ಬೆಂಗಳೂರು : ಫ್ಲಿಪ್ಕಾರ್ಟ್ ಕಂಪನಿಯ ಅಧೀನ ಸಂಸ್ಥೆಯಾಗಿರುವ ಕ್ಲಿಯರ್ಟ್ರಿಪ್ ದಿ ಬಿಗ್ ಬಿಲಿಯನ್ ಡೇಸ್ (ಟಿಬಿಬಿಡಿ) ಸಂದರ್ಭದಲ್ಲಿ ಸೆಪ್ಟೆಂಬರ್ 26ರಿಂದ ಅಕ್ಟೋಬರ್ 6ರವರೆಗೆ ತನ್ನ ಬಹು ನಿರೀಕ್ಷಿತವಾದ ವರ್ಷಾಂತ್ಯದ ಟ್ರಾವೆಲ್ ಸೇಲ್ ಕಾರ್ಯಕ್ರಮ ಆಯೋಜಿಸಿದೆ. ಕ್ಲಿಯರ್ಟ್ರಿಪ್ ಸಂಸ್ಥೆಯು ಗ್ರಾಹಕರು ತಮ್ಮ ದೈನಂದಿನ ಜಂಜಾಟದಿಂದ ಹೊರಬಂದು ಕೆಲವು ದಿನ ಅವಶ್ಯ ವಿಶ್ರಾಂತಿ ತೆಗೆದುಕೊಳ್ಳಲು ನೆರವಾಗಲು ಈ ವರ್ಷದ ಹಬ್ಬದ ಸೀಸನ್ ನಲ್ಲಿ ವಿಮಾನಗಳು, ಹೋಟೆಲ್ ಗಳು, ಬಸ್ಗಳು ಮತ್ತು ಹಾಲಿಡೇ ಪ್ಯಾಕೇಜ್ಗಳ ಮೇಲೆ ಉತ್ತಮ ಆಫರ್ ಗಳನ್ನು ನೀಡುತ್ತಿದೆ. ಈ ಮೂಲ ಮೂಲಕ ಭಾರತದ ಪ್ರಯಾಣ ಕ್ಷೇತ್ರದಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ.
ವಸ್ತು ಖರೀದಿಗಳಿಂದ ವಿಶಿಷ್ಟ ಅನುಭವಗಳನ್ನು ಹೊಂದುವುದರ ಕಡೆಗೆ ಗ್ರಾಹಕರ ಆದ್ಯತೆಗಳು ಬದಲಾಗುತ್ತಿವೆ. ಅದಕ್ಕೆ ಪೂರಕವಾಗಿ ಹಬ್ಬದ ಸಂಭ್ರಮಾಚರಣೆ ಸಂದರ್ಭದಲ್ಲಿ ದೂರ ಪ್ರಯಾಣ ಗ್ರಾಹಕರ ಹೆಚ್ಚಿನ ಆದ್ಯತೆಯಾಗಿ ಬದಲಾಗಿದೆ. ಬದಲಾಗಿರುವ ಈ ಟ್ರೆಂಡ್ ಗೆ ಪೂರಕವಾಗಿ ಟಿಬಿಬಿಡಿ ಸಂದರ್ಭದಲ್ಲಿ ಮೌಲ್ಯಾಧರಿತ ಪ್ರಯಾಣದ ಆಫರ್ ಗಳನ್ನು ಸಂಸ್ಥೆಯು ಒದಗಿಸುತ್ತಿದೆ. ಈ ಸೌಲಭ್ಯವು ಹಬ್ಬದ ಸಂದರ್ಭದಲ್ಲಿ ಕೈಗೆಟಕುವ ದರದಲ್ಲಿ ಉತ್ತಮವಾಗಿ ರಜಾ ದಿನಗಳನ್ನು ಕಳೆಯಲು ನೆರವಾಗುತ್ತದೆ.
ಈ ಕುರಿತು ಮಾತನಾಡಿರುವ ಕ್ಲಿಯರ್ಟ್ರಿಪ್ ನ ಚೀಫ್ ಬಿಸಿನೆಸ್ ಆಂಡ್ ಗ್ರೋತ್ ಆಫೀಸರ್ ಅನುಜ್ ರಾಠಿ ಅವರು, “ಭಾರತೀಯ ಗ್ರಾಹಕ ವಲಯದಲ್ಲಿ ನಾವು ಮಹತ್ರವಾದ ಬದಲಾವಣೆಯನ್ನು ಕಾಣುತ್ತಿದ್ದೇವೆ. ಅದರಲ್ಲೂ ವಿಶೇಷವಾಗಿ ಪ್ರಯಾಣ ಕ್ಷೇತ್ರವು ಈ ಬದಲಾವಣೆಯ ಮುಂಚೂಣಿಯಲ್ಲಿದೆ. ಕ್ಲಿಯರ್ಟ್ರಿಪ್ ನಲ್ಲಿ ವಿಮಾನಯಾನ ಸಂಸ್ಥೆಗಳು, ಹೊಟೇಲ್ ಗಳು ಮತ್ತು ಪ್ರಮುಖ ಪ್ರಯಾಣ ಸಂಸ್ಥೆಗಳನ್ನು ಸಂಪರ್ಕಿಸುವ ಸಮಗ್ರ ವ್ಯವಸ್ಥೆಯನ್ನು ನಿರ್ಮಿಸುವ ಮೂಲಕ ನಾವು ಪ್ರಯಾಣ ಕ್ಷೇತ್ರವನ್ನು ಗ್ರಾಹಕರಿಗೆ ಸುಲಭವಾಗಿ, ಕೈಗೆಟಕುವ ದರದಲ್ಲಿ ಒದಗಿಸುವಂತೆ ಮಾಡುತ್ತಿದ್ದೇವೆ. ಈ ಕಾರಣದಿಂದ ನಮ್ಮ ಸಂಸ್ಥೆಯು ಎಲ್ಲರಿಗೂ ಒನ್ ಸ್ಟಾಪ್ ತಾಣವಾಗಿ ರೂಪುಗೊಂಡಿದೆ” ಎಂದು ಹೇಳಿದರು.
