ಬೆಂಗಳೂರು : ಆರೋಗ್ಯ ಸೇವಾ ಕ್ಷೇತ್ರದ ಜಾಗತಿಕ ನಾಯಕರಾದ ಅಬಾಟ್, ಭಾರತದಲ್ಲಿ ಸುಮಾರು 70 ಮಿಲಿಯನ್ ಜನರ ಮೇಲೆ ಪರಿಣಾಮ ಬೀರಿರುವ, ಸಾಮಾನ್ಯವಾಗಿ ಕಡೆಗಣನೆಗೆ ಒಳಗಾಗಿರುವ ಬ್ಯಾಲೆನ್ಸ್ ಡಿಸಾರ್ಡರ್ ವರ್ಟಿಗೋ (ತಲೆ ತಿರುಗುವಿಕೆಯ ಸಮಸ್ಯೆ) ಕುರಿತು ಜಾಗೃತಿ ಮೂಡಿಸಲು ‘ಚಕ್ಕರ್ ಕೊ ಚೆಕ್ ಕರ್’ (ಚಕ್ಕರ್ ಬರುವುದನ್ನು ಚೆಕ್ ಮಾಡಿ) ಅಭಿಯಾನವನ್ನು ಪ್ರಾರಂಭಿಸಿದೆ. ವರ್ಟಿಗೋ ಎನ್ನುವುದು ಜನರು ಜಗತ್ತು ತಮ್ಮ ಸುತ್ತಲೂ ತಿರುಗುತ್ತಿದೆ ಎಂದು ಭಾವಿಸುವಂತಹ ಒಂದು ಸ್ಥಿತಿಯಾಗಿದೆ. ಈ ಅಭಿಯಾನದ ಮೂಲಕ ಅಬಾಟ್, ಜನರು ತಮ್ಮ ಆರೋಗ್ಯದ ಮೇಲೆ ಗಮನ ಹರಿಸಲು ಮತ್ತು ಆರೋಗ್ಯ ಸ್ಥಿತಿಯನ್ನು ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.
ವರ್ಟಿಗೋ ಕುರಿತಾದ ದಿಗ್ಭ್ರಮೆಗೊಳಿಸುವ ಸತ್ಯವನ್ನು ಜಗತ್ತಿಗೆ ತಿಳಿಸಲು ಅಬಾಟ್ ಕಂಪನಿಯು ಡಿಜಿಟಲ್ ಫಿಲ್ಮ್ ಮೂಲಕ ಪ್ರಚಾರವನ್ನು ಪ್ರಾರಂಭಿಸಿದೆ. ಈ ಫಿಲ್ಮ್ ನಲ್ಲಿ ಬಾಲಿವುಡ್ ನಟ ಮತ್ತು ಯುನಿಸೆಫ್ ಇಂಡಿಯಾದ ರಾಯಭಾರಿ ಆಯುಷ್ಮಾನ್ ಖುರಾನಾ ಕಾಣಿಸಿಕೊಂಡಿದ್ದಾರೆ.
ವರ್ಟಿಗೋದಿಂದ ಉಂಟಾಗುವ ಅಚಾನಕ್ ತಲೆತಿರುಗುವಿಕೆಯಿಂದ ಆಗಬಹುದಾದ ಬದುಕಿನ ಅಸಮಮತೋಲನದ ಕುರಿತ ಚಿತ್ರಣವನ್ನು ಈ ಫಿಲ್ಮ್ ಹೊಂದಿದೆ. ಜೊತೆಗೆ ಈ ಸಮಸ್ಯೆ ಹೊಂದಿರುವವರು ತಕ್ಷಣ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದು ಪ್ರೇರೇಪಣೆ ನೀಡುತ್ತದೆ.
