನು ಸುಲಭವಾಗಿ ಕಾಣುವಂತೆ ಮಾಡುತ್ತದೆ. ಹೆಚ್ಚುವರಿಯಾಗಿ, ಗ್ಯಾಲಕ್ಸಿ ಎಐನ ಸ್ಕೆಚ್ ಟು ಇಮೇಜ್ ಫೀಚರ್ ಗ್ಯಾಲಕ್ಸಿ ಟ್ಯಾಬ್ ಎಸ್10 ಅಲ್ಟ್ರಾವನ್ನು ಕಲ್ಪನೆಗಳನ್ನು ವಾಸ್ತವಕ್ಕೆ ಬದಲಿಸಲು ಆದರ್ಶ ಸಾಧನವಾಗಿ ಮಾಡಿದೆ. ಜೊತೆಗೆ ಇದು ಮಾನಸಿಕ ಒತ್ತಡಗಳನ್ನು ನಿವಾರಿಸಿಕೊಳ್ಳಲು ನಿಮಗೆ ಸಹಾಯ ಮಾಡಲು ಸೃಜನಶೀಲ ಸಹಾಯಕನಾಗಿ ಕಾರ್ಯನಿರ್ವಹಿಸುತ್ತದೆ.
ಗೂಗಲ್ ಮೂಲಕ ಕಾರ್ಯ ನಿರ್ವಹಿಸಬಹುದಾದ ಸರ್ಕಲ್ ಟು ಸರ್ಚ್ ಫೀಚರ್ ಆಪ್ ಗಳನ್ನು ಬದಲಾಯಿಸದೆಯೇ ಯಾವುದನ್ನಾದರೂ ತ್ವರಿತವಾಗಿ ಸರ್ಚ್ ಮಾಡಲು ನಿಮಗೆ ಅನುವು ಮಾಡಿ ಕೊಡುತ್ತದೆ. ನೀವು ಕೇವಲ ಎರಡು ಟ್ಯಾಪ್ ಮೂಲಕ ಚಿತ್ರಗಳು, ವೀಡಿಯೊಗಳು ಅಥವಾ ಪಠ್ಯವನ್ನು ತ್ವರಿತವಾಗಿ ಅನುವಾದಿಸಬಹುದು. ಸರ್ಕಲ್ ಟು ಸರ್ಚ್ ಸಹ ಗಣಿತ ಮತ್ತು ಭೌತಶಾಸ್ತ್ರದ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ.
ಎಐನಿಂದ ನಡೆಸಲ್ಪಡುವ ಗ್ಯಾಲಕ್ಸಿ ಎಸ್ ಪೆನ್ ನ ಏರ್ ಕಮಾಂಡ್ ಮೆನು ಬದಲಾಯಿಸುವ ಅಗತ್ಯವಿಲ್ಲದೇ ಗ್ಯಾಲಕ್ಸಿ ಎಐ ಅಸಿಸ್ಟೆಂಟ್ ಬಳಸಲು ಅನುವು ಮಾಡಿಕೊಡುತ್ತದೆ. ಎಐ ಅಸಿಸ್ಟೆಂಟ್ ಆಪ್ ಗಳನ್ನು ಬುಕ್ ಕವರ್ ಕೀಬೋರ್ಡ್ ನಲ್ಲಿರುವ ಗ್ಯಾಲಕ್ಸಿ ಎಐ ಕೀ ಮೂಲಕ ಸುಲಭವಾಗಿ ಪ್ರವೇಶಿಸಬಹುದು. ವೈಯಕ್ತೀಕರಿಸಿದ ಎಐ ಅನುಭವ ಒದಗಿಸಲು ಬಳಕೆದಾರರು ಸ್ಯಾಮ್ ಸಂಗ್ ನ ಬಿಕ್ಸ್ ಬಿ ಮತ್ತು ಗೂಗಲ್ ನ ಜೆಮಿನಿ ಮಧ್ಯೆ ಸುಲಭವಾಗಿ ಬದಲಾಯಿಸಿಕೊಳ್ಳುವ ಅವಕಾಶ ಒದಗಿಸಲಾಗಿದೆ.
ಗ್ಯಾಲಕ್ಸಿ ಟ್ಯಾಬ್ ಎಸ್10 ಸರಣಿಯನ್ನು ಸ್ಯಾಮ್ ಸಂಗ್ ನ ಗ್ಯಾಲಕ್ಸಿ ಪರಿಸರ ವ್ಯವಸ್ಥೆಯ ಜೊತೆಗೆ ಸೂಕ್ತವಾಗಿ ಸಂಯೋಜಿಸುವಂತೆ ವಿನ್ಯಾಸಗೊಳಿಸಲಾಗಿದ್ದು. ಕರೆ ಮಾಡುತ್ತಿರುವಾಗ ಆಗಲಿ, ಸಂದೇಶಗಳಿಗೆ ಉತ್ತರಿಸುತ್ತಿರುವಾಗ ಆಗಲಿ ಅಥವಾ ಒಂದು ಸಾಧನದಿಂದ ಇನ್ನೊಂದು ಸಾಧನಕ್ಕೆ ಕೆಲಸಗಳನ್ನು ಕಳುಹಿಸುವಾಗಲೇ ಆಗಲಿ ಬಳಕೆದಾರರು ಗ್ಯಾಲಕ್ಸಿ ಸಾಧನಗಳನ್ನು ಸಲೀಸಾಗಿ ಬದಲಾಯಿಸಲು ಅನುವು ಮಾಡಿಕೊಡುತ್ತದೆ.
ಗ್ಯಾಲಕ್ಸಿ ಟ್ಯಾಬ್ ಎಸ್10 ಲಭ್ಯತೆ, ಬೆಲೆ ಮತ್ತು ಆಫರ್ ಗಳು
2024ರ ಸೆಪ್ಟೆಂಬರ್ 27ರಿಂದಲೇ ಗ್ಯಾಲಕ್ಸಿ ಟ್ಯಾಬ್ ಎಸ್10 ಸರಣಿಯ ಪ್ರೀ ಆರ್ಡರ್ ಅನ್ನು samsung.com, ಸ್ಯಾಮ್ಸಂಗ್ ಸ್ಮಾರ್ಟ್ ಕೆಫೆಗಳು ಮತ್ತು ಇತರ ಎಲ್ಲಾ ಪ್ರಮುಖ ಆನ್ಲೈನ್ ಮತ್ತು ಆಫ್ ಲೈನ್ ರಿಟೇಲ್ ಮಳಿಗೆಗಳಲ್ಲಿ ಮಾಡಬಹುದು.