ಮಾತು ಮುಂದುವರಿಸಿದ ಅವರು, “ವಿರಾಮ ಕಾರಣಕ್ಕೆ ಪ್ರಯಾಣ ಮಾಡುವ 120 ಮಿಲಿಯನ್ ಪ್ರಯಾಣಿಕರು ಮತ್ತು ವಿದೇಶಗಳಿಗೆ ತೆರಳುವ 27 ಮಿಲಿಯನ್ ಪ್ರಯಾಣಿಕರ ದೊಡ್ಡ ಸಮೂಹವು ಅಂತರರಾಷ್ಟ್ರೀಯ ಪ್ರಯಾಣದ ಮೇಲೆ ಭಾರತದಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ತೋರಿಸುತ್ತದೆ. ಈ ಕಾರಣದಿಂದ ಕ್ಲಿಯರ್ಟ್ರಿಪ್ ತಮ್ಮ ಬಳಕೆದಾರರಿಗೆ ಐಷಾರಾಮಿ ಪ್ರಯಾಣದ ಅನುಭವವನ್ನು ದೊರಕಿಸಲು ಸಹಾಯ ಮಾಡಲು ವಿಶೇಷವಾದ ಸುದೀರ್ಘ ಪ್ರವಾಸೀ ಸ್ಥಳಗಳನ್ನು ಆಯ್ಕೆಯನ್ನು ಒದಗಿಸುತ್ತಿದೆ. ಏರ್ಲೈನ್ಗಳು ಮತ್ತು ಹೋಟೆಲ್ ಸಂಸ್ಥೆಗಳ ಜೊತೆಗಿನ ಸಹಭಾಗಿತ್ವದ ಮೂಲಕ ನಾವು ಈ ವಿಶೇಷವಾಗಿ ಸಿದ್ಧಗೊಳಿಸಿದ, ಉನ್ನತ ಮಟ್ಟದ ಪ್ರವಾಸ ಅನುಭವಗಳನ್ನು ಸುಲಭವಾಗಿ ಮತ್ತು ಕೈಗೆಟುಕುವ ದರದಲ್ಲಿ ಒದಗುವಂತೆ ಮಾಡುತ್ತೇವೆ” ಎಂದು ಹೇಳಿದರು.
ಕ್ಲಿಯರ್ಟ್ರಿಪ್ ಗ್ರಾಹಕರು ಬುಕಿಂಗ್ ದಿನಾಂಕದ ಸಮೀಪದಲ್ಲಿ ಎದುರಿಸುವ ಬೆಲೆ ಏರಿಕೆಯ ಆತಂಕಗಳನ್ನು ತಪ್ಪಿಸಿಕೊಳ್ಳಲು ನೆರವಾಗಲು ಟಿಬಿಬಿಡಿ ಸಂದರ್ಭದಲ್ಲಿ ವಿಶೇಷವಾಗಿ ಸಿದ್ಧ ಪಡಿಸಿದ ಆಫರ್ ಗಳನ್ನು ಒದಗಿಸುತ್ತಿವೆ, ಆ ಆಫರ್ ಗಳ ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ:
ರೂ. 2499 ರಿಂದ ಪ್ರಾರಂಭವಾಗುವ 5-ಸ್ಟಾರ್ ಹೋಟೆಲ್ ವಸತಿಗಳು.
ಹೋಟೆಲ್ಗಳಲ್ಲಿ ಕನಿಷ್ಠ ಶೇ.40 ರಿಯಾಯಿತಿ (ಫ್ಲ್ಯಾಶ್ ಸೇಲ್ – ಪ್ರತಿದಿನ ಸಂಜೆ 7 ಗಂಟೆಗೆ ಆರಂಭ (ರಾತ್ರಿ 9 ರವರೆಗೆ)
ಅಂತರರಾಷ್ಟ್ರೀಯ ಪ್ರವಾಸಿ ತಾಣಗಳ ಬೆಲೆ ರೂ.5999ರಿಂದ ಪ್ರಾರಂಭ.