ಈ ಸಂದರ್ಭದಲ್ಲಿ ತಮ್ಮ ವರ್ಟಿಗೋ ಅನುಭವವನ್ನು ಹಂಚಿಕೊಂಡಿರುವ ಆಯುಷ್ಮಾನ್ ಖುರಾನಾ ಅವರು, “ವರ್ಟಿಗೋ (ತಲೆತಿರುಗುವಿಕೆ) ಅನ್ನು ನಿರ್ವಹಿಸುವುದು ನಿಜಕ್ಕೂ ಒಂದು ಸವಾಲು. ಆದರೆ ಇದು ನನಗೆ ದೃಢವಾಗಿ ಇರುವುದನ್ನು ಕಲಿಸಿದೆ. ನನಗೆ ವರ್ಟಿಗೋ ಇರುವುದು 2016ರಲ್ಲಿ ಪತ್ತೆಯಾಯಿತು. ಆಗ ಪ್ರತೀ ಸಲ ಹಠಾತ್ ಆಗು ನಾನು ಚಲಿಸುವ ಸಂದರ್ಭದಲ್ಲಿ ಜಗತ್ತು ನನ್ನ ಸುತ್ತಲೂ ತಿರುಗುವಂತೆ ಭಾಸವಾಗುತ್ತಿತ್ತು. ಸಿನಿಮಾಗಳ ಬೇಡಿಕೆ ಜಾಸ್ತಿ ಇದ್ದ ಕಾಲದಲ್ಲಿ, ಸತತವಾಗಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳಬೇಕಿದ್ದ ಆ ಸಂದರ್ಭದಲ್ಲಿ ತಲೆತಿರುಗುವಿಕೆಯ ನಿರಂತರ ಭಯ ಕಾಡುತ್ತಿತ್ತು. ಆದರೆ ಸರಿಯಾದ ಸಮಯಕ್ಕೆ ಸರಿಯಾದ ಔಷಧ ಪಡೆದುಕೊಂಡ ಕಾರಣ ಮತ್ತು ಧ್ಯಾನವನ್ನು ಅಳವಡಿಸಿಕೊಂಡ ಕಾರಣ ಆ ಸ್ಥಿತಿಯನ್ನು ನಿರ್ವಹಿಸಲು ನನಗೆ ಸಹಾಯ ಆಯಿತು. ಈ ಸ್ಥಿತಿಯನ್ನು ನಿರ್ವಹಿಸುವು ಕೊಂಚ ಕಠಿಣ ಸ್ಥಿತಿಯಂತೆ ಅನ್ನಿಸಬಹುದು. ಆದರೆ ಇದು ನೀವು ಗೆಲ್ಲಬಹುದಾದ ಯುದ್ಧ ಎಂಬುದನ್ನು ನೀವು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ನನ್ನ ಈ ವರ್ಟಿಗೋ ಪ್ರಯಾಣವು ಇತರರಿಗೆ ಅಗತ್ಯವಿರುವ ಸಹಾಯವನ್ನು ಪಡೆಯಲು ಮತ್ತು ಹೆಚ್ಚು ಆತ್ಮವಿಶ್ವಾಸದಿಂದ ಜೀವನವನ್ನು ಮುನ್ನಡೆಸಲು ಪ್ರೇರೇಪಿಸುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದರು.
