ಬೆಂಗಳೂರು : ಭಾರತದ ಪ್ರಮುಖ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಈ ವರ್ಷದ ಹಬ್ಬದ ಸೀಸನ್ ನಲ್ಲಿ ತನ್ನ ಕಾರ್ ಗಳ ಮೇಲೆ ಗ್ರಾಹಕರಿಗೆ ಅದ್ಭುತ ಕೊಡುಗೆಗಳನ್ನು ಒದಗಿಸುವ ಅತಿದೊಡ್ಡ ‘ಕಾರ್ ಗಳ ಉತ್ಸವ’ವನ್ನು ಪ್ರಾರಂಭಿಸಿದೆ. ಈ ಉತ್ಸವದಲ್ಲಿ ಟಾಟಾದ ಹಲವಾರು ಜನಪ್ರಿಯ ಕಾರುಗಳು ಮತ್ತು ಎಸ್ಯುವಿಗಳು ಅಚ್ಚರಿಗೊಳಿಸುವ ರಿಯಾಯಿತಿ ಬೆಲೆಯಲ್ಲಿ ಲಭ್ಯವಾಗಲಿದೆ. ಅದಲ್ಲದೇ ಟಾಟಾ ಶೋರೂಮ್ಗಳಲ್ಲಿ ಗ್ರಾಹಕರಿಗೆ ಹೆಚ್ಚುವರಿಯಾಗಿ ಅನೇಕ ಕೊಡುಗೆಗಳನ್ನು ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಗ್ರಾಹಕರು ₹ 2.05 ಲಕ್ಷದವರೆಗಿನ ಒಟ್ಟು ಪ್ರಯೋಜನಗಳನ್ನು ಪಡೆಯಬಹುದಾಗಿದ್ದು, ಗ್ರಾಹಕರಿಗೆ ತಮ್ಮ ಕನಸಿನ ಕಾರು ಖರೀದಿಸಲು ಇದು ಸುವರ್ಣಾವಕಾಶವಾಗಿದೆ. ಈ ಹಬ್ಬದ ಕೊಡುಗೆಗಳು ಪೆಟ್ರೋಲ್, ಡೀಸೆಲ್ ಮತ್ತು ಸಿಎನ್ಜಿ ಚಾಲಿತ ಎಲ್ಲಾ ಕಾರುಗಳು ಮತ್ತು ಎಸ್ಯುವಿಗಳ ಮೇಲೆ 31 ಅಕ್ಟೋಬರ್ 2024ರವರೆಗೆ ಮಾತ್ರ ಲಭ್ಯವಿವೆ.
ಕಾರ್ ಗಳ ಉತ್ಸವ ಕಾರ್ಯಕ್ರಮ ಕುರಿತು ತಿಳಿಸಿರುವ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ನ ಮುಖ್ಯ ವಾಣಿಜ್ಯ ಅಧಿಕಾರಿ ವಿವೇಕ್ ಶ್ರೀವತ್ಸ ಅವರು, “ಹಬ್ಬದ ಸೀಸನ್ ಆರಂಭವಾಗಿರುವ ಈ ಸಂದರ್ಭದಲ್ಲಿ ನಮ್ಮ ಅಮೂಲ್ಯ ಗ್ರಾಹಕರಿಗೆ ಆಕರ್ಷಕವಾದ ಆಫರ್ಗಳನ್ನು ಒದಗಿಸಲು ನಾವು ಸಂತೋಷಗೊಂಡಿದ್ದೇವೆ. ಈ ವರ್ಷದ ಹಬ್ಬದ ಸಂದರ್ಭದಲ್ಲಿ ಸೀಮಿತ ಅವಧಿಯ ಬೆಲೆ ರಿಯಾಯಿತಿ ಸೌಲಭ್ಯ ಪಡೆಯಬಹುದಾಗಿದ್ದು, ಐಸಿಇ ವಾಹನಗಳ ಮೇಲೆ ₹ 2.05 ಲಕ್ಷದವರೆಗಿನ ಒಟ್ಟು ಪ್ರಯೋಜನಗಳನ್ನು ಪಡೆಯಬಹುದು. ಅದರ ಜೊತೆಗೆ ಆಕರ್ಷಕ ಎಕ್ಸ್ ಚೇಂಜ್ ಆಫರ್ ಮತ್ತು ನಗದು ಪ್ರಯೋಜನಗಳು ಕೂಡ ಲಭ್ಯವಿರುವುದು ವಿಶೇಷ. ಹಾಗಾಗಿ ಹೊಸ ಆರಂಭಕ್ಕೆ ಇದು ಪರಿಪೂರ್ಣ ಸಂದರ್ಭವಾಗಿದೆ. ಗ್ರಾಹಕರು ಟಾಟಾ ಕಾರನ್ನು ಹೊಂದಲು ಈ ಸುವರ್ಣಾವಕಾಶವನ್ನು ಬಳಸಿಕೊಳ್ಳುತ್ತಾರೆ, ಉತ್ತಮ ಸುರಕ್ಷತೆ ಮತ್ತು ವಿನ್ಯಾಸವನ್ನು ಹೊಂದಿರುವ ಕಾರನ್ನು ಮನೆಗೆ ತರುತ್ತಾರೆ ಮತ್ತು ಈ ಹಬ್ಬದ ಋತುವನ್ನು ನಿಜವಾಗಿಯೂ ವಿಶೇಷವಾಗಿಸುತ್ತಾರೆ ಎಂದು ನಾವು ನಂಬಿದ್ದೇವೆ”