ಏರ್ ಇಂಡಿಯಾ, ಬ್ರಿಟಿಷ್ ಏರ್ವೇಸ್, ಲುಫ್ತಾನ್ಸ, ಎತಿಹಾದ್ ಇತ್ಯಾದಿ ವಿಮಾನಯಾನಗಳ ಮೇಲೆ ಲಂಡನ್, ಆಸ್ಟ್ರೇಲಿಯಾ ಮತ್ತು ಮ್ಯೂನಿಚ್ನಂತಹ ಸುದೀರ್ಘ ಪ್ರಯಾಣದ ಸ್ಥಳಗಳಿಗೆ ವಿಶೇಷ ದರ ಸೌಲಭ್ಯ.
ದೇಶೀಯ ತಾಣಗಳ ಬೆಲೆ ರೂ. 999ರಿಂದ ಪ್ರಾರಂಭ.
ಚೈಲ್ಡ್ ಫ್ಲೈಸ್ ಫ್ರೀ (ಮಕ್ಕಳ ಪ್ರಯಾಣ ಉಚಿತ) – 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಒಂದು ಮಗುವಿನ ಜೊತೆ ಪ್ರಯಾಣಿಸುವ ಕುಟುಂಬ ಈ ಆಯ್ಕೆಯನ್ನು ಆರಿಸಿಕೊಳ್ಳಬಹುದು (ಫ್ಲ್ಯಾಶ್ ಸೇಲ್ – ಸೀಮಿತ ಅವಧಿಗೆ ಮತ್ತು ಲಭ್ಯತೆಗೆ ಒಳಪಟ್ಟಿರುತ್ತದೆ.)
ಬಾಲಿ, ದುಬೈ, ಮಾಲ್ಡೀವ್ಸ್ ಮತ್ತು ಥೈಲ್ಯಾಂಡ್ನಂತಹ ಸ್ಥಳಗಳಿಗೆ ಪ್ರತಿ ವ್ಯಕ್ತಿಗೆ ರೂ.9999 ರಿಂದ ಪ್ರಾರಂಭವಾಗುವ ಅಂತರರಾಷ್ಟ್ರೀಯ ಹಾಲಿಡೇ ಪ್ಯಾಕೇಜ್ಗಳು.
ಬಸ್ ಬುಕಿಂಗ್ ಗಳ ಮೇಲೆ ಶೇ.30ರವರೆಗೆ ರಿಯಾಯಿತಿ.
ಫ್ಲಿಪ್ಕಾರ್ಟ್ ಮತ್ತು ಮಿಂತ್ರಾ ಬಳಕೆದಾರರು ಹೋಟೆಲ್ ಗಳ ಮೇಲಿನ ಇತರ ರಿಯಾಯಿತಿಗಳ ಜೊತೆಗೆ ಶೇ.15ರವರೆಗೆ ಹೆಚ್ಚುವರಿ ರಿಯಾಯಿತಿಗಳನ್ನು ಪಡೆಯಬಹುದು. ರೂ.1 ದರದಲ್ಲಿ ವಿಮಾನ ರದ್ದತಿ ಮತ್ತು ಸೂಪರ್ ಕಾಯಿನ್ ಗಳ ಜೊತೆ ಜೊತೆಗೆ ರೂ. 1500 ವರೆಗೆ ಹೆಚ್ಚುವರಿ ರಿಯಾಯಿತಿಗಳನ್ನು ಪಡೆದುಕೊಳ್ಳಬಹುದು.
ಕ್ಲಿಯರ್ಟ್ರಿಪ್ ಗ್ರಾಹಕ- ಕೇಂದ್ರಿತ ಹೊಸತನದ ಮೂಲಕ ಪ್ರಯಾಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತರುವುದನ್ನು ಮುಂದುವರೆಸಿದೆ. ಕ್ಲಿಯರ್ಟ್ರಿಪ್ ಫಾರ್ ವರ್ಕ್ ಮತ್ತು ಬಸ್ ಪಾಸ್ ಕಂಪನಿಯ ಇತ್ತೀಚಿನ ಆಫರ್ ಗಳಾಗಿದ್ದು, ಈ ವಿಶೇಷ ಪ್ರಯೋಜನಗಳು ಅತ್ಯಪೂರ್ವ ಅನುಕೂಲತೆ ಒದಗಿಸುವ ಮೂಲಕ ಪ್ರಯಾಣವನ್ನು ಆನಂದದಾಯಕಗೊಳಿಸುವ ಕಂಪನಿಯ ಬದ್ಧತೆಯನ್ನು ತೋರಿಸುತ್ತದೆ. 2023ರಲ್ಲಿ ಪ್ರಾರಂಭವಾದ ಕಂಪನಿಯು ಆರಂಭವಾದಾಗಿನಿಂದಲೂ ಬಸ್ ವಿಭಾಗದಲ್ಲಿ ಮಹತ್ತರವಾದ ಶೇ.150 ಬೆಳವಣಿಗೆಯನ್ನು ಸಾಧಿಸಿದೆ.