ಆಯುಷ್ಮಾನ್ ಅವರ ಅನುಭವ ಸಾಮಾನ್ಯದ್ದಲ್ಲ. ಲಕ್ಷಾಂತರ ಜನರು ಮೌನವಾಗಿಯೇ ಈ ಸ್ಥಿತಿಯಿಂದ ಬಳಲುತ್ತಿದ್ದಾರೆ ಮತ್ತು ಇದನ್ನು ಸಾಮಾನ್ಯ ತಲೆತಿರುಗುವಿಕೆ ಎಂದು ಭಾವಿಸಿ ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ಸರಿಯಾಗಿ ರೋಗನಿರ್ಣಯ ಮಾಡುವುದರಿಂದ ಮತ್ತು ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆಯನ್ನು ಪಡೆಯುವುದರಿಂದ ಹಾಗೂ ಜೀವನಶೈಲಿಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡುವುದರಿಂದ ಈ ಸ್ಥಿತಿಯನ್ನು ನಿರ್ವಹಿಸಬಹುದು ಮತ್ತು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಈ ಕುರಿತು ಮಾತನಾಡಿದ ಅಬಾಟ್ ಇಂಡಿಯಾದ ವೈದ್ಯಕೀಯ ನಿರ್ದೇಶಕ ಡಾ ಜೆಜೋ ಕರಣ್ಕುಮಾರ್, “ಸುಮಾರು 70 ಮಿಲಿಯನ್ ಭಾರತೀಯರು ವರ್ಟಿಗೋ ಸ್ಥಿತಿಯನ್ನು ಅನುಭವಿಸುತ್ತಿದ್ದಾರೆ. ಈ ಬ್ಯಾಲೆನ್ಸ್ ಡಿಸಾರ್ಡರ್ ಜನರ ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಅದನ್ನು ಸೂಕ್ತವಾಗಿ ನಿರ್ವಹಿಸಬಹುದಾಗಿದೆ. ವರ್ಟಿಗೋ ಕುರಿತು ಅರಿವು ಮೂಡಿಸುವ ಮೂಲಕ ವರ್ಟಿಗೋ ಜೊತೆ ಬದುಕುವ ಜನರ ಪ್ರಯಾಣವನ್ನು ಸರಳಗೊಳಿಸುವ ಉದ್ದೇಶವನ್ನು ಅಬಾಟ್ ಹೊಂದಿದೆ ಮತ್ತು ವರ್ಟಿಗೋ ಲಕ್ಷಣಗಳನ್ನು ಗುರುತಿಸಲು ಸಹಾಯ ಮಾಡುವ ಜ್ಞಾನ ಮತ್ತು ಸಾಧನಗಳನ್ನು ಒದಗಿಸಿ ಜನರನ್ನು ಸಬಲಗೊಳಿಸುವ ಗುರಿಯನ್ನು ಹೊಂದಿದೆ. ಆ ಮೂಲಕ ಜನರು ಸಮಯಕ್ಕೆ ಸರಿಯಾಗಿ ವೈದ್ಯಕೀಯ ಸಲಹೆ ಪಡೆಯಲು ಮತ್ತು ಉತ್ತಮ ಜೀವನ ನಡೆಸಲು ಸಾಧ್ಯವಾಗುವ ಅರಿವು ಮೂಡಿಸುವ ಪ್ರಯತ್ನವನ್ನು ಅಬಾಟ್ ಮಾಡಲಿದೆ” ಎಂದು ಹೇಳಿದರು.
ಈ ವರ್ಟಿಗೋ ಜಾಗೃತಿ ಅಭಿಯಾನದ ಭಾಗವಾಗಿ ಅಬಾಟ್ ಐಕ್ಯೂವಿಐಎ ಸಹಯೋಗದೊಂದಿಗೆ ಸಮೀಕ್ಷೆ ನಡೆಸಿದೆ. ಸಮೀಕ್ಷೆಯ ಫಲಿತಾಂಶಗಳು ಭಾರತದಲ್ಲಿ ವರ್ಟಿಗೋ ಜೊತೆ ವಾಸಿಸುವ ಜನರ ಕಷ್ಟವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ಸಮೀಕ್ಷೆಯನ್ನು ಮುಂಬೈ, ದೆಹಲಿ, ಚೆನ್ನೈ, ಬೆಂಗಳೂರು ಮತ್ತು ಕೋಲ್ಕತ್ತಾದಲ್ಲಿನ 1,250 ಜನರ ಒಳನೋಟಗಳನ್ನು ಬಳಸಿ ನಡೆಸಲಾಗಿದೆ. ಸಮೀಕ್ಷೆಯು ವರ್ಟಿಗೋ ಅನುಭವಿಸುತ್ತಿರುವ ಕುಟುಂಬದ ಸದಸ್ಯರು, ವರ್ಟಿಗೋ ರೋಗಿಗಳು ಮತ್ತು ಇನ್ನೂ ರೋಗನಿರ್ಣಯವಾಗದೇ ತಲೆ ತಿರುಗುವ ಅನುಭವ ಎದುರಿಸುತ್ತಿರುವವರನ್ನು ಒಳಗೊಂಡಿತ್ತು.
ವರ್ಟಿಗೋ: ಒಂದು ಮಹತ್ವದ ಹೋರಾಟ
ತಮ್ಮ ಸುತ್ತಲೂ ಅನಿಯಂತ್ರಿತವಾಗಿ ಜಗತ್ತು ತಿರುಗುತ್ತಿರುವುದನ್ನು ಸುಮ್ಮನೆ ಕಲ್ಪಿಸಿಕೊಳ್ಳಿ. ಅದರಿಂದ ಉಂಟಾಗುವ ತಲೆನೋವು, ಎರಡೆರಡು ನಟಗಳು ಮತ್ತು ಕತ್ತಲೆಯ ಭಾವನೆಯನ್ನು ಕೂಡ ಕಲ್ಪನೆ ಮಾಡಿ. ನಿಮ್ಮ ಈ ಕಲ್ಪನೆಯು ವರ್ಟಿಗೋ ಹೊಂದಿರುವ ವ್ಯಕ್ತಿಗಳ ವಾಸ್ತವ ಬದುಕಾಗಿದೆ. ಅಬಾಟ್ ಮತ್ತು ಐಕ್ಯೂವಿಐಎ ಸಮೀಕ್ಷೆಯು ಈ ಸ್ಥಿತಿಯು ಜನರ ಜೀವನದಲ್ಲಿ ವೈಯಕ್ತಿಕವಾಗಿ ಮತ್ತು ಅವರ ಸುತ್ತಮುತ್ತಲಿನ ಜನರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಮೇಲೆ ಬೆಳಕು ಚೆಲ್ಲುತ್ತದೆ.
ವೈಯಕ್ತಿಕ ಜೀವನ: ವರ್ಟಿಗೋ ಕೇವಲ ಜಗತ್ತು ತಿರುಗುವ ಭಾವವನ್ನು ಮಾತ್ರವೇ ಉಂಟುಮಾಡುವುದಿಲ್ಲ. ಜೊತೆಗೆ ಇದು ವೈಯಕ್ತಿಕ ಜೀವನದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಇದರಿಂದಾಗಿ 34% ಜನರು ಪ್ರಮುಖ ಕಾರ್ಯಕ್ರಮಗಳನ್ನು ರದ್ದುಗೊಳಿಸುತ್ತಾರೆ. 33% ಜನರು ಆಗಾಗ್ಗೆ ಕೋಪ, ಕಿರಿಕಿರಿಯನ್ನು ಅನುಭವಿಸುತ್ತಾರೆ. 26% ಜನರು ಕುಟುಂಬದ ಸದಸ್ಯರೊಂದಿಗಿನ ತಮ್ಮ ಸಂಬಂಧಕ್ಕೆ ಹಾನಿಯಾಗಬಹುದು ಎಂಬ ಭಯವನ್ನು ಹೊಂದಿರುತ್ತಾರೆ.
ಪ್ರಚೋದಕ ಅಂಶಗಳು: ಆತಂಕ ಅಥವಾ ಒತ್ತಡ (39%), ಪ್ರಯಾಣ (34%), ಮತ್ತು ಹವಾಮಾನದಲ್ಲಿನ ಬದಲಾವಣೆಗಳು(30%) ವರ್ಟಿಗೋವನ್ನು ಪ್ರಚೋದಿಸಬಹುದಾದ ಕೆಲವು ಅಂಶಗಳು.
ರೋಗಲಕ್ಷಣಗಳು: ಪ್ರತೀ ವರ್ಟಿಗೋ ಸ್ಥಿತಿ ಈ ಲಕ್ಷಣಗಳನ್ನು ಹೊಂದಿರಬಹುದು- ತಲೆನೋವು (52%), ಎರಡೆರಡು ನೋಡ (43%), ಕತ್ತಲಾಗುವ ಭಾವನೆ (40%), ತಲೆ ಭಾರ (37%) ಮತ್ತು ಕುತ್ತಿಗೆ ನೋವು (28%) (ಇವುಗಳನ್ನು ಸೇರಿದಂತೆ ಇನ್ನಿತರ ಹಲವಾರು ರೋಗಲಕ್ಷಣಗಳು ಉಂಟಾಗಬಹುದು. )
ಕುಟುಂಬ ಜೀವನ ಮತ್ತು ಪ್ರಯಾಣ: ವ್ಯಕ್ತಿಯ ಕುಟುಂಬವನ್ನು ನೋಡಿಕೊಳ್ಳುವ ಸಾಮರ್ಥ್ಯಗಳ ಮೇಲೆ ವರ್ಟಿಗೋ ಪರಿಣಾಮ ಬೀರಬಹುದು (23%) ಮತ್ತು ಕುಟುಂಬದಲ್ಲಿ ಕಳೆಯುವ ಗುಣಮಟ್ಟದ ಸಮಯವನ್ನು ಕಡಿಮೆ ಮಾಡುತ್ತದೆ (23%). ಜೊತೆಗೆ ಸಾರ್ವಜನಿಕ ಸಾರಿಗೆ ಅಥವಾ ವಿಮಾನ ಪ್ರಯಾಣ (19%) ಮಾಡುವಾಗ ಇದು ಅಸ್ವಸ್ಥತೆಯನ್ನು ಉಂಟು ಮಾಡುತ್ತದೆ.
ಪರಿಣಾಮಗಳ ಹೊರತಾಗಿಯೂ ರೋಲಕ್ಷಣಗಳ ಕಾರಣದಿಂದ ಕೇವಲ 48% ಜನರು ಮಾತ್ರ ತಲೆ ತಿರುಗುವಿಕೆಯನ್ನು ಪರೀಕ್ಷೆ ಮಾಡಿಸುತ್ತಾರೆ. ಸಾಮಾನ್ಯವಾಗಿ ವರ್ಟಿಗೋ 38 ವರ್ಷ ವಯಸ್ಸಿನಲ್ಲಿ ಕಂಡುಹಿಡಿಯಲಾಗುತ್ತದೆ. ಸುಮಾರು ನಾಲ್ಕನೇ ಒಂದು ಭಾಗದಷ್ಟು ರೋಗಿಗಳು ತಿಂಗಳಿಗೊಮ್ಮೆ ವರ್ಟಿಗೋ ದಾಳಿಯನ್ನು ಅನುಭವಿಸುತ್ತಾರೆ. ಇದಕ್ಕೆ ಸಂಬಂಧಿಸಿ ಕೆಲವು ಮಿಥ್ ಗಳೂ ಇವೆ. 21% ರೋಗಿಗಳು ಈ ಸ್ಥಿತಿಯು ಕೇವಲ ವಯಸ್ಸಾದವರಿಗೆ ಮಾತ್ರ ಉಂಟಾಗುತ್ತದೆ ಎಂದು ನಂಬುತ್ತಾರೆ. ಇನ್ನು 15% ಜನರು ಅದಕ್ಕೆ ಚಿಕಿತ್ಸೆ ಇಲ್ಲವೆಂದೂ ಮತ್ತು ಅದು ಸಾಂಕ್ರಾಮಿಕ ರೋಗವೆಂದೂ ಭಾವಿಸುತ್ತಾರೆ. ಅವರ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರುತ್ತಿದ್ದರೂ ವರ್ಟಿಗೋ ರೋಗಿಗಳಲ್ಲಿ ಅರ್ಧದಷ್ಟು ಜನರು ಮಾತ್ರ ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ವಾಹನಗಳಲ್ಲಿ ಪ್ರಯಾಣಿಸುವುದನ್ನು ತಪ್ಪಿಸುವುದು (34%), ಮತ್ತು ಸ್ಕ್ರೀನ್ ಟೈಮ್ ಅನ್ನು (30%) ಕಡಿಮೆ ಮಾಡುವುದು ಇತ್ಯಾದಿ ಬದಲಾವಣೆ ತರುವುದರಿಂದ ವರ್ಟಿಗೋ ಸಂಭವನೀಯತೆಯನ್ನು ಕಡಿಮೆ ಮಾಡಬಹುದು. ಈ ಮಾಹಿತಿಯು ವರ್ಟಿಗೋ ಜೊತೆ ವಾಸಿಸುವವರು ಎದುರಿಸುತ್ತಿರುವ ಗುಪ್ತ ಹೋರಾಟಗಳ, ಸಂಕಷ್ಟಗಳ ಚಿತ್ರವನ್ನು ನೀಡುತ್ತದೆ.
ಸಮೀಕ್ಷೆಯು ವಿಶೇಷವಾಗಿ ಬೆಂಗಳೂರಿನ ಕುರಿತ ಕುತೂಹಲಕಾರಿ ಮಾಹಿತಿಗಳನ್ನು ಸಹ ಬಹಿರಂಗಪಡಿಸಿದೆ. ಉದಾಹರಣೆಗೆ, ವರ್ಟಿಗೋ ಈ ಪ್ರದೇಶದಲ್ಲಿನ ರೋಗಿಗಳ ವೃತ್ತಿಪರ ಜೀವನದ ಮೇಲೆ ಭಾರಿ ಪರಿಣಾಮ ಬೀರುತ್ತಿದೆ. ಅದರಲ್ಲೂ ಕಡಿಮೆ ಕಾರ್ಯಕ್ಷಮತೆ (31%) ಮತ್ತು ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಸಾಮರ್ಥ್ಯ (22%) ಮತ್ತು ವೃತ್ತಿ ಪ್ರಗತಿ (18%) ಮೇಲೆ ಕೂಡ ಪರಿಣಾಮ ಬೀರುತ್ತದೆ. ಹೆಚ್ಚುವರಿಯಾಗಿ ವರ್ಟಿಗೋ ನಗರದಲ್ಲಿನ ಜನರ ವೈಯಕ್ತಿಕ ಜೀವನದ ಮೇಲೂ ಪರಿಣಾಮ ಬೀರುತ್ತದೆ: 30% ಪ್ರಮುಖ ಕಾರ್ಯಕ್ರಮಗಳನ್ನು ರದ್ದುಗೊಳಿಸಿದರೆ, 35% ಜನರು ಆಗಾಗ್ಗೆ ಕೋಪಗೊಳ್ಳುತ್ತಾರೆ ಅಥವಾ ಕಿರಿಕಿರಿಗೊಳ್ಳುತ್ತಾರೆ.
ಈ ಜಾಗೃತಿ ಉಪಕ್ರಮದ ಭಾಗವಾಗಿ, ಅಬಾಟ್ ಆನ್ಲೈನ್ ಮೌಲ್ಯಮಾಪನ ಸಾಧನವನ್ನು (ಅಸೆಸ್ ಮೆಂಟ್ ಟೂಲ್) ಅನಾವರಣ ಮಾಡಿದೆ. ಇದು ಚಾಟ್ಬಾಟ್ ಆಧಾರಿತ ಸಮೀಕ್ಷೆಯಾಗಿದ್ದು, ಜನರು ವರ್ಟಿಗೋ ರೋಗಲಕ್ಷಣಗಳನ್ನು ಗುರುತಿಸಲು ಮತ್ತು ಆರಂಭಿಕ ಹಂತದಲ್ಲಿ ಸಮಸ್ಯೆ ಪತ್ತೆ ಹಚ್ಚಲು ಸಹಾಯ ಮಾಡುತ್ತದೆ. ಈ ಸಮೀಕ್ಷೆಯು 7 ಭಾಷೆಗಳಲ್ಲಿ ಲಭ್ಯವಿದೆ (ಇಂಗ್ಲಿಷ್, ಹಿಂದಿ, ಮಲಯಾಳಂ, ಕನ್ನಡ, ತೆಲುಗು, ತಮಿಳು ಮತ್ತು ಬೆಂಗಾಲಿ) ಮತ್ತು ಆ ಟೂಲ್ ಅನ್ನು ಇಲ್ಲಿ ಬಳಸಬಹುದು: ಲಿಂಕ್
ನೀವು ಪ್ರಚಾರ ಅಭಿಯಾನದ ಫಿಲ್ಮ್ ಅನ್ನು ಇಲ್ಲಿ ನೋಡಬಹುದು: ಲಿಂಕ್